ಚೆನ್ನೈ (ಪಿಟಿಐ/ಐಎಎನ್ಎಸ್): ಸಂಬಂಧ ಕಡಿದುಕೊಳ್ಳುವ ಡಿಎಂಕೆ ನಿರ್ಧಾರದ ಬಗ್ಗೆ ಕಾಂಗ್ರೆಸ್ ಮೌನತಾಳಿದೆ. ಇದವರೆಗೂ ಕಾಂಗ್ರೆಸ್ಸಿನ ಯಾವ ಮುಖಂಡರೂ ಡಿಎಂಕೆ ನಾಯಕರನ್ನು ಸಂಪರ್ಕಿಸುವ ಗೋಜಿಗೆ ಹೋಗಿಲ್ಲ.

ಈ ನಡುವೆ ಡಿಎಂಕೆಯ ಎಲ್ಲಾ ಕೇಂದ್ರ ಸಚಿವರು ಸೋಮವಾರ ನವದೆಹಲಿಗೆ ತೆರಳಿ ಅಧಿಕೃತವಾಗಿ ರಾಜೀನಾಮೆ ಸಲ್ಲಿಸಲಿದ್ದಾರೆ.

‘ದಯಾನಿಧಿ ಮಾರನ್, ಎಂ.ಕೆ.ಅಳಗಿರಿ ಸೇರಿದಂತೆ ನಮ್ಮ ಎಲ್ಲಾ ಆರು ಸಚಿವರು ಸೋಮವಾರ ನವದೆಹಲಿಗೆ ತೆರಳಲಿದ್ದು, ಅಧಿಕೃತವಾಗಿ ರಾಜೀನಾಮೆ ನೀಡಲಿದ್ದಾರೆ’ ಎಂದು ಪಕ್ಷದ ಹಿರಿಯ ಮುಖಂಡ ಹಾಗೂ ಲೋಕಸಭಾ ಸದಸ್ಯ ಟಿ.ಆರ್.ಬಾಲು ತಿಳಿಸಿದರು.

ಯುಪಿಎ ಸರ್ಕಾರದಿಂದ ಹೊರ ಬರಲು ತೀರ್ಮಾನಿಸಿದ ನಂತರ ಕಾಂಗ್ರೆಸ್ನ ಯಾವುದೇ ಮುಖಂಡರೂ ತಮ್ಮನ್ನು ಸಂಪರ್ಕಿಸಿಲ್ಲ ಎಂದೂ ಅವರು ತಿಳಿಸಿದರು. ಈ ಕಗ್ಗಂಟಿಗೆ ಸೋನಿಯಾ ಅವರೇ ಉತ್ತರ ಹುಡುಕುತ್ತಿದ್ದಾರೆ ಎನ್ನಲಾಗಿದೆ.

ಕಾಯ್ದು ನೋಡುವ ತಂತ್ರ: (ನವದೆಹಲಿ ವರದಿ): ಯುಪಿಎ ಸಂಪುಟದಿಂದ ಡಿಎಂಕೆ ಹೊರಹೋಗುವುದಾಗಿ ಹೇಳಿದ್ದರಿಂದ ವಿಚಲಿತವಾಗಿರುವ ಕಾಂಗ್ರೆಸ್ ಅದನ್ನು ತೋರ್ಪಡಿಸಿಕೊಳ್ಳದೇ, ತನ್ನ ಆದ್ಯತೆಗಳ ಬಗ್ಗೆ ‘ಕಾಯ್ದು ನೋಡುವ ತಂತ್ರ’ಕ್ಕೆ ಮೊರೆ ಹೋಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಆದರೆ ತನ್ನ ಬೇಡಿಕೆಯಾದ 63 ಸ್ಥಾನಗಳಿಗೆ ಡಿಎಂಕೆ ಮುಖಂಡರು ಒಪ್ಪಿದರೆ, ಪುನಃ ಮೈತ್ರಿಗೆ ಮುಂದಾಗುವ ಇಂಗಿತವನ್ನು ವ್ಯಕ್ತಪಡಿಸಿದೆ. ಡಿಎಂಕೆ ನಿರ್ಧಾರದಿಂದ ತಲೆದೋರಿರುವ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕಾಂಗ್ರೆಸ್ ಮುಖಂಡರು ಚರ್ಚೆ ನಡೆಸಿದ್ದಾರೆ.

