ಮಂಗಳವಾರ, ಜನವರಿ 21, 2020
19 °C

ತಸಾದುಕ್‌ ಹುಸೇನ್‌ ಪಾಕ್‌ ಮುಖ್ಯ ನ್ಯಾಯಮೂರ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತಸಾದುಕ್‌ ಹುಸೇನ್‌ ಪಾಕ್‌ ಮುಖ್ಯ ನ್ಯಾಯಮೂರ್ತಿ

ಇಸ್ಲಾಮಾಬಾದ್‌ (ಐಎ­ಎನ್‌ಎಸ್‌): ಪಾಕಿಸ್ತಾನದ ನೂತನ ಮುಖ್ಯ ನ್ಯಾಯ­ಮೂರ್ತಿಯಾಗಿ  ತಸಾದುಕ್‌ ಹುಸೇನ್‌ ಜಿಲ್ಲಾನಿ ಅವರು ಗುರುವಾರ ಪ್ರಮಾಣ ವಚನ ಸ್ವೀಕರಿದರು.ಅಧ್ಯಕ್ಷ ಮಮ್ನೂನ್‌ ಹುಸೇನ್‌ ಅವರ ನಿವಾಸದಲ್ಲಿ ಬೋಧಿಸಲಾದ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಪ್ರಧಾನಿ ನವಾಜ್‌ ಷರೀಫ್‌ ಹಾಗೂ ನಿವೃತ್ತ ಮುಖ್ಯ ನ್ಯಾ. ಇಫ್ತಿಕಾರ್‌ ಮೊಹಮ್ಮದ್‌ ಚೌಧರಿ ಭಾಗವಹಿ­ಸಿದ್ದರು.ಲಾಹೋರಿನವರಾದ ತಸಾ­ದುಕ್‌ ಹುಸೇನ್‌ ಜಿಲ್ಲಾನಿ ರಾಜಕೀಯ­ಶಾಸ್ತ್ರ­ದಲ್ಲಿ ಸ್ನಾತಕೋತ್ತರ ಪದವಿ ಪಡೆದ ನಂತರ, ಪಂಜಾಬ್‌ ವಿವಿ

ಯಿಂದ ಕಾನೂನು ಪದವಿ ಹಾಗೂ ಲಂಡನ್‌ ವಿವಿಯಿಂದ ಸಂವಿಧಾನಿಕ ಕಾನೂನಿನ ಕುರಿತು ಪದವಿ ಪಡೆದವರು.ಲಾಹೋರ್‌ ಹೈಕೋರ್ಟ್‌ನಲ್ಲಿ ನ್ಯಾಯ­ಮೂರ್ತಿ­­­ಯಾಗಿದ್ದ ಅವರು ೨೦೦೪ರಲ್ಲಿ ಸುಪ್ರೀಂಕೋರ್ಟ್‌ಗೆ ನೇಮಕ­ಗೊಂಡಿದ್ದರು.

ಪ್ರತಿಕ್ರಿಯಿಸಿ (+)