ಪಣಜಿ(ಪಿಟಿಐ): ಮಹಿಳಾ ಸಹೋದ್ಯೋಗಿ ಮೇಲೆ ಅತ್ಯಾಚಾರ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತೆಹೆಲ್ಕಾ ಮಾಜಿ ಸಂಪಾದಕ ತರುಣ್ ತೇಜ್ಪಾಲ್ ಮತ್ತು ಅಪರಾಧ ವಿಭಾಗ ಸಲ್ಲಿಸಿದ್ದ ನಾಲ್ಕು ಪ್ರತ್ಯೇಕ ಅರ್ಜಿಗಳ ವಿಚಾರಣೆಯನ್ನು ಸ್ಥಳೀಯ ನ್ಯಾಯಾಲಯ ಮಾರ್ಚ್ 21ಕ್ಕೆ ನಿಗದಿಪಡಿಸಿದೆ.

ತೇಜ್ಪಾಲ್ ಸಲ್ಲಿಸಿರುವ ಮೂರು ಮತ್ತು ಅಪರಾಧ ವಿಭಾಗ ಸಲ್ಲಿಸಿರುವ ಒಂದು ಅರ್ಜಿಯ ವಿಚಾರಣೆಯನ್ನು ಮಾರ್ಚ್ 21ರಂದು ನಡೆಸಲಾಗುವುದು ಎಂದು ಬುಧವಾರ ತ್ವರಿತಗತಿ ನ್ಯಾಯಾಲಯ ಹೇಳಿದೆ.

ತೇಜ್ಪಾಲ್ ಪರ ವಕೀಲರು ಸಲ್ಲಿಸಿದ್ದ ಅರ್ಜಿಗೆ ಪ್ರತಿಕ್ರಿಯೆ ನೀಡಲು ಸರ್ಕಾರಿ ವಕೀಲರಿಗೆ ನೀಡಲಾಗಿದ್ದ ಸಮಯವನ್ನು ನ್ಯಾಯಾಧೀಶರು ಮುಂದೂಡಿದರು.

ತ್ವರಿತಗತಿ ನ್ಯಾಯಾಲಯದ ಎದುರು ಮೂರು ಪ್ರತ್ಯೇಕ ಅರ್ಜಿಗಳನ್ನು ಸಲ್ಲಿಸಿರುವ ತೇಜ್ಪಾಲ್, ತಮ್ಮ ವಿರುದ್ಧ ತನಿಖಾದಳ ಸಲ್ಲಿಸಿರುವ ಎಲ್ಲ ಸಾಕ್ಷ್ಯಾಧಾರಗಳ ವಿವರಗಳನ್ನು ನೀಡುವಂತೆ ಕೋರಿಕೊಂಡಿದ್ದಾರೆ. ಅಲ್ಲದೇ ವಿಚಾರಣೆಯ ವೇಳೆ
ತನಿಖಾ ಅಧಿಕಾರಿಗಳು ತಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಎಂದೂ ಹೇಳಿದ್ದಾರೆ.

ಅಪರಾಧ ವಿಭಾಗವೂ, ತೇಜ್ಪಾಲ್ ವಿರುದ್ಧ ಪೂರಕ ಆರೋಪಪಟ್ಟಿ ಸಲ್ಲಿಸಲು ಅನುಮತಿ ಕೋರಿ ನ್ಯಾಯಾಲಯದ ಮುಂದೆ ಅರ್ಜಿ ಸಲ್ಲಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.