ಶನಿವಾರ, ಜೂನ್ 12, 2021
24 °C

ತುಮಕೂರು: ಮಧ್ಯರಾತ್ರಿಯಲ್ಲಿ ಬಾಂಬ್‌ ಭೀತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಮಕೂರು: ನಗರ ಹೊರವಲಯದ ಪೆಟ್ರೋಲ್ ಬಂಕ್‌ ಹಾಗೂ ಕೊರಟಗೆರೆ ಬಳಿಯ ಪೆಟ್ರೋಲ್‌ ಬಂಕ್‌ ಸಮೀಪ ಬಾಂಬ್ ಹೋಲುವಂತಹ ಬಾಟಲಿಯಲ್ಲಿದ್ದ ಸ್ಫೋಟಕ ಭಾನುವಾರ ಮಧ್ಯ ರಾತ್ರಿ ಪತ್ತೆಯಾಗಿ ಆತಂಕ ಸೃಷ್ಟಿಸಿತು.ನಗರದ ಗ್ರಾಮಾಂತರ ಪೊಲೀಸ್ ಠಾಣೆಗೆ ರಾತ್ರಿ 9 ಗಂಟೆಗೆ ಯಲ್ಲಾಪುರದ ಎಂ.ಆರ್‌. ಸರ್ವೀಸ್‌ ಸ್ಟೇಷನ್‌ ಪೆಟ್ರೋಲ್ ಬಂಕ್‌ನಲ್ಲಿ ಬಾಂಬ್ ಇಡಲಾಗಿದೆ  ಎಂದು ಆ ಪೆಟ್ರೋಲ್‌ ಬಂಕ್‌ ಮಾಲೀಕರು ಕರೆ ಮಾಡಿ ತಿಳಿಸಿದರು.ಕೂಡಲೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಮಣ್‌ಗುಪ್ತ ಬಾಂಬ್ ನಿಷ್ಕ್ರಿಯ ದಳ, ಬಾಂಬ್ ಪತ್ತೆ ದಳ ಸಿಬ್ಬಂದಿ ಹಾಗೂ ಬಾಂಬ್ ಪತ್ತೆ ಶ್ವಾನ ದಳದೊಂದಿಗೆ ಸ್ಥಳಕ್ಕೆ ಆಗಮಿಸಿ ತಪಾಸಣೆ ನಡೆಸಿದರು.ಜನರೇಟರ್ ಕೊಠಡಿ ಪಕ್ಕ ಬ್ಯಾಗ್‌ವೊಂದರಲ್ಲಿ ಬಾಂಬ್ ಇಡಲಾಗಿದೆ ಎನ್ನಲಾದ ಪ್ಲಾಸ್ಟಿಕ್‌ ಬಾಟಲಿ ಇಡಲಾಗಿತ್ತು. ಅದರೊಳಗೆ ಹಲವು ವೈರ್ ಜೋಡಿಸಿ, ಮೇಲೆ ಪೇಪರ್ ತುಣುಕು ತುರುಕಲಾಗಿತ್ತು. ವಿವಿಧ ಬಣ್ಣದ ಸೆಲ್ಲೋ ಟೇಪ್‌ಗಳನ್ನು ಸುತ್ತಿ, ಟೈಮರ್ ಥರದ ವಸ್ತು ಇಡಲಾಗಿತ್ತು. ಇದರಿಂದ ಆತಂಕ ಮತ್ತಷ್ಟು ಹೆಚ್ಚಾಯಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.