ನಾವು ನಾವಾಗಿಯೇ ಇರುವ ಖುಷಿ
ನಮ್ಮ ಮನೆಯಲ್ಲಿ ಈಗಾಗಲೇ ವರಮಹಾಲಕ್ಷ್ಮಿ ಹಬ್ಬದ ಸಿದ್ಧತೆ ಶುರುವಾಗಿದೆ. ನಮ್ಮ ಮನೆಯಲ್ಲಿ ಯುಗಾದಿಯನ್ನೂ ಸಂಭ್ರಮದಿಂದ ಆಚರಿಸುತ್ತೀವಿ. ಅದರ ನಂತರ ಅದ್ದೂರಿಯಾಗಿ ಆಚರಿಸುವ ಹಬ್ಬ ವರಮಹಾಲಕ್ಷ್ಮಿ. ಇದರಿಂದ ಹಬ್ಬಗಳ ಸರಣಿ ಶುರುವಾಗುತ್ತದೆ. ಗಣೇಶ ಹಬ್ಬ, ಕೃಷ್ಣಾಷ್ಟಮಿ, ದೀಪಾವಳಿ ಹೀಗೆ ಒಂದರ ಹಿಂದೊಂದು ಹಬ್ಬಗಳು ಬರುತ್ತಲೇ ಇರುತ್ತವೆ.

ಮೊದಲಿನಿಂದಲೂ ನಮ್ಮ ಮನೆಯಲ್ಲಿ ವರಮಹಾಲಕ್ಷ್ಮಿ ಹಬ್ಬವನ್ನು ಆಚರಿಸುವ ಪದ್ಧತಿ ಇದೆ. ಹತ್ತು ಹದಿನೈದು ದಿನಗಳ ಮೊದಲಿನಿಂದ ಮನೆ ಸ್ವಚ್ಛಗೊಳಿಸುವ ಕೆಲಸ ಶುರುವಾಗುತ್ತದೆ. ಹಬ್ಬಕ್ಕೆ ಎರಡು ಮೂರು ದಿನಗಳಿರುವಾಗ ಸಿದ್ಧತೆ ಜೋರಾಗುತ್ತದೆ. ಷಾಪಿಂಗ್, ಪೂಜಾ ಸಿದ್ಧತೆ ಎಲ್ಲವೂ ಶುರುವಾಗುತ್ತದೆ.

ಈ ಸಲ ಮನೆಗೆ ಬಣ್ಣ ಬಳಿಯಲಾಗುತ್ತಿದೆ. ಮನೆಯ ಒಳಾಂಗಣ ವಿನ್ಯಾಸವನ್ನೂ ಬದಲಿಸಿದ್ದಾರೆ. ಆದ್ದರಿಂದ ಈ ಸಲದ ವರಮಹಾಲಕ್ಷ್ಮಿ ಹಬ್ಬ ಇನ್ನೂ ವಿಶೇಷ.

ಹಬ್ಬದ ಹಿಂದಿನ ದಿನ, ಹಬ್ಬದ ದಿನ ಮತ್ತು ಮರುದಿನ– ಈ ಮೂರು ದಿನಗಳ ಕಾಲ ನಾನು ಕೆಲಸಕ್ಕೆ ಹೋಗುವುದಿಲ್ಲ. ಮೂರೂ ದಿನ ಕುಟುಂಬದೊಂದಿಗೆ ಸಮಯ ಕಳೆಯಬೇಕು ಎಂಬುದು ನನ್ನ ಉದ್ದೇಶ. ನಮ್ಮ ಮನೆಯಲ್ಲಿ ಎಲ್ಲರೂ ಆಸ್ತಿಕರು. ದೇವಸ್ಥಾನಕ್ಕೆ ಹೋಗುತ್ತೇವೆ. ದೇವರಿಗೆ ನಡೆದುಕೊಳ್ಳುತ್ತೇವೆ.