ದೆಹಲಿಯಲ್ಲಿರುವ ಕಾಂಗ್ರೆಸ್ ಮುಖಂಡರು, ಡಿಎಂಕೆಯ ಹೇಳಿಕೆಗಳನ್ನು ಗಮನಿಸುತ್ತಿದ್ದಾರೆ. ಮೈತ್ರಿ ಕುರಿತು ಡಿಎಂಕೆ ಮುಖಂಡರಿಂದ ಇನ್ನೂ ಹೆಚ್ಚಿನ ಪ್ರತಿಕ್ರಿಯೆಯನ್ನು ನಿರೀಕ್ಷಿಸಿದ್ದಾರೆ. ಡಿಎಂಕೆ ನಿರ್ಧಾರವನ್ನು ಆಶ್ಚರ್ಯಕರ ಎಂದಿರುವ ಕಾಂಗ್ರೆಸ್ ವಕ್ತಾರ ಅಭಿಷೇಕ್ ಮನು ಸಿಂಘ್ವಿ ತರಾತುರಿಯಲ್ಲಿ ಪ್ರತಿಕ್ರಿಯೆ ನೀಡುವುದಿಲ್ಲ. ಅನಗತ್ಯ ಹೇಳಿಕೆಗಳು ಸಮಸ್ಯೆಯನ್ನು ಜಟಿಲಗೊಳಿಸುತ್ತವೆ ಎಂದು ಶನಿವಾರ ಹೇಳಿದ್ದರು.

ಯುಪಿಎಗೆ ಆತಂಕ ಇಲ್ಲ- ಮುಲಾಯಂ (ಲಖನೌ ವರದಿ): ಸಂಪುಟದಿಂದ ಡಿಎಂಕೆ ಹೊರ ಬಂದರೂ ಸಹ ಯುಪಿಎ ಸರ್ಕಾರಕ್ಕೆ ಯಾವುದೇ ಆತಂಕ ಇಲ್ಲ. ಸರ್ಕಾರ ನಿರಾತಂಕವಾಗಿ ಮುಂದುವರೆಯಲಿದೆ ಎಂದು ಹೇಳಿರುವ ಸಮಾಜವಾದಿ ಪಕ್ಷದ ಮುಖಂಡ ಮುಲಾಯಂ ಸಿಂಗ್ ಯಾದವ್, ತಮ್ಮ ಪಕ್ಷ ನೀಡಿರುವ ಬೆಂಬಲವನ್ನು ಮುಂದುವರೆಸುವುದಾಗಿ ತಿಳಿಸಿದ್ದಾರೆ.

ಎಐಎಡಿಎಂಕೆ ಬೆಂಬಲ ಅನುಮಾನ (ನವದೆಹಲಿ ವರದಿ): ತಮಿಳುನಾಡು ವಿಧಾನ ಸಭೆ ಚುನಾವಣೆಗೆ ಸಂಬಂಧಿಸಿದಂತೆ ಎಐಎಡಿಎಂಕೆ ಮತ್ತು ಸಿಪಿಐ (ಎಂ) ನಡುವೆ ಶೀಘ್ರವೇ ಒಪ್ಪಂದವಾಗಲಿದ್ದು, ಯುಪಿಎ ನೇತೃತ್ವದ ಕಾಂಗ್ರೆಸ್ಗೆ ಎಐಎಡಿಎಂಕೆ ಬೆಂಬಲ ನೀಡುವ ಲಕ್ಷಣಗಳಿಲ್ಲ ಎಂದು ಸಿಪಿಐ (ಎಂ) ಹೇಳಿದೆ.

ಕಾಂಗ್ರೆಸ್-ಡಿಎಂಕೆ ಮೈತ್ರಿ ಮುರಿದು ಬಿದ್ದಿರುವುದು ಎಡ ಪಕ್ಷಗಳಿಗೆ ಅನುಕೂಲ ಕಲ್ಪಿಸಲಿದೆ ಎಂದು ಕಾರಟ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.