ಮಡಿಕೇರಿ: ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಮಿಷನ್ ಸೇರಿದಂತೆ ವಿವಿಧ ಯೋಜನೆಗಳಡಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಲಕ್ಷಾಂತರ ರೂಪಾಯಿ ಅವ್ಯವಹಾರ ನಡೆಸಿದ್ದಾರೆ ಎಂದು ಆರೋಪಿಸಿರುವ ಕೊಡಗು ಜನಾಂದೋಲನ ವೇದಿಕೆಯ ಅಧ್ಯಕ್ಷ ವಿ.ಪಿ. ಶಶಿಧರ್, ಇನ್ನು 20 ದಿನಗಳಲ್ಲಿ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ತನಿಖೆ ನಡೆಸದಿದ್ದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಎಚ್ಚರಿಸಿದ್ದಾರೆ.

ಬುಧವಾರ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘2010-11ನೇ ಸಾಲಿನಲ್ಲಿ ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಮಿಷನ್ ಯೋಜನೆಯಡಿ ಕುಗ್ರಾಮ ಹಾಗೂ ಅತ್ಯಂತ ಕುಗ್ರಾಮಗಳಲ್ಲಿನ ಆಸ್ಪತ್ರೆಗಳಲ್ಲಿ ಕರ್ತವ್ಯ ನಿರ್ವಹಿಸುವಂತಹ ವೈದ್ಯರು ಹಾಗೂ ಸಿಬ್ಬಂದಿಗೆ ಪ್ರೋತ್ಸಾಹ ನೀಡುವುದಕ್ಕಾಗಿ ಆರು ತಿಂಗಳಿಗೆ 7,57,200 ರೂಪಾಯಿ ಹೆಚ್ಚುವರಿ ಅನುದಾನ ನೀಡಿದೆ. ಆದರೆ, ಡಿಎಚ್ಓ ಸೂರ್ಲಬ್ಬಿ, ಶಾಂತಳ್ಳಿ, ಬಾಳೆಲೆ, ಕುಟ್ಟದಂತಹ ಕುಗ್ರಾಮಗಳನ್ನು ಹೊರತುಪಡಿಸಿ ಮಾದಾಪುರ, ಹುದಿಕೇರಿ, ಮಾಲ್ದಾರೆ ಆಸ್ಪತ್ರೆಗಳನ್ನು ಆಯ್ಕೆ ಮಾಡಿಕೊಂಡು ವೈದ್ಯರೊಂದಿಗೆ ಒಳ ಒಪ್ಪಂದ ಮಾಡಿಕೊಳ್ಳುವ ಮೂಲಕ ನಿರ್ದಿಷ್ಟ ಮೊತ್ತದ ಸಂಭಾವನೆ ವಾಪಸು ಪಡೆದಿದ್ದಾರೆ’ ಎಂದು ದೂರಿದರು.

ಉದಾಹರಣೆಗೆ, ಹುದಿಕೇರಿ ಆಸ್ಪತ್ರೆಯಲ್ಲಿ ಮೂವರು ವೈದ್ಯರಿಗೆ ಆರು ತಿಂಗಳಿಗೆ 1,80,600 ರೂಪಾಯಿ ಸಂಭಾವನೆ ನೀಡಿದರೆ, ಅದರಲ್ಲಿ 2,31,700 ರೂಪಾಯಿಗಳನ್ನು ವಾಪಸು ಪಡೆಯಲಾಗಿದೆ. ಅದೇ ರೀತಿ, ಮಾದಾಪುರ ಹಾಗೂ ಮಾಲ್ದಾರೆ ವೈದ್ಯರು- ಸಿಬ್ಬಂದಿಗಳಿಂದಲೂ ಹಣ ವಾಪಸು ಪಡೆಯಲಾಗಿದೆ. ರಾಜ್ಯ ಹೆದ್ದಾರಿಯಲ್ಲಿರುವ ಸುಂಟಿಕೊಪ್ಪ ಆಸ್ಪತ್ರೆಯನ್ನೂ ಕುಗ್ರಾಮಗಳ ಪಟ್ಟಿಗೆ ಸೇರಿಸಿ ಮೂವರು ವೈದ್ಯರಿಗೆ ತಲಾ 10 ಸಾವಿರದಂತೆ 30 ಸಾವಿರ ರೂಪಾಯಿ ನೀಡಿ ಒಳ ಒಪ್ಪಂದದಂತೆ ಡಿಎಚ್ಓ ಹಣ ವಾಪಸು ಪಡೆಯುವ ಮೂಲಕ ಅವ್ಯವಹಾರ ನಡೆಸಿದ್ದಾರೆ ಎಂದು ಆರೋಪಿಸಿದರು.