ನಮ್ಮ ಮನೆಯಲ್ಲಿ ಅಡುಗೆ ವಿಭಾಗ ಅಮ್ಮನದು. ಪೂಜೆ– ಅಲಂಕಾರದ ವಿಭಾಗ ನನ್ನದು. ಹಿಂದಿನ ದಿನವೇ ಅಲಂಕಾರದ ಸಿದ್ಧತೆ ಮಾಡಿಕೊಳ್ಳುತ್ತೇನೆ. ಬೆಳಿಗ್ಗೆಯೇ ಎದ್ದು ರಂಗೋಲಿ ಹಾಕುವುದು, ತೋರಣ ಕಟ್ಟುವುದು ಮಾಡುತ್ತೇನೆ. ನಂತರ ಕಳಶ ಇಟ್ಟು ಅದಕ್ಕೆ ಲಕ್ಷ್ಮಿ ಮುಖವಾಡ ಇಟ್ಟು ಅಲಂಕಾರ ಮಾಡುತ್ತೇವೆ. ಒಡವೆ– ಹಣವನ್ನೂ ಅಲಂಕಾರಕ್ಕೆ ಬಳಸುತ್ತೇವೆ.

ಅವತ್ತು ಊಟಕ್ಕೆ ಒಬ್ಬಟ್ಟು ವಿಶೇಷ. ಪೂಜೆ ಮಾಡಿ ದೇವಿಗೆ ನೈವೇದ್ಯ ಮಾಡಿ ಕುಟುಂಬದವರೆಲ್ಲ ಸೇರಿ ಊಟ ಮಾಡುತ್ತೇವೆ. ಹಬ್ಬದ ಊಟವಂತೂ ತುಂಬಾ ಚೆನ್ನಾಗಿರುತ್ತದೆ. ಅವತ್ತು ನೋ ಡಯಟ್! ಯಾಕೆಂದರೆ ಹಬ್ಬಕ್ಕೆ ಎರಡು ದಿನ ಇರುವಾಗಲೇ ಷಾಪಿಂಗ್ ಅಲ್ಲಿ, ಇಲ್ಲಿ ಎಂದು ಅಡ್ಡಾಡಿ ಸಾಕಷ್ಟು ವರ್ಕೌಟ್ ಆಗಿರುತ್ತದೆ. ಹಬ್ಬದ ದಿನ ಚೆನ್ನಾಗಿ ತಿಂದು ಮರುದಿನ ನನ್ನ ಟ್ರೇನರ್ಗೆ ‘ಇಷ್ಟು ತಿಂದಿದೀನಿ. ಅದಕ್ಕೆ ತಕ್ಕ ಹಾಗೆ ವರ್ಕೌಟ್ ಮಾಡಿಸು’ ಎಂದು ಹೇಳಿಬಿಡುತ್ತೇನೆ. ಅಲ್ಲಿಗಲ್ಲಿಗೆ ಸರಿಯಾಗುತ್ತದೆ.

ಹಬ್ಬದ ದಿನ ಎಲ್ಲರೂ ಸೇರುವುದೇ ಒಂದು ವಿಶೇಷ. ಉಳಿದ ದಿನ ಎಲ್ಲರೂ ಬ್ಯುಸಿ ಇರುತ್ತಾರೆ. ಅಣ್ಣ ಅವನ ಕೆಲಸದಲ್ಲಿರುತ್ತಾನೆ. ಸಂಬಂಧಿಕರು, ಸ್ನೇಹಿತರು ಎಲ್ಲರೂ ಅವರವರ ಕೆಲಸದಲ್ಲಿ ನಿರತರಾಗಿಬಿಟ್ಟಿರುತ್ತಾರೆ. ಅವರೆಲ್ಲರೂ ಹಬ್ಬದ ನೆಪದಲ್ಲಿ ಒಂದೆಡೆ ಸೇರಿದಾಗ ಆ ದಿನಕ್ಕೆ ಕಳೆ ಬರುತ್ತದೆ. ನಮ್ಮ ಕುಟುಂಬ–ಸ್ನೇಹಿತರ ಜತೆ ನಾವು ನಾವಾಗಿಯೇ ಇರಬಹುದು. ಹೀಗಾಗಿಯೇ ನನಗೆ ವರಮಹಾಲಕ್ಷ್ಮಿ ಹಬ್ಬವೆಂದರೆ ಖುಷಿ.
-ಹರಿಪ್ರಿಯಾ, ನಟಿ

