ಭಾನುವಾರ, ಆಗಸ್ಟ್ 9, 2020
21 °C
ಚೆಲ್ಲಾಪಿಲ್ಲಿ

ತಾನಿಷ್ಕ್ `ಇನರ' ಸಂಗ್ರಹ ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತಾನಿಷ್ಕ್ `ಇನರ' ಸಂಗ್ರಹ ಬಿಡುಗಡೆ

ಜ್ಯೂವೆಲರಿ ಬ್ರಾಂಡ್ ತಾನಿಷ್ಕ್ `ಇನರ' ವಜ್ರಾಭರಣ ಸಂಗ್ರಹವನ್ನು ಬಿಡುಗಡೆ ಮಾಡಿದೆ.ಹೊಸ ತಲೆಮಾರಿನ ವಜ್ರಾಭರಣ ಸಂಗ್ರಹ ಇದಾಗಿದೆ. ಅರೇಬಿಕ್ ಪದ `ಇನರ' ಹೊಳಪು ಅಥವಾ ಬೆಳಕಿನ ಸಂಕೇತವಾಗಿದೆ. ಇನರದ `ಕಾಸ್ಮಿಕ್ ಸ್ವಿರ್ಲ್ಸ್', `ಮೆಟರ್ ಶವರ್' ಮತ್ತು `ಸ್ಟಾರ್ ಬ್ರುಸ್ಟಸ್' ಗಮನ ಸೆಳೆಯುತ್ತದೆ.120ಕ್ಕೂ ಹೆಚ್ಚು ಶೈಲಿಗಳ ಇನರ ಸಂಗ್ರಹ ನೆಕ್ಲೇಸ್, ಬಳೆ, ಕಿವಿಯೋಲೆ, ಮತ್ತು ಕಾಕ್‌ಟೈಲ್ ರಿಂಗ್‌ಗಳನ್ನು ಹೊಂದಿದೆ. ಬೆಲೆ ರೂ2 ಲಕ್ಷದಿಂದ ರೂ6 ಲಕ್ಷ.`ಸಂಶೋಧನಾತ್ಮಕ ವಿನ್ಯಾಸದ ಸಂಗ್ರಹವನ್ನು ಪರಿಚಯಿಸಲು ಸಂತಸವಾಗುತ್ತಿದೆ. ನೈಜ ವಜ್ರಗಳಿಂದ ಕಸೂತಿ ಮಾಡಲಾಗಿದ್ದು, ಈ ಸಂಗ್ರಹ ಸಂಪ್ರದಾಯ ಮತ್ತು ಆಧುನಿಕ ಅಲಂಕಾರದ ಸಮ್ಮಿಲನವಾಗಿದೆ.ವಜ್ರಾಭರಣ ಇಂದು ಪ್ರತಿ ಮಹಿಳೆಯ ಸೌಂದರ್ಯದ ಪ್ರತಿರೂಪವಾಗಿದೆ. ಭಾರತೀಯ ಮಹಿಳೆಯರನ್ನು ಗಮನದಲ್ಲಿಟ್ಟುಕೊಂಡು ಈ ಸಂಗ್ರಹ ರೂಪಿಸಲಾಗಿದೆ' ಎಂದು ತಾನಿಷ್ಕ್ ಚಿಲ್ಲರೆ ಮತ್ತು ಮಾರುಕಟ್ಟೆ ಉಪಾಧ್ಯಕ್ಷ ಸಂದೀಪ್ ಕುಲ್ಹಳ್ಳಿ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.