ನಿಯಮ ಗಾಳಿಗೆ: ಎಂಟು ಮಂದಿ ‘ಡಿ’ ಗ್ರೂಪ್ ನೌಕರರ ನೇಮಕಾತಿ ಸಂದರ್ಭದಲ್ಲಿಯೂ ನಿಯಮಗಳನ್ನು ಗಾಳಿಗೆ ತೂರಲಾಗಿದೆ. ಖಾಸಗಿ ಸಂಸ್ಥೆಯೊಂದರಿಂದ ಹೊರ ಗುತ್ತಿಗೆ ಮೂಲಕ ‘ಡಿ’ ಗ್ರೂಪ್ ನೌಕರರನ್ನು ನೇಮಕಾತಿ ಮಾಡಿಕೊಳ್ಳಲಾಗಿದೆ. ಆದರೆ, ಇದರಲ್ಲಿ ಅರ್ಧಕ್ಕರ್ಧ ಹೊರ ಜಿಲ್ಲೆಯವರಾಗಿದ್ದಾರೆ. ಆರೋಗ್ಯ ಇಲಾಖೆಯಲ್ಲಿ ಎರಡು ವರ್ಷಗಳ ಹಿಂದೆ ನಿವೃತ್ತಿ ಹೊಂದಿ ಪಿಂಚಣಿ ಪಡೆಯುತ್ತಿರುವ ವ್ಯಕ್ತಿಯೊಬ್ಬರನ್ನು ಕೂಡ ನೇಮಕಾತಿ ಮಾಡಿಕೊಳ್ಳಲಾಗಿದ್ದು, ಸ್ವೇಚ್ಛೆ ಹಾಗೂ ಇಚ್ಛಾನುಸಾರ ನೇಮಕಾತಿ ಪ್ರಕ್ರಿಯೆ ನಡೆಸಲಾಗಿದೆ. ಇದರಲ್ಲಿಯೂ ಸಾಕಷ್ಟು ಅವ್ಯವಹಾರ ನಡೆದಿದೆ ಎಂದು ಶಶಿಧರ್ ದೂರಿದರು.

50 ಸಾವಿರ ಗುಳುಂ: ಜಿಲ್ಲೆಯಲ್ಲಿ ಈ ವರ್ಷ ನಡೆದ ಎರಡು ಹಂತದ ಪಲ್ಸ್ ಪೋಲಿಯೋ ಕಾರ್ಯಕ್ರಮಗಳಿಗೆ ಧ್ವನಿವರ್ಧಕ ಬಳಸಿ ಪ್ರಚಾರ ಮಾಡದಿದ್ದರೂ ಮೂರು ತಾಲ್ಲೂಕುಗಳಿಗೆ ಸೇರಿ ಸುಮಾರು 50 ಸಾವಿರ ರೂಪಾಯಿ ಗುಳುಂ ಮಾಡಲಾಗಿದೆ ಎಂದು ಹೇಳಿದರು.

ಅಲ್ಲದೆ, ಕ್ಷಯ ರೋಗ, ಕುಷ್ಠ ರೋಗ ಕಾರ್ಯಕ್ರಮ ಅಧಿಕಾರಿ, ಅಂಧತ್ವ ನಿವಾರಣೆ, ನಗರ ಪಿಎಚ್ಸಿ ಸೇರಿದಂತೆ ಏಕಕಾಲದಲ್ಲಿ ಆರು ವಿವಿಧ ಹುದ್ದೆಗಳ ಪ್ರಭಾರ ನಿರ್ವಹಿಸುವ ಮೂಲಕ ಡಿಎಚ್ಓ ಹಣ ‘ಡ್ರಾ’ ಮಾಡುತ್ತಿದ್ದಾರೆ. ಒಂದು ಹುದ್ದೆಯ ವಾಹನವೊಂದನ್ನು ಬಾಡಿಗೆಗೆ ನೀಡಿ ಹಣ ಪಡೆಯುತ್ತಿದ್ದಾರೆ. ಮಡಿಕೇರಿ ಮಹದೇವಪೇಟೆಯ ಪ್ರಾಥಮಿಕ ಆರೋಗ್ಯ ಕೇಂದ್ರದ ಬಾಬ್ತಿಗೆ ಕೊಳೆಗೇರಿ ಪ್ರದೇಶದ ಜನರಿಗೆ ಚುಚ್ಚುಮದ್ದು ನೀಡುವ ಕಾರ್ಯಕ್ರಮದಡಿ ಬಿಡುಗಡೆಯಾದ 1.20 ಲಕ್ಷ ರೂಪಾಯಿಗಳನ್ನು ತಮ್ಮ ಖಾತೆಗೆ ವರ್ಗಾವಣೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು. ವೇದಿಕೆಯ ಪದಾಧಿಕಾರಿಗಳಾದ ಅಬ್ದುಲ್ ರಜಾಕ್, ಸುರೇಶ್, ಮೋಹನ್ ಹಾಗೂ ಶ್ರೀನಿವಾಸ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.