ಅಲಂಕಾರದ ಸಡಗರ
ಶ್ರಾವಣಮಾಸದಲ್ಲಿ ನಾಗರಪಂಚಮಿ ಆದ ಮೇಲೆ ಬರುವ ಹಬ್ಬವೇ ವರಮಹಾಲಕ್ಷ್ಮಿ. ನಮ್ಮ ಮನೆಯಲ್ಲಿ ಶ್ರಾವಣ ಮಾಸದ ಎಲ್ಲ ಹಬ್ಬಗಳನ್ನೂ ಆಚರಿಸುತ್ತೇವೆ. ತಾತನ ಕಾಲದಿಂದಲೂ ವರಮಹಾಲಕ್ಷ್ಮಿ ಪೂಜೆಯನ್ನು ಸಂಭ್ರಮದಿಂದ ಆಚರಿಸುವ ಸಂಪ್ರದಾಯ ಇದೆ.

ಈ ವರ್ಷ 12ನೇ ತಾರೀಖಿಗೆ ಪೂಜೆ ಮಾಡಲು ಸಾಧ್ಯವಾಗುತ್ತಿಲ್ಲ. ಅವತ್ತು ಕೆಲವು ಅನಿವಾರ್ಯ ಕೆಲಸಗಳಿವೆ. ಆದ್ದರಿಂದ 19ನೇ ತಾರೀಖಿಗೆ ಮಾಡುತ್ತಿದ್ದೇನೆ. ಶ್ರಾವಣದ ಎರಡನೇ ಶುಕ್ರವಾರದ ನಂತರ ಯಾವ ಶುಕ್ರವಾರವಾದರೂ ಪೂಜೆ ಮಾಡಬಹುದು.

ವರಮಹಾಲಕ್ಷ್ಮಿಗೆ ಅಲಂಕಾರ ಮಾಡುವುದೆಂದರೆ ನನಗೆ ತುಂಬ ಇಷ್ಟ. ಯಾವಾಗಲೂ ನಾನೇ ಅಲಂಕಾರ ಮಾಡುವುದು. ಆದರೆ ಮಗು ಹುಟ್ಟಿದ ವರ್ಷ ಮಾತ್ರ ನನಗೆ ಮಾಡಲು ಸಾಧ್ಯವಾಗಿರಲಿಲ್ಲ.

ಕಳಶದಲ್ಲಿ ದೇವಿ ವಿಗ್ರಹ ಇಟ್ಟು ಸೀರೆ ಉಡಿಸಿ, ಅಲಂಕಾರ ಮಾಡಿ, ಸಿಹಿತಿಂಡಿ ಮಾಡಿ ಮುತ್ತೈದೆಯರನ್ನು ಕರೆದು ಅವರಿಗೆ ತಾಂಬೂಲ ಕೊಡುತ್ತೇನೆ. ಮನೆಯಲ್ಲಿನ ಎಲ್ಲ ಹೆಣ್ಣುಮಕ್ಕಳಿಗೆ ಕೆಲಸದವರಿಗೆಲ್ಲ ತಾಂಬೂಲ ಕೊಟ್ಟು ಹೊಸ ಬಟ್ಟೆ ಕೊಡುತ್ತೇನೆ.

