‘ಕನ್ನಡ ಚಿತ್ರರಂಗದಲ್ಲಿ ನನಗೆ ಐಡೆಂಟಿಟಿ ತಂದುಕೊಟ್ಟಿದ್ದೇ ಐಟಂ ಸಾಂಗ್ಗಳು’ ಎನ್ನುವ ಡಾನ್ಸರ್ ಅಲಿಶಾ, ಐಟಂ ನಂಬರ್ಗಳೂ ಐಡೆಂಟಿಟಿ ತಂದುಕೊಡುತ್ತವೆ ಎಂದು ನಂಬಿದವರು. ಹಾಗಾಗಿ, ಆಕೆ ಮುಂದೆಯೂ ಇಂತಹ ನೃತ್ಯಗಳಲ್ಲಿ ಕಾಣಿಸಿಕೊಳ್ಳುವ ಬಯಕೆ ವ್ಯಕ್ತಪಡಿಸುತ್ತಾರೆ. ರೂಪದರ್ಶಿಯಾಗಿ ವೃತ್ತಿಜೀವನ ಆರಂಭಿಸಿದ ಅಲಿಶಾ ಚಿತ್ರರಂಗದಲ್ಲಿ ನಿಧಾನವಾಗಿ ಬೇಡಿಕೆ ಕುದುರಿಸಿಕೊಳ್ಳುತ್ತಿದ್ದಾರೆ. ಐಟಂ ನಂಬರ್ ಅಂದರೆ ಕೇವಲ ದೇಹಸಿರಿ ಪ್ರದರ್ಶಿಸುವುದಲ್ಲ. ಅದಕ್ಕಿಂತಲೂ ಭಿನ್ನವಾದುದು ಎನ್ನುವ ಈಕೆ ತಮ್ಮ ನೃತ್ಯದ ಗೀಳು, ನಟನೆ ಮತ್ತು ಫಿಟ್ನೆಸ್ ಕುರಿತು ಮಾತನಾಡಿದ್ದಾರೆ.

‘ಮಂಗಳೂರಿನವಳು ನಾನು. ಮೊದಲಿನಿಂದಲೂ ಡಾನ್ಸರ್ ಆಗಬೇಕು ಎಂಬ ಆಸೆಯಿತ್ತು. ಹಾಗಾಗಿ ಮಾಡೆಲಿಂಗ್ನಿಂದ ಬಣ್ಣದ ಜಗತ್ತಿನತ್ತ ಮಗ್ಗಲು ಬದಲಿಸಿದೆ. ನನ್ನ ಆಸೆ ಫಲಿಸಿದ್ದು ಕನ್ನಡ ಚಿತ್ರರಂಗದಲ್ಲಿ. ಈವರೆಗೂ 12ಕ್ಕೂ ಅಧಿಕ ಐಟಂ ಸಾಂಗ್ಗಳನ್ನು ಮಾಡಿದ್ದೇನೆ. ಈ ಬಗ್ಗೆ ಖುಷಿಯಿದೆ. ಈಚೆಗೆ ತೆರೆಕಂಡ ‘ಅಮಾನುಷ’ ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದೆ. ಈ ಚಿತ್ರದಲ್ಲಿನ ನನ್ನ ಅಭಿನಯದ ಬಗ್ಗೆ ಕೆಲವರು ಮೆಚ್ಚುಗೆ ವ್ಯಕ್ತಪಡಿಸಿದರು. ‘ಕ್ವಾಟ್ಲೆ’, ‘ನಗೆಬಾಂಬ್’ ಚಿತ್ರಗಳಲ್ಲೂ ನಟಿಸಿದ್ದೆ. ಈಗ ಹೊಸದಾಗಿ ‘ಲೂಟಿ’, ‘ಮಿಸ್ ಕಾಲ್’, ‘ಮಿರ್ಚಿ ಮಂಡಕ್ಕಿ ಖಡಕ್ ಚಾಯ್’ ಚಿತ್ರಗಳಲ್ಲಿ ಐಟಂ ಸಾಂಗ್ಗೆ ಮಾಡಿದ್ದೇನೆ. ಹಾಗೆಯೇ, ತಂಬಿ ಕೊರಿಯೋಗ್ರಫಿ ಮಾಡಿರುವ ತಮಿಳು ಚಿತ್ರವೊಂದರಲ್ಲೂ ಜನಪದ ನೃತ್ಯಕ್ಕೆ ಕುಣಿದಿದ್ದೇನೆ. ಯಶ್ ಅಭಿನಯದ ‘ಗಜಕೇಸರಿ’ ಚಿತ್ರದಲ್ಲಿ ಒಂದು ಪುಟ್ಟ ಪಾತ್ರ ನಿರ್ವಹಿಸಿದ್ದೇನೆ.

