ಗುರುವಾರ , ಜೂನ್ 24, 2021
29 °C

ತಗ್ಗದ ಬಡವರ ಸಂಖ್ಯೆ: ಆತಂಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಮಕೂರು: ಜಾಗತೀಕರಣ ಯುಗದಲ್ಲಿ ಅನೇಕ ವೈಚಾರಿಕ, ತಂತ್ರಜ್ಞಾನ ಬೆಳವಣಿಗೆಯಾದರೂ ಬಡವರ ಸಂಖ್ಯೆ ಇಳಿಮುಖವಾಗಿಲ್ಲ ಎಂದು ಮುಂಬೈ ಟಾಟಾ ಇನ್ಸ್‌ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸ್ ನಿರ್ದೇಶಕ ಪ್ರೊ.ಪರಶುರಾಮನ್ ಹೇಳಿದರು.ತುಮಕೂರು ವಿಶ್ವವಿದ್ಯಾನಿಲಯವು ಮುಂಬೈ ಟಾಟಾ ಇನ್ಸ್‌ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸ್ ಸಹಯೋಗದಲ್ಲಿ ಶುಕ್ರವಾರ ಸಂಸ್ಥೆ ಆವರಣದಲ್ಲಿ ಆಯೋಜಿಸಿದ್ದ `ಸೋಶಿಯಲ್ ವರ್ಕ್ ಪ್ರಾಕ್ಟೀಸ್ ಇನ್ ಮಲ್ಟಿ ಕಲ್ಚರಲ್ ಕಾಂಟೆಕ್ಸ್ಟ್~ ಸಮ್ಮೇಳನ ಉದ್ಘಾಟಿಸಿ ಮಾತನಾಡಿ, ಸಮಾಜ ಕಾರ್ಯವು ಉದಾರತಾವಾದದ ಸಮಸ್ಯೆಗಳಿಂದಾಗಿ ಹುಟ್ಟಿರುವ ಕೂಸು.ಜಾಗತೀಕರಣದ ಈ ಕಾಲ ಘಟ್ಟದಲ್ಲಿ ತನ್ನನ್ನು ತಾನೇ ಪುನರ್ ನಿರ್ಮಾಣ ಮಾಡಿಕೊಳ್ಳಬೇಕಿದೆ. ಇಂಥ ಸಂದರ್ಭದಲ್ಲಿ ಇತರ ಸಾಮಾಜಿಕ ವಿಜ್ಞಾನಗಳಿಗಿಂತ ಹೆಚ್ಚಿನ ಜವಾಬ್ದಾರಿ ಸಮಾಜ ಕಾರ್ಯದ ಮೇಲಿದೆ ಎಂದರು.ಡರ್ಬಾನ್ ಯೂನಿವರ್ಸಿಟಿ ಆಫ್ ಕ್ವಾಜುಲು-ನಟಾಲ್‌ನ ಸ್ಕೂಲ್ ಆಫ್ ಸೋಶಿಯಲ್ ವರ್ಕ್ ಅಂಡ್ ಕಮ್ಯೂನಿಟಿ ಡೆವೆಲಪ್‌ಮೆಂಟ್‌ನ ಪ್ರೊ.ವಿಶಾಂತಿ ಸೀಪೌಲ್, ಮೂಲೆಗುಂಪಾದ ಸಮುದಾಯಗಳನ್ನು ಅಭಿವೃದ್ಧಿ ಪ್ರಕ್ರಿಯೆಯಲ್ಲಿ ಒಳಗೂಡಿಸುವ ಜವಾಬ್ದಾರಿ ಪ್ರತಿಯೊಂದು ನಾಗರಿಕ ಸಂಘ-ಸಂಸ್ಥೆಗೂ ಇದೆ ಎಂದರು.ವಿ.ವಿ. ಕುಲಪತಿ ಡಾ.ಎಸ್.ಸಿ.ಶರ್ಮಾ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. ವಾಷಿಂಗ್ಟನ್ ವಿ.ವಿ. ಪ್ರೊ.ಶಾಂತಿ ಕೆ.ಕಿಂಡೂಕಾ, ಕರ್ನಾಟಕ ರಾಜ್ಯ ಸಂಸ್ಕೃತ ವಿ.ವಿ.ಕುಲಸಚಿವ ಪ್ರೊ.ವೈ.ಎಸ್.ಸಿದ್ದೇಗೌಡ, ಪ್ರಾಧ್ಯಾಪಕಿ ವಿಮಲಾ ನಾಡಕರ್ಣಿ ಭಾಗವಹಿಸಿದ್ದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.