ಹಬ್ಬದ ಆಚರಣೆ ಒಂದೆಡೆಯಾದರೆ ಕುಟುಂಬದ ಸದಸ್ಯರೆಲ್ಲ ಸೇರುವುದೇ ವಿಶೇಷ. ನಮ್ಮದು ಕೂಡು ಕುಟುಂಬವಾಗಿತ್ತು. ನಲ್ವತ್ತೆರಡು ಜನ ಇದ್ದರು. ಆಮೇಲೆ ಬೇರೆ ಬೇರೆಯಾಗಿ ಇಪ್ಪತ್ತೆರಡು ಜನ ಆದ್ವಿ. ಈಗ ಹನ್ನೆರಡು ಜನ ಇದ್ದೀವಿ. ಈಗಲೂ ಹಬ್ಬದ ದಿನ ನಾವೆಲ್ಲ ಒಂದೆಡೆ ಸೇರುವುದೇ ಖುಷಿ.
ಆದರೆ ವರಮಹಾಲಕ್ಷ್ಮಿ ಹಬ್ಬಕ್ಕೆ ಸರ್ಕಾರಿ ರಜಾ ಇರಲ್ಲ. ಅದೇ ಬೇಜಾರು. ಸಂಜೆ ಹೊತ್ತಿಗೆ ಸ್ನೇಹಿತರು, ಮುತ್ತೈದೆಯರು ಬರುತ್ತಾರೆ.
-ತಾರಾ ಅನೂರಾಧಾ, ನಟಿ

ಪೂಜೆ– ಪಗಡೆ ಮತ್ತು ಊಟ
ನಮ್ಮನೆಯಲ್ಲಿ ವರಮಹಾಲಕ್ಷ್ಮಿ ವ್ರತ ಮಾಡುವುದಿಲ್ಲ. ಆದರೆ ಪೂಜೆ ಮಾಡುತ್ತೇವೆ. ವರಮಹಾಲಕ್ಷ್ಮಿ ಪೂಜೆಗೆ ಮೂರು ದಿನಗಳಿಂದ ಸಿದ್ಧತೆ ಮಾಡಿಕೊಂಡಿರುತ್ತೇವೆ. ಚಿತ್ರೀಕರಣಕ್ಕೆ ಮೊದಲಿನ ಸಿದ್ಧತೆ ಇರುತ್ತದಲ್ಲ, ಆ ಥರ ಸಿದ್ಧತೆ ಮಾಡಿಕೊಂಡಿರುತ್ತೇವೆ.

ನಮ್ಮನೆಯಲ್ಲಿ ಮಡಿ–ಮೈಲಿಗೆ ಜಾಸ್ತಿ. ಇಡೀ ದೇವರ ಮನೆ ತೊಳೆದು ಬಳಿದು ರಂಗೋಲಿ ಹಾಕಿರುತ್ತೇವೆ. ದೀಪಗಳನ್ನೆಲ್ಲ ತೊಳೆದು ಎಣ್ಣೆ ಹಾಕಿ ಇಟ್ಟಿರುತ್ತೇವೆ. ‘ಆ್ಯಕ್ಷನ್’ ಅಂದ ತಕ್ಷಣ ದೀಪ ಹಚ್ಚುವುದೊಂದೇ ಬಾಕಿ.

ಒಂದು ಕಡೆ ಹೂಗಳನ್ನೆಲ್ಲ ತಂದು ನೀರು ಚಿಮುಕಿಸಿ ಇಟ್ಟಿರುತ್ತೇವೆ, ಹುಣಸೆಹುಳಿಯಲ್ಲಿ ಒಡವೆ ತೊಳೆಯುತ್ತೇವೆ. ವ್ರತ ಇಲ್ಲದಿರುವುದರಿಂದ ಮುಖವಾಡ ಇರುವುದಿಲ್ಲ. ನಮ್ಮ ಮನೆಯಲ್ಲಿ ಲಕ್ಷ್ಮಿಯ ಫೋಟೊ ಇದೆ. ಹಬ್ಬದ ದಿನ ಎಲ್ಲ ಒಡವೆಗಳೂ ಅವಳಿಗೆ.

