ನವದೆಹಲಿ (ಪಿಟಿಐ): ಕಳೆದ ಪಂದ್ಯದಲ್ಲಿ ಸೋಲು ಕಂಡಿರುವ ಮಾಹೇಲ ಜಯವರ್ಧನೆ ನೇತೃತ್ವದ ಕೊಚ್ಚಿ ಟಸ್ಕರ್ಸ್ ಕೇರಳ ತಂಡವೀಗ ಸೋಲಿನ ಕಹಿ ಮರೆತು ಲೀಗ್ ಪಂದ್ಯಗಳ ಪಾಯಿಂಟ್ ಪಟ್ಟಿಯಲ್ಲಿ ದೆಹಲಿ ಡೇರ್ ಡೆವಿಲ್ಸ್ ತಂಡವನ್ನು ಹಿಂದಿಕ್ಕಬೇಕು. ಹಾಗೆ ಕಳೆದ ಪಂದ್ಯದ ಸೋಲಿಗೆ ‘ಮುಯ್ಯಿ’ ತೀರಿಸಬೇಕು ಎನ್ನುವ ಕಾತರದಲ್ಲಿದೆ.

ಎರಡು ದಿನಗಳ ಹಿಂದೆಯಷ್ಟೇ ತವರೂರ ನೆಲದಲ್ಲಿಯೇ ಆತಿಥೇಯ ತಂಡಕ್ಕೆ ಸೋಲುಣಿಸಿದ ದೆಹಲಿ ತಂಡಕ್ಕೆ ಈಗ ತವರಲ್ಲಿಯೇ ‘ಶಾಕ್’ ನೀಡಬೇಕು ಎಂದು ಜಯವರ್ಧನೆ ಪಡೆ ಲೆಕ್ಕಾಚಾರದಲ್ಲಿ ತೊಡಗಿದೆ.

ಸೋಮವಾರ ನಡೆಯಲಿರುವ ಐಪಿಎಲ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಮತ್ತೆ ದೆಹಲಿ ತಂಡ ಕೊಚ್ಚಿ ಟಸ್ಕರ್ಸ್ ಕೇರಳ ತಂಡದ ಸವಾಲನ್ನು ಎದುರಿಸಲಿದೆ. ಶನಿವಾರದ ಪಂದ್ಯದಲ್ಲಿ 38 ರನ್ಗಳ ಗೆಲುವು ಗಳಿಸಿರುವ ‘ವೀರೂ’ ಪಡೆ ಕೊಚ್ಚಿ ವಿರುದ್ಧ ಗೆಲುವಿನ ಓಟ ಮುಂದುವರಿಸುವ ವಿಶ್ವಾಸದಲ್ಲಿದೆ. ಆದರೆ ಡೆವಿಲ್ಸ್ಗೆ ತಿರುಗೇಟು ನೀಡಲು ಮಾಹೇಲ ಜಯವರ್ಧನೆ ಸಾರಥ್ಯದ ತಂಡ ಕಾತರಿಸುತ್ತಿದೆ.

ಬಲಿಷ್ಠ ಬ್ಯಾಟಿಂಗ್ ಶಕ್ತಿ ಹೊಂದಿರುವ ಡೆವಿಲ್ಸ್ ಈ ಸಲದ ಐಪಿಎಲ್ನಲ್ಲಿ ಆಡಿದ ಒಟ್ಟು ಎಂಟು ಪಂದ್ಯಗಳಲ್ಲಿ ಕೇವಲ ಮೂರರಲ್ಲಿ ಮಾತ್ರ ಗೆಲುವು ಪಡೆದಿದೆ. ಅದರಲ್ಲಿ ವೀರೇಂದ್ರ ಸೆಹ್ವಾಗ್ ಅಬ್ಬರಿಸಿದ್ದು ಎರಡು ಪಂದ್ಯಗಳಲ್ಲಿ ಮಾತ್ರ. ಭರವಸೆಯ ಆಟಗಾರರಾದ ಡೇವಿಡ್ ವಾರ್ನರ್, ನಮನ್ ಓಜಾ ಕಳೆದ ಪಂದ್ಯದಲ್ಲಿ ವಿಫಲರಾಗಿದ್ದರು.

