ಗುರುವಾರ , ಜೂಲೈ 2, 2020
22 °C

ಡಾಟ್ ಕಾಮ್ ಯುಗ ಅಂತ್ಯ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಡಾಟ್ ಕಾಮ್ ಯುಗ ಅಂತ್ಯ?

ಸಿಂಗಪುರ (ಎಪಿ):  ಇನ್ನು ಎಲ್ಲ ಅಂತರ್ಜಾಲ ತಾಣಗಳು `ಡಾಟ್ ಕಾಮ್~ `ಡಾಟ್ ನೆಟ್~ ಎಂದೇ ಅಂತ್ಯಗೊಳ್ಳಬೇಕಾಗಿಲ್ಲ. ಅಂತರ್ಜಾಲ ತಾಣಕ್ಕೆ ಯಾವುದೇ ಇಚ್ಚಿಸಿದ ಹೆಸರು ಇಟ್ಟುಕೊಳ್ಳುವ ಅವಕಾಶ ನೀಡಲು ಅಂತರ್ಜಾಲ ಮೇಲ್ವಿಚಾರಕರು ಸಮ್ಮತಿಸಿದ್ದಾರೆ.ಅಂತರ್ಜಾಲ ತಾಣಗಳು ಪ್ರಾರಂಭಗೊಂಡು 26 ವರ್ಷಗಳ ಬಳಿಕ ಈ ಸಡಿಲಿಕೆ ಕಾರ್ಯಗತವಾಗಿದೆ. ಇಲ್ಲಿ ನಡೆದ ಇಂಟರ್‌ನೆಟ್ ಕಾರ್ಪೊರೇಷನ್ ಫಾರ್ ಅಸೈನ್ಡ್ ನೇಮ್ಸ ಆ್ಯಂಡ್ ನಂಬರ್ಸ್‌ ಸಂಸ್ಥೆಯ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ.ಇದರ ಅನ್ವಯ ಇನ್ನು `ಡಾಟ್ ಕಾಮ್~ `ಡಾಟ್ ನೆಟ್~ ಬದಲು ಯಾವುದೇ ಭಾಷೆಯ, ಯಾವುದೇ ಲಿಪಿಯ ಹೆಸರನ್ನು ಇಟ್ಟುಕೊಳ್ಳಬಹುದಾಗಿದೆ. ಉದಾಹರಣೆಗೆ ಇನ್ನು `ಡಾಟ್ ಐಪ್ಯಾಡ್~ ಅಥವಾ `ಡಾಟ್ ಆ್ಯಪಲ್~ ಎಂದು ಹುಡುಕಿದಲ್ಲಿ ಗ್ರಾಹಕರಿಗೆ ಆಯಾ ಅಂತರ್ಜಾಲ ತಾಣಗಳು ನೇರವಾಗಿ ಎಟುಕಲಿದೆ.

ಈ ನಿರ್ಧಾರದಿಂದ ಅಂತರ್ಜಾಲದಲ್ಲಿ ಹೊಸ ಯುಗ ಆರಂಭವಾಗಲಿದೆ ಎಂದು ಸಂಸ್ಥೆಯ ಮುಖ್ಯಸ್ಥ ಪೀಟರ್ ಡೆಂಗೇಟ್ ಥ್ರಷ್ ತಿಳಿಸಿದ್ದಾರೆ.1984ರಲ್ಲಿ `ಡಾಟ್ ಕಾಮ್~ ಯುಗ ಆರಂಭವಾದ ಬಳಿಕ ನಡೆದ ಅತ್ಯಂತ ದೊಡ್ಡ ಬದಲಾವಣೆ ಇದು ಎಂದು ವಿಶ್ಲೇಷಿಸಲಾಗಿದೆ. ಸುಮಾರು 6 ವರ್ಷಗಳ ಮಾತುಕತೆಗಳ ನಂತರ ಈ ನಿರ್ಧಾರಕ್ಕೆ ಬರಲಾಗಿದೆ. ಹೊಸ ಅಂತರ್ಜಾಲ ತಾಣಗಳ ಹೆಸರುಗಳು ಟ್ರೇಡ್‌ಮಾರ್ಕ್ ಹಾಗೂ ಕಾಪಿರೈಟ್‌ಗಳನ್ನು ಉಲ್ಲಂಘನೆ ಮಾಡಬಹುದು ಎಂಬ ಆತಂಕದಿಂದ ಈ ನಿರ್ಧಾರ ತೆಗೆದುಕೊಳ್ಳಲು ಇಷ್ಟು ವಿಳಂಬವಾಗಿತ್ತು.ತಮ್ಮ ಅಂತರ್ಜಾಲ ತಾಣಗಳ ಹೆಸರು ಬದಲು ಮಾಡಬಯಸುವವರು ಮುಂದಿನ ವರ್ಷ  1,85,000 ಅಮೆರಿಕ್ ಡಾಲರ್‌ನೊಂದಿಗೆ ಅರ್ಜಿ ಸಲ್ಲಿಬಹುದಾಗಿದೆ.ಈ ನಿರ್ಧಾರ ಕಂಪೆನಿಗಳಿಗೆ ತಮ್ಮ ಬ್ರ್ಯಾಂಡ್‌ಗಳ ಮೇಲೆ ಹೆಚ್ಚಿನ ನಿಯಂತ್ರಣ ಹೊಂದಲು ಸಾಧ್ಯವಾಗುತ್ತದೆ ಎಂದು ಐಟಿ ಮ್ಯಾನೇಜರ್‌ಗಳು ಅಭಿಪ್ರಾಯಪಟ್ಟಿದ್ದಾರೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.