ಇನ್ನೊಂದು ಕಡೆ ನೈವೇದ್ಯಕ್ಕೆ ಸಿದ್ಧತೆ ನಡೆದಿರುತ್ತದೆ. ಸಿಹಿ ತಿನಿಸುಗಳು, ಡ್ರೈಪ್ರೂಟ್ಸ್, ಹೊಸ ಅರಶಿನ ಕುಂಕುಮ ಎಲ್ಲವನ್ನೂ ಹಾಕಿ ಸಿದ್ಧಮಾಡಿಕೊಳ್ಳುವುದು. ಇವೆಲ್ಲ ಪ್ರೀ ಪ್ರೊಡಕ್ಷನ್ ಕೆಲಸಗಳು. ಪೂಜೆಯ ದಿನ ಎಕ್ಸಿಕ್ಯೂಷನ್.

ಮೊದಲು ಒಡವೆ ಹಾಕುವುದು, ಅದರ ಕೆಳಗಡೆ ಹೂಗಳನ್ನು ಹಾಕುವುದು. ಅರಶಿನ ಕುಂಕುಮ, ದೀಪಗಳನ್ನು ಹಚ್ಚುವುದು, ನೈವೇದ್ಯಕ್ಕಿಡುವುದು... ಹೀಗೆ ಲಕ್ಷ್ಮಿ ವಿಶೇಷ ಅಲಂಕಾರಗಳಿಂದ ಕಳೆಗಟ್ಟುತ್ತಾಳೆ.

ಬೆಳಿಗ್ಗೆ ಸ್ನಾನ ಆದ ತಕ್ಷಣ ಕಾಫಿಯನ್ನೂ ಕುಡಿಯದೆ ಪೂಜೆ ಮಾಡಿ, ನೈವೇದ್ಯ ಮಾಡಿ ನೈವೇದ್ಯವನ್ನೇ ಮೊದಲು ಹೊಟ್ಟೆಗೆ ಹಾಕಿಕೊಳ್ಳುತ್ತೇವೆ. ಆಮೇಲೆ ಕಾಫಿ ಕುಡಿಯುವುದು. ಅದಾದ ಮೇಲೆ ಅದ್ದೂರಿಯಾಗಿ ಹಬ್ಬದ ಅಡುಗೆ ಮಾಡುತ್ತೇವೆ. ಹಬ್ಬದ ದಿನ ನಮ್ಮ ಚಿಕ್ಕಮ್ಮ, ಚಿಕ್ಕಪ್ಪ, ಕುಟುಂಬದ ಎಲ್ಲರೂ ಸೇರುತ್ತೇವೆ. ಮಧ್ಯಾಹ್ನದ ಊಟ ಒಟ್ಟಿಗೆ ಮಾಡುತ್ತೇವೆ.

ಪರಸ್ಪರ ಒತ್ತಾಯ ಮಾಡಿಕೊಂಡು ದಿನಕ್ಕಿಂತ ಜಾಸ್ತಿಯೇ ಊಟ ಮಾಡಿರುತ್ತೀವಿ. ‘ಹತ್ ನಿಮಿಷ ರೆಸ್ಟು’ ಎಂದು ಹೇಳಿ ಎಲ್ಲರೂ ಮುಕ್ಕಾಲು ಗಂಟೆ ಗೊರಕೆ ಹೊಡೆಯುತ್ತಾರೆ. ಅದಾದ ಮೇಲೆ ಒಂದು ಸ್ಟ್ರಾಂಗ್ ಕಾಫಿ ಕುಡಿಯುವುದು. ಅದಾದ ಮೇಲೆ ಒಂದಾಟ ಚೌಕಾಬಾರಾ/ ಪಗಡೆ ಆಡುತ್ತೇವೆ. ಆರಂಭದಲ್ಲಿ ಖುಷ್ ಖುಷಿಯಾಗಿ ಶುರುವಾದ ಆಟ ಕೊನೆಕೊನೆಗೆ ವಾದ, ಜಗಳ ಎಲ್ಲವೂ ಆಗಿಬಿಡುತ್ತದೆ. ಬೆಟ್ಟಿಂಗ್ ಕೂಡ ಇರುತ್ತದೆ.

