ಬುಧವಾರ, ಮೇ 19, 2021
24 °C

ತಾಂತ್ರಿಕ ತೊಂದರೆ: 64 ವಿಮಾನ ರದ್ದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಷಿಕಾಗೊ (ಎಪಿ): ಕಂಪ್ಯೂಟರ್ ಜಾಲದಲ್ಲಿ ಉಂಟಾದ ತಾಂತ್ರಿಕ ತೊಂದರೆಯಿಂದಾಗಿ ಸೌಥ್‌ವೆಸ್ಟ್ ಏರ್‌ಲೈನ್ಸ್ ಸಂಸ್ಥೆಯು ಕನಿಷ್ಠ 64 ವಿಮಾನಗಳ ಸಂಚಾರ ರದ್ದುಗೊಳಿಸಬೇಕಾಯಿತು.ಶುಕ್ರವಾರ ತಡರಾತ್ರಿ ಹೊರಡಬೇಕಿದ್ದ 50 ವಿಮಾನಗಳು ಹಾಗೂ ಶನಿವಾರ ಬೆಳಿಗ್ಗೆ ಹೊರಡಬೇಕಿದ್ದ 14 ವಿಮಾನಗಳ ಸಂಚಾರ ರದ್ದುಗೊಂಡಿತ್ತು. ವಿಮಾನ ಚಾಲನಾ ಸಿಬ್ಬಂದಿ ಸಮಯಕ್ಕೆ ಸರಿಯಾಗಿ ಕೆಲಸಕ್ಕೆ ಹಾಜರಾಗಲು ಸಾಧ್ಯವಾಗದೇ ಇದ್ದುದು ಇದಕ್ಕೆ ಮುಖ್ಯ ಕಾರಣ ಎಂದು ಕಂಪೆನಿಯ ವಕ್ತಾರೆ ಮಿಷೆಲ್ ಆನ್ಯೂ ತಿಳಿಸಿದ್ದಾರೆ.ಇದಲ್ಲದೇ, ಶುಕ್ರವಾರ ರಾತ್ರಿ ಇನ್ನೂ 250 ವಿಮಾನಗಳ ಹಾರಾಟ ವ್ಯತ್ಯಯವಾಯಿತು. ಕಂಪ್ಯೂಟರ್ ಜಾಲದ ತೊಂದರೆಯಿಂದಾಗಿ ಚೆಕ್ ಇನ್, ಬೋರ್ಡಿಂಗ್ ಪಾಸ್ ಮೇಲೆ ಮುದ್ರಿಸುವಿಕೆ, ವಿಮಾನದ ತೂಕದ ಮೇಲೆ ನಿಗಾ ಇಡುವಿಕೆ ಇತ್ಯಾದಿ ಕಾರ್ಯಗಳು ಅಸಾಧ್ಯವಾದವು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.