ಐಟಂ ಡಾನ್ಸ್ ಮಾಡುವುದಕ್ಕೆ ನೃತ್ಯ ಪಟ್ಟುಗಳು ಗೊತ್ತಿರಬೇಕು. ಹಾಗಾಗಿ, ನಾನು ಕೂಡ ಕೇರಳ ಹಾಗೂ ಮಂಗಳೂರಿನಲ್ಲಿ ನೃತ್ಯಾಭ್ಯಾಸ ಮಾಡಿದೆ. ಪ್ರತಿಯೊಂದು ಐಟಂ ಸಾಂಗ್ ಮಾಡುವಾಗಲೂ ಹೊಸ ಅನುಭವ ದಕ್ಕುತ್ತದೆ. ಪ್ರತಿ ಸಂದರ್ಭದಲ್ಲೂ ಹೊಸತನ್ನು ಕಲಿಯುತ್ತಾ ಹೋಗುತ್ತೇನೆ. ಐಟಂ ಸಾಂಗ್ಗೂ ಒಂದು ಲಾಲಿತ್ಯ ಇದೆ. ಇಂತಹ ನೃತ್ಯಗಳಿಗೆ ಹೆಜ್ಜೆ ಹಾಕಲು ನನಗೆ ಅಭ್ಯಂತರವೇನೂ ಇಲ್ಲ. ಐಟಂ ನಂಬರ್ ಅಂದ್ರೆ ಕೇವಲ ದೇಹಸಿರಿ ಪ್ರದರ್ಶಿಸುವುದಲ್ಲ ಎಂಬುದು ನನ್ನ ನಂಬಿಕೆ. ಅದಕ್ಕಿಂತಲೂ ಭಿನ್ನವಾದ ನೃತ್ಯವಿದು.

ಕನ್ನಡ ಚಿತ್ರರಂಗ ನನಗೆ ಬದುಕು ಕೊಟ್ಟಿದೆ. ಇಲ್ಲಿನವರು ಪ್ರೀತಿಯಿಂದ ಕಾಣುತ್ತಾರೆ. ನೃತ್ಯ–ನಟನೆ ಎರಡೂ ನನಗೆ ಇಷ್ಟ. ಐಟಂ ಸಾಂಗ್ಗಳಲ್ಲಿ ಕಾಣಿಸಿಕೊಳ್ಳುವುದೆಂದರೆ ತುಂಬಾನೇ ಇಷ್ಟ. ಚಿತ್ರರಂಗದಲ್ಲಿ ನನಗೊಂದು ಐಡೆಂಟಿಟಿ ತಂದು ಕೊಟ್ಟಿದ್ದೇ ಐಟಂ ನಂಬರ್ಗಳು. ನಾನು ಐಟಂ ನೃತ್ಯದಲ್ಲಿ ಕಾಣಿಸಿಕೊಳ್ಳುತ್ತೇನೆ ಎಂದು ಚಿತ್ರರಂಗದಲ್ಲಿ ಯಾರೂ ನನ್ನನ್ನು ಕೀಳು ಭಾವನೆಯಿಂದ ಕಾಣುವುದಿಲ್ಲ. ಇಲ್ಲಿ ನಾನು ತುಂಬ ಖುಷಿಯಾಗಿದ್ದೇನೆ. ಹಾಗಾಗಿ, ಮುಂದೆಯೂ ಐಟಂ ಸಾಂಗ್ಗಳಲ್ಲಿ ಕಾಣಿಸಿಕೊಳ್ಳುವ ಆಸೆ ನನಗಿದೆ.

ಗ್ಲಾಮರ್, ಡಿ–ಗ್ಲಾಮರ್, ಹಳ್ಳಿ ಹುಡುಗಿ, ಮಾಡ್ ಹೀಗೆ ಯಾವುದೇ ಪಾತ್ರವಾದರೂ ಸರಿ ಬಣ್ಣ ಹಚ್ಚುತ್ತೇನೆ. ಪಾತ್ರ ಯಾವ ರೀತಿಯ ದಿರಿಸು ಬೇಡುತ್ತದೆಯೋ ಅದನ್ನು ಹಾಕಲು ನಾನು ಸಿದ್ಧ. ಒಂದೇ ಬಗೆಯ ಪಾತ್ರಕ್ಕೆ ಅಂಟಿಕೊಂಡಿರುವುದು ನನಗೆ ಇಷ್ಟವಿಲ್ಲ. ತೆರೆಯ ಮೇಲೆ ನಾನು ಈಜುಡುಗೆಯಲ್ಲೂ ಕಾಣಿಸಿಕೊಳ್ಳಲು ರೆಡಿ.