ಮತ್ತೆ ರಾತ್ರಿ ಮಧ್ಯಾಹ್ನ ಮಾಡಿದ್ದ ಹುರುಳಿಕಟ್ಟಿನ ಸಾರನ್ನು ಬಿಸಿ ಮಾಡಿಕೊಂಡು ಇನ್ನೊಂದು ರೌಂಡ್ ಊಟ. ಪೂಜೆ ಹೆಚ್ಚು ಕಮ್ಮಿಯಾದ್ರೂ ಊಟ ಮಾತ್ರ ಟೈಮ್ ಟೈಮ್ಗೆ ಆಗಿಬಿಡುತ್ತದೆ. ಹೀಗೆ ರಾತ್ರಿ ಊಟದೊಂದಿಗೆ ನಮ್ಮ ವರಮಹಾಲಕ್ಷ್ಮಿಯ ಸಂಭ್ರಮ ಮುಗಿಯುತ್ತದೆ.
-ಪದ್ಮಜಾ ರಾವ್, ನಟಿ

ಹಬ್ಬದೂಟವೇ ಚರ್ಚೆಯ ವಿಷಯ
ನಮ್ಮ ಮನೆಯಲ್ಲಿ ವರಮಹಾಲಕ್ಷ್ಮಿ ಹಬ್ಬದಲ್ಲಿ ಕಳಶ ಇಡುವುದಿಲ್ಲ. ಆದರೆ ಪೂಜೆ ಮಾಡುತ್ತೇವೆ. ಅವತ್ತಿನ ದಿನ ಸಿಹಿಕಹಿ ಚಂದ್ರು ಅವರ ಅಣ್ಣಂದಿರೆಲ್ಲ ಸೇರುತ್ತಾರೆ.

ಮಾವ ವರಮಹಾಲಕ್ಷ್ಮಿ ಮಂತ್ರಗಳನ್ನು ಓದುತ್ತಾರೆ. ನಾನು ನನ್ನ ಅತ್ತೆ ಕೂತು ಪೂಜೆ ಮಾಡುತ್ತೇವೆ. ನಂತರ ಒಳ್ಳೆಯ ಅಡುಗೆ ಮಾಡಿ ಊಟ ಮಾಡುತ್ತೇವೆ. ಸ್ನೇಹಿತರು–ಸಂಬಂಧಿಕರೆಲ್ಲ ಬಂದಿರುತ್ತಾರೆ.

ಹಬ್ಬದ ಆಚರಣೆಗಿಂತ ಊಟದ ಸಂಭ್ರಮವೇ ಹೆಚ್ಚು. ಹಬ್ಬಕ್ಕೆ ಏನು ಅಡುಗೆ ಮಾಡಬೇಕು ಎನ್ನುವ ಕುರಿತೇ ಒಂದು ವಾರ ಚರ್ಚೆ ಮಾಡುತ್ತೇವೆ. ನಮ್ಮ ಜತೆಗೆ ಕೆಲಸ ಮಾಡುವವರನ್ನೂ ಊಟಕ್ಕೆ ಕರೆಯುತ್ತೇವೆ.
-ಸಿಹಿಕಹಿ ಗೀತಾ, ನಟಿ