ಆದರೆ ವೀರೂ ಮಾತ್ರ ಸ್ಪೋಟಕ ಬ್ಯಾಟಿಂಗ್ ಮಾಡಿದರು. ಅವರು (80; 47ಎಸೆತ, 8 ಬೌಂ, 5 ಸಿಕ್ಸರ್) ಗಳಿಸಿ ತಂಡಕ್ಕೆ ಗೆಲುವು ತಂದುಕೊಟ್ಟಿದ್ದರು.

ಬ್ಯಾಟಿಂಗ್ ಲಯ ಕಂಡುಕೊಂಡಿರುವ ವೀರೂ ಅಬ್ಬರದ ಚಿಂತೆ ಕೊಚ್ಚಿ ತಂಡವನ್ನು ಕಾಡುತ್ತಿದೆ. ಬೌಲಿಂಗ್ ವಿಭಾಗದಲ್ಲಿ ಸುಧಾರಣೆ ಕಂಡಿರುವ ಡೆವಿಲ್ಸ್ ಪಡೆಗೆ ಇರ್ಫಾನ್ ಪಠಾಣ್, ಮಾರ್ನ್ ಮಾರ್ಕೆಲ್ ಹಾಗೂ ವಾಮ್ ಡೇರ್ ಮೇರ್ವ್ ಬಲ ತುಂಬಲಿದ್ದಾರೆ. ಈ ಮೂವರು ಬೌಲರ್ಗಳು ಕಳೆದ ಪಂದ್ಯದಲ್ಲಿ ಕೊಚ್ಚಿ ತಂಡವನ್ನು ಅಲ್ಪ ಮೊತ್ತಕ್ಕೆ ಕಟ್ಟಿ ಹಾಕುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಆದರೆ, ಸತತ ಸೋಲು ಜಯವರ್ಧನೆ ಪಡೆಯನ್ನು ಕಾಡುತ್ತಿದೆ. ಶನಿವಾರ ಡೆವಿಲ್ಸ್ ವಿರುದ್ಧದ ಪಂದ್ಯದಲ್ಲಿ ಸೋಲಿನ ನಿರಾಸೆ ಹೊತ್ತುಕೊಂಡು ಕೊಚ್ಚಿ ಕಣಕ್ಕಿಳಿದಿತ್ತು. ಡೆಕ್ಕನ್ ಚಾರ್ಜರ್ಸ್ ವಿರುದ್ಧ ಸೋಲಿನ ಕಹಿ ಮರೆಯಲು ಅವರಿಗೆ ಸಾಧ್ಯವಾಗಲಿಲ್ಲ. ಆದರೆ ಪದೇ ಪದೇ ಸೋಲು ಮಾತ್ರ ಕೊಚ್ಚಿ ತಂಡದ ಚಿಂತೆ ಹೆಚ್ಚಿಸಿದೆ.

ಜಯವರ್ಧನೆ, ವಿವಿಎಸ್ ಲಕ್ಷ್ಮಣ್, ಬ್ರೆಂಡನ್ ಮೆಕ್ಲಮ್, ಬ್ರಾಡ್ ಹಾಡ್ಜ್ ಸೇರಿದಂತೆ ಪ್ರಮುಖ ಬ್ಯಾಟ್ಸ್ಮನ್ಗಳು ಅಷ್ಟೇನೂ ಉತ್ತಮ ಪ್ರದರ್ಶನ ತೋರದಿರುವುದು ಕೊಚ್ಚಿ ಚಿಂತೆಗೆ ಕಾರಣವಾಗಿದೆ. ರಾಜಸ್ತಾನ್ ರಾಯಲ್ಸ್ ವಿರುದ್ಧದ ಹಿಂದಿನ ಪಂದ್ಯದಲ್ಲಿ ಜಯವರ್ಧನೆ ಪಡೆ ಕೇವಲ 109 ರನ್ಗಳಿಗೆ ಆಲ್ ಔಟ್ ಆಗಿತ್ತು. ಇದು ಕೊಚ್ಚಿ ಬ್ಯಾಟಿಂಗ್ ದೌರ್ಬಲ್ಯಕ್ಕೆ ಸಾಕ್ಷಿ. ಮುತ್ತಯ್ಯ ಮುರಳೀಧರನ್, ತಿಸಾರ ಪರೇರಾ, ಆರ್. ವಿನಯ್ ಕುಮಾರ್ ಸೇರಿದಂತೆ ಪ್ರಬಲ ಬೌಲರ್ಗಳು ತಂಡದಲ್ಲಿದ್ದರೂ ಇದುವರೆಗೂ ಪ್ರಭಾವಿ ಎನಿಸಿಲ್ಲ.