ಬಣ್ಣದ ಜಗತ್ತಿನಲ್ಲಿರುವವರು ಅಂದಮೇಲೆ ಫಿಟ್ನೆಸ್ ಕಾಯ್ದುಕೊಳ್ಳುವುದು ಮುಖ್ಯ. ನಾನೂ ವಾರದಲ್ಲಿ ಮೂರು ದಿನ ತಪ್ಪದೇ ಜಿಮ್ಗೆ ಹೋಗುತ್ತೇನೆ. ಕಾರ್ಡಿಯೋ, ಅಬ್ಸ್, ಬ್ಯಾಕ್, ವೆಯ್ಟ್ಸ್ ಮೊದಲಾದ ಕಸರತ್ತು ಮಾಡಿ ಜಿಮ್ನಲ್ಲಿ ಬೆವರಿಳಿಸುತ್ತೇನೆ. ಒಂದು ಗಂಟೆ ಜಿಮ್ ಮಾಡುವುದು ಮತ್ತು ನಿತ್ಯವೂ ಒಂದು ಗಂಟೆ ಈಜುವ ಹವ್ಯಾಸ ಇರಿಸಿಕೊಂಡಿರುವುದು ನನ್ನ ದೇಹವನ್ನು ಫಿಟ್ ಆಗಿ ಇರಿಸಿದೆ.

ಬೆಳಿಗ್ಗೆ ಎದ್ದ ತಕ್ಷಣ ನೀರು ಕುಡಿಯುವುದು ನನ್ನ ಅಭ್ಯಾಸ. ಚೆನ್ನಾಗಿ ನೀರು ಕುಡಿಯುವುದರಿಂದ ದೇಹ ಕಾಂತಿ ಕಾಯ್ದುಕೊಳ್ಳಬಹುದು. ಹಸಿರು ಕಾಳು ಮತ್ತು ಹಣ್ಣುಗಳನ್ನು ಹೆಚ್ಚಾಗಿ ತಿನ್ನುತ್ತೇನೆ. ಸಕ್ಕರೆ ಮತ್ತು ಐಸ್ ಇಲ್ಲದ ಕಿತ್ತಳೆ ಹಣ್ಣಿನ ಜ್ಯೂಸ್, ಗ್ರೀನ್ ಟೀ ಕುಡಿಯುತ್ತೇನೆ. ಮೂರು ಹೊತ್ತು ತಿನ್ನುವ ಊಟವನ್ನು ನಾನು ಆರು ಹೊತ್ತಿಗೆ ವಿಂಗಡಿಸಿಕೊಂಡು ತಿನ್ನುತ್ತೇನೆ. ಬೆಳಿಗ್ಗೆ ತಿಂಡಿಗೆ ಜ್ಯೂಸ್ ಜತೆಗೆ ಬ್ರೆಡ್, ದೋಸಾ ತಿನ್ನುತ್ತೇನೆ. ಮಧ್ಯಾಹ್ನದ ಊಟಕ್ಕೆ ಅನ್ನ/ಚಪಾತಿ ಜತೆಗೆ ಫಿಶ್ ಕರಿ ತಿನ್ನುತ್ತೇನೆ. ಮಟನ್ ತಿನ್ನುವುದಿಲ್ಲ. ಬದಲಾಗಿ, ಚಿಕನ್, ಮೀನು ತಿನ್ನುತ್ತೇನೆ. ಸಂಜೆ ವೇಳೆ ಸ್ನ್ಯಾಕ್ಸ್ ಎಂದು ಬಿಸ್ಕೆಟ್, ಕಡಲೆಬೀಜ ಹಾಗೂ ಗ್ರೀನ್ ಟೀ ಕುಡಿಯುತ್ತೇನೆ. ನಿತ್ಯ ರಾತ್ರಿ 8ಕ್ಕೆ ಊಟ ಮುಗಿಸಿಬಿಡುವುದು ನನ್ನ ರೂಢಿ. ರಾತ್ರಿ ಮೆನುವಿನಲ್ಲಿ ಚಪಾತಿ–ಸಬ್ಜಿ ಮುಖ್ಯವಾಗಿ ಇರುತ್ತದೆ’.

ಸಣ್ಣಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಳ್ಳುವುದಕ್ಕಿಂತ ಐಟಂ ನಂಬರ್ಗಳೇ ಹೆಚ್ಚು ಜನಪ್ರಿಯತೆ ತಂದು ಕೊಡುತ್ತವೆ ಎಂದು ನಂಬಿರುವ ಅಲಿಶಾ, ಪ್ರೇಕ್ಷಕರು ತಮ್ಮ ನೃತ್ಯವನ್ನು ತೆರೆಯ ಮೇಲೆ ನೋಡಿ ಮೆಚ್ಚಿಕೊಂಡರೆ ಸಾಕು ಎಂಬ ಆಸೆ ವ್ಯಕ್ತಪಡಿಸುತ್ತಾರೆ. ಅವರ ಈ ಆಸೆಯೇ ಮತ್ತಷ್ಟು ಐಟಂ ನಂಬರ್ಗೆ ಹೆಜ್ಜೆ ಹಾಕುವ ಕನಸನ್ನು ಅವರ ಮನದಲ್ಲಿ ಬಿತ್ತುತ್ತಿದೆಯಂತೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.