ಕುಟುಂಬದೊಂದಿಗಿನ ಸಂಭ್ರಮ
ನಮ್ಮ ಮನೆಯಲ್ಲಿ ವರಮಹಾಲಕ್ಷ್ಮಿ ಹಬ್ಬವೇ ದೊಡ್ಡ ಹಬ್ಬ. ನನಗೆ ಅಷ್ಟಾಗಿ ಪೂಜೆಯೆಲ್ಲ ಮಾಡಲು ಬರುವುದಿಲ್ಲ. ಅಮ್ಮ ಹೇಳಿಕೊಟ್ಟ ಹಾಗೆ ಮಾಡ್ತೇನಷ್ಟೆ. ನಾಳೆ ವರಮಹಾಲಕ್ಷ್ಮಿ ಹಬ್ಬ ಎಂದರೆ ಹಿಂದಿನ ದಿನ ರಾತ್ರಿಯೇ ಅಮ್ಮ ಎಲ್ಲ ಸಿದ್ಧತೆಯನ್ನೂ ಮಾಡಿರುತ್ತಾರೆ. ಬೆಳಿಗ್ಗೆ ಎದ್ದ ತಕ್ಷಣ ಎಲ್ಲರೂ ಎಣ್ಣೆ ಹಚ್ಚಿ ಸ್ನಾನ ಮಾಡಬೇಕು. ಅದಾದ ಮೇಲೆ ಪೂಜೆ ಇರುತ್ತದೆ.

ದೇವರನ್ನು ಕೂರಿಸಿ, ಮನೆಗೆ ಮುತ್ತೈದೆಯರನ್ನು ಕರೆಸಿ, ನೈವೇದ್ಯಕ್ಕೆ ಇಟ್ಟು, ಪೂಜೆ ಮಾಡಿ ಪ್ರಸಾದ ಕೊಡುವುದು ಸಂಭ್ರಮದ ಭಾಗವೇ ಆಗಿದೆ.
ಹಬ್ಬದ ದಿನವಂತೂ ಸೂಪರ್ ಊಟ ಇರುತ್ತದೆ. ನನಗೆ ಇಷ್ಟವಾದ ತಿಂಡಿಗಳನ್ನೆಲ್ಲ ಮಾಡ್ತಾರೆ ಅಮ್ಮ. ನಂಗೆ ಕೋಸಂಬರಿ ಇಷ್ಟ, ಬಿಸಿಬೇಳೆ ಬಾತ್, ಸ್ವೀಟ್ಸ್, ಫಲಾವ್, ವಡೆ, ಬಜ್ಜಿ ಬೋಂಡಾ ಏನಾದ್ರೂ ಮಾಡಿರ್ತಾರೆ. ಪಾಯಸ ಇರುತ್ತೆ.

ಅದನ್ನೆಲ್ಲ ತಿಂದು ಒಂದು ಸುತ್ತು ನಿದ್ರೆ ಮಾಡುವುದು. ಸಂಜೆ ಕಸಿನ್ಸ್ ಎಲ್ಲಾ ಬರ್ತಾರೆ. ಎಲ್ರೂ ಸೇರುತ್ತೇವೆ. ನಾವೂ ಬೇರೆಯವರ ಮನೆಗೆ ಹೋಗ್ತೀವಿ.
ಹೀಗೆ ನನ್ನ ಬಿಡುವಿಲ್ಲದ ಕೆಲಸದ ನಡುವೆ ವರಮಹಾಲಕ್ಷ್ಮಿ ಹಬ್ಬ ಎನ್ನುವುದು ಕೇವಲ ಸಾಂಪ್ರದಾಯಿಕ ಆಚರಣೆ ಅಷ್ಟೇ ಅಲ್ಲ, ಕುಟುಂಬದ ಎಲ್ಲರ ಜತೆ ಸೇರಿ ಸಂಭ್ರಮಿಸುವ ಸಂದರ್ಭವೂ ಹೌದು.
-ವೈಷ್ಣವಿ, ಕಿರುತೆರೆ ಕಲಾವಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.