ಬರ್ಮಿಂಗ್ಹ್ಯಾಮ್ (ಪಿಟಿಐ): ಕುಡಿದ ಮತ್ತಿನಲ್ಲಿ ಇಂಗ್ಲೆಂಡ್ ಆಟಗಾರ ಜೋ ರೂಟ್ ಅವರ ಮೇಲೆ ಹಲ್ಲೆ ನಡೆಸಿದ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಡೇವಿಡ್ ವಾರ್ನರ್ ಅವರನ್ನು ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಉಳಿದ ಪಂದ್ಯಗಳಿಂದ ಅಮಾನತುಗೊಳಿಸಲಾಗಿದೆ. ಅಷ್ಟು ಮಾತ್ರವಲ್ಲದೇ, ಆ್ಯಷಸ್ ಸರಣಿಯ ಅಭ್ಯಾಸ ಪಂದ್ಯಗಳಿಂದ ಅವರನ್ನು ಹೊರಗಿಡಲಾಗಿದ್ದು, 6.35 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ.

ಘಟನೆಯ ತನಿಖೆ ನಡೆಸಿದ `ಕ್ರಿಕೆಟ್ ಆಸ್ಟ್ರೇಲಿಯಾ' ಈ ಕಠಿಣ ಕ್ರಮ ಕೈಗೊಂಡಿದೆ. ವಾರ್ನರ್ ಮಂಡಳಿಯ ನೀತಿ ಸಂಹಿತೆ ಉಲ್ಲಂಘಿಸಿದ್ದರಿಂದ ಈ ಕ್ರಮ ಕೈಗೊಳ್ಳಲಾಗಿದೆ. ವಿಚಾರಣೆಗೆ ಹಾಜರಾಗಿದ್ದ ಅವರು ತಪ್ಪೊಪ್ಪಿಕೊಂಡಿದ್ದಾರೆ.

`ಘಟನೆಯ ಬಗ್ಗೆ ವಿಚಾರಣೆ ನಡೆಸಿದ ಕ್ರಿಕೆಟ್ ಆಸ್ಟ್ರೇಲಿಯಾದ ನೀತಿ ಸಂಹಿತೆ ಆಯುಕ್ತ ನ್ಯಾಯಮೂರ್ತಿ ಕಾರ್ಡನ್ ಲೂಯಿಸ್ ಈ ನಿರ್ಧಾರ ತೆಗೆದುಕೊಂಡಿದ್ದಾರೆ' ಎಂದು ಪ್ರಕಟಣೆ ತಿಳಿಸಿದೆ.

ಭಾನುವಾರ ನಡೆದ ಟೂರ್ನಿಯ `ಎ' ಗುಂಪಿನ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಆಸ್ಟ್ರೇಲಿಯಾ ಸೋಲು ಕಂಡಿತ್ತು. ಆ ಪಂದ್ಯ ಮುಗಿದ ಬಳಿಕ ಆತಿಥೇಯ ತಂಡದ ಜೋ ರೂಟ್ ಅವರ ಮೇಲೆ ವಾರ್ನರ್ ಬರ್ಮಿಂಗ್ಹ್ಯಾಮ್ನ ಬಾರೊಂದರಲ್ಲಿ ಹಲ್ಲೆ ನಡೆಸಿದ್ದರು.

ವಾರ್ನರ್ ಐಪಿಎಲ್ ವೇಳೆ ಕೂಡ ಸಮಸ್ಯೆಯೊಂದರಲ್ಲಿ ಸಿಲುಕಿದ್ದರು. ಸ್ಪಾಟ್ ಫಿಕ್ಸಿಂಗ್ಗೆ ಸಂಬಂಧಿಸಿದಂತೆ ಆಸ್ಟ್ರೇಲಿಯಾದ ಕ್ರಿಕೆಟ್ ಬರಹಗಾರರನ್ನು ಟ್ವಿಟರ್ನಲ್ಲಿ ಟೀಕಿಸಿದ್ದ ಅವರ ಮೇಲೆ `ಕ್ರಿಕೆಟ್ ಆಸ್ಟ್ರೇಲಿಯಾ' 3.1 ಲಕ್ಷ ರೂಪಾಯಿ ದಂಡ ವಿಧಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.