ಇಂದಿನ ಪಂದ್ಯದಲ್ಲಿ ಮತ್ತೆ ‘ವೀರೂ’ ಅಬ್ಬರಿಸಿದರೆ, ಕೊಚ್ಚಿ ‘ಠುಸ್’ ಎಂದರೆ ಮತ್ತೊಂದು ಗೆಲುವು ಡೆವಿಲ್ಸ್ ಖಾತೆ ಸೇರಲಿದೆ. ಆದರೆ ಈ ಟೂರ್ನಿಯಲ್ಲಿ ಆಡಿರುವ 8 ಪಂದ್ಯಗಳಲ್ಲಿ ಮೂರರಲ್ಲಿ ಮಾತ್ರ ಗೆಲುವು ಪಡೆದಿರುವ ಕೊಚ್ಚಿ ನಾಲ್ಕನೇ ಗೆಲುವಿಗೆ ಕಾತರಿಸುತ್ತಿದೆ. ಈ ಪಂದ್ಯದಲ್ಲಿ ಡೆವಿಲ್ಸ್ ತಂಡವನ್ನು ಮಣಿಸಿದರೆ, ಪಾಯಿಂಟ್ ಪಟ್ಟಿಯಲ್ಲಿ ಮೇಲಕ್ಕೇರುವ ಆಶಯವನ್ನು ಜಯವರ್ಧನೆ ಪಡೆ ಹೊಂದಿದೆ.

ತಂಡಗಳು
ಕೊಚ್ಚಿ ಟಸ್ಕರ್ಸ್ ಕೇರಳ
ಮಾಹೇಲ ಜಯವರ್ಧನೆ (ನಾಯಕ), ವಿವಿಎಸ್ ಲಕ್ಷ್ಮಣ್, ಬ್ರಾಡ್ ಹಾಡ್ಜ್, ಬ್ರೆಂಡನ್ ಮೆಕ್ಲಮ್, ಪಾರ್ಥಿವ್ ಪಟೇಲ್, ರವೀಂದ್ರ ಜಡೇಜ, ತಿಸಾರ ಪೆರೇರಾ, ಸ್ಟೀವನ್ ಸ್ಮಿತ್, ಎಸ್. ಶ್ರೀಶಾಂತ್, ಆರ್ಪಿ ಸಿಂಗ್, ಮುತ್ತಯ್ಯ ಮುರಳೀಧರನ್, ರಮೇಶ್ ಪೊವಾರ್, ಆರ್. ವಿನಯ್ ಕುಮಾರ್, ಬಿ. ಅಖಿಲ್, ರೈಫಿ ಗೊಮೆಜ್ ಹಾಗೂ ಕೇದಾರ್ ಜಾದವ್.

ದೆಹಲಿ ಡೇರ್ಡೆವಿಲ್ಸ್
ವೀರೇಂದ್ರ ಸೆಹ್ವಾಗ್ (ನಾಯಕ), ವರುಣ್ ಆ್ಯರನ್, ಅಜಿತ್ ಅಗರ್ಕರ್, ಟ್ರ್ಯಾವಿಸ್ ಬಿರ್ಟ್, ರಾಬಿನ್ ಬಿಸ್ತ್, ಅಶೋಕ್ ದಿಂಡಾ, ಆ್ಯರೊನ್ ಫಿಂಚ್, ಜೇಮ್ಸ್ ಹೋಪ್ಸ್, ಮಾರ್ನ್ ಮಾರ್ಕೆಲ್, ಯೋಗೇಶ್ ನಗರ್, ನಮನ್ ಓಜಾ, ಇರ್ಫಾನ್ ಪಠಾಣ್, ರೆಲೋಫ್ ವಾನ್ ಡೆರ್ ಮೆರ್ವ್, ವೇಣುಗೋಪಾಲ್ ರಾವ್, ಮ್ಯಾಥ್ಯೂ ವೇಡ್, ಡೇವಿಡ್ ವಾರ್ನರ್, ಉಮೇಶ್ ಯಾದವ್ ಹಾಗೂ ವಿವೇಕ್ ಯಾದವ್.

ಪಂದ್ಯದ ಆರಂಭ: ರಾತ್ರಿ 8.00 ಗಂಟೆಗೆ. ನೇರ ಪ್ರಸಾರ: ಸೆಟ್ ಮ್ಯಾಕ್ಸ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.