ತುಂಗಭದ್ರೆ ಒಡಲಿನೆಡೆಗೆ ಸೇತುಬಂಧನ

7

ತುಂಗಭದ್ರೆ ಒಡಲಿನೆಡೆಗೆ ಸೇತುಬಂಧನ

Published:
Updated:

ದಾವಣಗೆರೆ: ಮರಳುಗಾರಿಕೆ ಹೆಸರಿನಲ್ಲಿ ನದಿಯ ಹರಿವನ್ನೇ ಬದಲಾಯಿಸಲು ಯತ್ನಿಸಿರುವುದು ಹರಿಹರ ತಾಲ್ಲೂಕಿನ ಚಿಕ್ಕಬಿದರಿಯಲ್ಲಿ ನಡೆದಿದೆ.ಜಯ ಕರ್ನಾಟಕ ಸಂಘಟನೆ ಸಂಸ್ಥಾಪಕ ಮುತ್ತಪ್ಪ ರೈ ಆಪ್ತರಾದ ಪ್ರಕಾಶ್ ಎಂಬುವರಿಗೆ ಇಲ್ಲಿನ ನದಿಪಾತ್ರದ 130 ಎಕರೆ ಪ್ರದೇಶದಲ್ಲಿ ಮರಳುಗಾರಿಕೆಗೆ ಪರವಾನಗಿ ದೊರೆತಿದೆ. ಮರಳು ಸಾಗಾಟ ಸುಲಭಗೊಳಿಸಲು ಚಿಕ್ಕಬಿದರಿಯ ಹೊಲಗಳ ಮಧ್ಯದಲ್ಲಿಯೇ ಮಣ್ಣಿನ ರಸ್ತೆ ನಿರ್ಮಿಸಲಾಗಿದೆ.ಈ ರಸ್ತೆ ನದಿಯ ಮಧ್ಯಭಾಗದವರೆಗೆ ಸಂಪರ್ಕ ಕಲ್ಪಿಸುತ್ತದೆ. ಅಲ್ಲಿವರೆಗೆ ಮಣ್ಣುತುಂಬಿ ನೀರಿನ ಹರಿವನ್ನು ಬಲಭಾಗಕ್ಕೆ ತೂಬುಗಳ ಮೂಲಕ ತಿರುಗಿಸಲಾಗಿದೆ ಎಂದು ಸ್ಥಳೀಯರು ತಿಳಿಸಿದರು. ಆದರೆ, ಅಲ್ಲಿನ ‘ಜಯ ಕರ್ನಾಟಕ’ ಕಾರ್ಯಕರ್ತರ ಪ್ರಕಾರ ಇದನ್ನು ತಾತ್ಕಾಲಿಕವಾಗಿ ನಿರ್ಮಿಸಲಾಗಿದ್ದು, ಮರಳುಗಾರಿಕೆ ಚಾಲನೆಗೆ ಪೂಜಾ ಸಮಾರಂಭದ ಬಳಿಕ ತೆರವುಗೊಳಿಸಲಾಗುತ್ತದೆ ಎಂದರು.ಆದರೆ, ರಸ್ತೆಯನ್ನು ಟಿಪ್ಪರ್ ಲಾರಿಗಳ ಸಂಚಾರಕ್ಕೆ ಅನುಕೂಲ ಆಗುವಂತೆ ನಿರ್ಮಿಸಲಾಗಿದೆ. ಈ ಸ್ಥಳದಿಂದ ಕಾಲ್ನಡಿಗೆ ದೂರದಲ್ಲಿ ಭಾರೀ ಪ್ರಮಾಣದಲ್ಲಿ ಜೆಸಿಬಿ ಸಹಾಯದಿಂದ ಮರಳುಗಾರಿಕೆ ನಡೆಯುತ್ತಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry