ಭಾನುವಾರ, ಏಪ್ರಿಲ್ 18, 2021
30 °C

ತಾ.ಪಂ. ನೂತನ ಕಟ್ಟಡ-6ಕೋಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗಂಗಾವತಿ: ನಗರದ ನೆಹರು ಸಾರ್ವಜನಿಕ ಉದ್ಯಾನವನದ ಹಿಂದೆ ಇರುವ ತಾಲ್ಲೂಕು ಪಂಚಾಯಿತಿಯ ನೂತನ ಕಟ್ಟಡ ನಿರ್ಮಾಣಕ್ಕೆ ನಿರ್ಧಾರ ತಳೆದಿದ್ದು, ಸುಮಾರು ರೂ. 6 ಕೋಟಿ ವೆಚ್ಚದಲ್ಲಿ ನೂತನ ಕಟ್ಟಡ ತಲೆ ಎತ್ತಲಿದೆ ಎಂದು ತಾ.ಪಂ. ಅಧ್ಯಕ್ಷ ಶರಣೇಗೌಡ ಪೊಲೀಸ್ ಪಾಟೀಲ್ ಹೇಳಿದರು.

ಸೋಮವಾರ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮಿನಿ ವಿಧಾನಸೌಧದಂತೆ ತಾಲ್ಲೂಕು ಪಂಚಾಯಿತಿಯ ಸುಸಜ್ಜಿತ ಕಟ್ಟಡ ನಿರ್ಮಾಣಕ್ಕೆ ಈಗಾಗಲೆ ಆಡಳಿತ ಮಂಡಳಿಯ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ.

ಇದಕ್ಕೆ ಸುಮಾರು ರೂ, 5.5ರಿಂದ 6 ಕೋಟಿ ಮೊತ್ತದ ಗುರಿ ಹೊಂದಲಾಗಿದೆ. ಈಗಾಗಲೆ ತಾಲ್ಲೂಕು ಪಂಚಾಯಿತಿಯ ಅನುದಾನದಲ್ಲಿ ರೂ, 30 ಲಕ್ಷ ಮೀಸಲಿಡಲಾಗಿದೆ. ಇನ್ನುಳಿದ ಹಣ ಸಂಸದ, ಶಾಸಕರು ಸೇರಿದಂತೆ ಚುನಾಯಿತ ಪ್ರತಿನಿಧಿಗಳ ಬಳಿ ಕೇಳಲಾಗುವುದು ಎಂದರು.

ಮೂರು ಅಂತಸ್ತು: ಮೂರು ಅಂತಸ್ತಿನ ಕಟ್ಟಡ ನಿರ್ಮಿಸುವ ಉದ್ದೇಶವಿದೆ. ಅದಕ್ಕೆ ವಿದ್ಯುತ್ ಚಾಲಿತ ಲಿಫ್ಟ್ ಅಳವಡಿಸುವ ಯೋಚನೆ ಇದೆ. ಮೊದಲ ಮಹಡಿಯಲ್ಲಿನ ಕೋಣೆಗಳಲ್ಲಿ ಇಓ, ಎಡಿ, ಕಂಪ್ಯೂಟರ್ ವಿಭಾಗ, ಸಿಬ್ಬಂದಿಗಳು ಕಾರ್ಯ ನಿರ್ವಹಿಸಲಿದ್ದಾರೆ.  

ಎರಡನೇ ಮಹಡಿಯಲ್ಲಿ ಕನಕಗಿರಿ, ಗಂಗಾವತಿ ಕ್ಷೇತ್ರದ ಶಾಸಕರಿಗೆ ತಲಾ ಒಂದು ಕೊಠಡಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷರಿಗೆ ತಲಾ ಒಂದು ಕೊಠಡಿ ಹಾಗೂ ಸಭೆಗಳಿಗೆ ಪ್ರತ್ಯೇಕ ವಿಶಾಲ ಸಭಾಂಗಣದ ವ್ಯವಸ್ಥೆಯಾಗಲಿದೆ.

ಮೂರನೇ ಅಂತಸ್ತಿನಲ್ಲಿ ಸಂಸದ, ಸಚಿವರು ಬಂದರೆ ವಿಶ್ರಾಂತಿಗೆ ಹವಾನಿಯಂತ್ರಿತ ಒಂದು ಸುಸಜ್ಜಿತ ಕೊಠಡಿ, ಅಡುಗೆ ಮನೆ, ಊಟದ ಕೋಣೆ, ಡೈನಿಂಗ್ ಟೇಬಲ್ ಮೊದಲಾದ ವ್ಯವಸ್ಥೆ ಇರುತ್ತದೆ ಎಂದರು. ಈ ಸಂದರ್ಭದಲ್ಲಿ ಉಪಾಧ್ಯಕ್ಷೆ ಹಿರೇಹನುಮವ್ವ ಮತ್ತು ಸದಸ್ಯರು ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.