ಶನಿವಾರ, ಮೇ 15, 2021
24 °C

ತಟಸ್ಥ ಮತದಾರರ ಬವಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪಂಚಾಯತ್ ರಾಜ್ ವ್ಯವಸ್ಥೆ ಜಾರಿಗೆ ಬಂದ ಮೇಲೆ ಗ್ರಾಮ ಮಟ್ಟದಲ್ಲಿ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳಿಗೆ ಇನ್ನಿಲ್ಲದ ಮಹತ್ವ ಬಂದುಬಿಟ್ಟಿದೆ. ಪಂಚಾಯ್ತಿ ಸದಸ್ಯರು ಪಕ್ಷಾತೀತರಾಗಿ ಆಯ್ಕೆಯಾದವರು. ಆದರೆ ಅವರು ಒಂದಲ್ಲ ಒಂದು ರಾಜಕೀಯ ಪಕ್ಷದ ಸದಸ್ಯರು. ಬಹುತೇಕ ಸದಸ್ಯರು ಆ ಆಕ್ಷೇತ್ರದ ಶಾಸಕರ ಸಹಾಯಕರು. ಅವರ ಪರವಾಗಿ ದುಡಿಯುವ ಕಾರ‌್ಯಕರ್ತರು. ಸ್ಥಳೀಯವಾಗಿ ಅವರು `ಮಿನಿ ಶಾಸಕ~ರಿದ್ದಂತೆ. ಅನೇಕರಿಗೆ ಪಂಚಾಯ್ತಿ ಸದಸ್ಯತ್ವವೇ ಜೀವನೋಪಾಯ.ಇತ್ತೀಚಿನ ದಿನಗಳಲ್ಲಿ ಪ್ರತಿಯೊಂದು ಕೆಲಸಕ್ಕೂ ಶಾಸಕರ ಶಿಫಾರಸು ಪತ್ರ ತರುವುದು ಕಡ್ಡಾಯ. ಶಾಸಕರಿಂದ ಪತ್ರ ಪಡೆಯಲು ಈ ಮಿನಿ ಶಾಸಕರ ಶಿಫಾರಸು ಬೇಕು. ಯಾವುದೇ ರಾಜಕೀಯ ಪಕ್ಷದ ಜೊತೆ ಗುರುತಿಸಿಕೊಳ್ಳದೆ ತಟಸ್ಥರಾಗಿರುವ ಮತದಾರರಿಗೆ ಇಂತಹ ಶಿಫಾರಸು ಪತ್ರ ಪಡೆಯುವುದು ನಿಜಕ್ಕೂ ಕಷ್ಟ.ಈಗಿನ ಬಹುತೇಕ ಶಾಸಕರಿಗೆ ತಾವು ಇಡೀ ಕ್ಷೇತ್ರದ ಜನರ ಪ್ರತಿನಿಧಿ ಎಂಬ ಮನೋಭಾವ ಕಡಿಮೆ ಆಗುತ್ತಿದೆ. ಅವರು ತಮ್ಮ ಪಕ್ಷದ ಘೋಷಿತ ಕಾರ್ಯಕರ್ತರು, ಅವರಿಗೆ ಮತ ಹಾಕಿದವರು, ಅವರ ಜಾತಿಯ ಜನರು, ಮಠ ಮಾನ್ಯಗಳ ಬೆಂಬಲಿಗರು ಮಾತ್ರವೇ ಮುಖ್ಯವಾಗುತ್ತಿದ್ದಾರೆ.ಯಾವುದೇ ರಾಜಕೀಯ ಪಕ್ಷ ಅಥವಾ ಸ್ಥಳೀಯ ಮುಖಂಡರ ಜತೆಗೆ ಗುರುತಿಸಿಕೊಳ್ಳದೆ ತಟಸ್ಥರಾಗಿರುವ ಮತದಾರರಿಗೆ ಯಾರೂ ಬೆಲೆ ಕೊಡುವುದಿಲ್ಲ. ಈ ಬೆಳವಣಿಗೆ ದುರದೃಷ್ಟಕರ. ಈ ಪರಿಸ್ಥಿತಿ ಬದಲಾಗುವುದು ಯಾವಾಗ?

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.