ನವದೆಹಲಿ (ಪಿಟಿಐ): ಪ್ರಜೆಗಳಿಗೆ ಏಕರೂಪದ ಗುರುತಿನ ಸಂಖ್ಯೆ ನೀಡುವ `ಆಧಾರ್~ಯೋಜನೆಯು ತಾರತಮ್ಯಕ್ಕೆ ಕಾರಣವಾಗಬಹುದು ಎಂದು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು (ಎನ್ಎಚ್ಆರ್ಸಿ) ಆತಂಕ ವ್ಯಕ್ತಪಡಿಸಿದೆ.

ಕಳೆದ ಡಿಸೆಂಬರ್ನಲ್ಲಿ ಮಂಡನೆಯಾದ `ರಾಷ್ಟ್ರೀಯ ಗುರುತಿನ ಪ್ರಾಧಿಕಾರ~ ಮಸೂದೆ ಕುರಿತಂತೆ ಯಶವಂತ್ ಸಿನ್ಹ ನೇತೃತ್ವದ, ಹಣಕಾಸಿಗೆ ಸಂಬಂಧಿಸಿದ ಸಂಸದೀಯ ಸ್ಥಾಯಿ ಸಮಿತಿಯು ಎನ್ಎಚ್ಆರ್ಸಿ ಅಭಿಪ್ರಾಯ ಕೇಳಿತ್ತು.

ಸೌಲಭ್ಯ ಹಾಗೂ ಸೇವೆಗಳನ್ನು ಬಳಸಿಕೊಳ್ಳಲು ಭಾರತೀಯ ಪ್ರಜೆಗಳಿಗೆ ಏಕರೂಪದ ಗುರುತಿನ ಸಂಖ್ಯೆ ನೀಡಲು ರಾಷ್ಟ್ರೀಯ ಗುರುತಿನ ಪ್ರಾಧಿಕಾರ ರಚನೆ ಪ್ರಸ್ತಾವನೆಯನ್ನು ಈ ಮಸೂದೆಯು ಒಳಗೊಂಡಿದೆ.
ಮಸೂದೆಯಲ್ಲಿ ಪ್ರಸ್ತಾಪಿಸಿರುವ ನಿಯಮಗಳು, `ತಾರತಮ್ಯಕ್ಕೆ ಎಡೆಮಾಡಿಕೊಡುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ~ ಎಂದು ಎನ್ಎಚ್ಆರ್ಸಿ ಹೇಳಿದೆ.

ಮಸೂದೆ ಪ್ರಕಾರ ಆಧಾರ್ ನೋಂದಣಿಯು ಕಡ್ಡಾವಲ್ಲ. ಹಾಗಾಗಿ ನೋಂದಣಿ ಮಾಡಿಕೊಳ್ಳದವರು ವಿವಿಧ ಸೌಲಭ್ಯ ಹಾಗೂಹಾಗೂ ಸೇವೆಯಿಂದ ವಂಚಿತರಾಗುವ ಸಾಧ್ಯತೆ ಇದೆ ಎನ್ನುವುದು ಆಯೋಗದ ತರ್ಕ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.