ಶುಕ್ರವಾರ, ಜೂನ್ 18, 2021
25 °C

ತೈಲ ಬೆಲೆ ಏರಿಕೆಗೆ ಭಾರತ, ಚೀನಾದ ಬೇಡಿಕೆ ಕಾರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

 

 ವಾಷಿಂಗ್ಟನ್, (ಪಿಟಿಐ): ಜನಸಂಖ್ಯೆಯಿಂದ ತುಂಬಿತುಳುಕುತ್ತಿರುವ ಅಭಿವೃದ್ಧಿಯತ್ತ ದಾಪುಗಾಲು ಹಾಕುತ್ತಿರುವ ಭಾರತ, ಚೀನಾ ಮತ್ತು ಬ್ರೆಜಿಲ್ ದೇಶಗಳೇ ದೀರ್ಘಾವಧಿಯಲ್ಲಿ ಇಂಧನ ತೈಲ ಬೆಲೆ ಹೆಚ್ಚಳಕ್ಕೆ ಕಾರಣ ಎಂದು ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ ಅವರು ಹೇಳಿದ್ದಾರೆ.ಉತ್ತರ ಕರೋಲಿನಾದ ದೈಮ್ಲರ್ ಲಾರಿ ತಯಾರಿಕಾ ಘಟಕದಲ್ಲಿ ಇಂಧನ ಬಳಕೆಯ ಬಗ್ಗೆ ಮಾತನಾಡುತ್ತಿದ್ದ ಅವರು, ಅಧಿಕ ಜನಸಂಖ್ಯೆ ಹೊಂದಿರುವ ಚೀನಾ, ಭಾರತ ಮತ್ತು ಬ್ರೆಜಿಲ್ ಗಳಲ್ಲಿ, ಜನಸಂಖ್ಯೆ ಹೆಚ್ಚಿದಂತೆ ಪೆಟ್ರೋಲಿಯಂ ಉತ್ಪನ್ನಗಳಿಗೆ ಬೇಡಿಕೆಯೂ ಹೆಚ್ಚುತ್ತದೆ. ಅದರಿಂದಾಗಿ ವಿಶ್ವಮಟ್ಟದಲ್ಲಿ ಬೇಡಿಕೆ ಹೆಚ್ಚಿ ಇಂಧನ ತೈಲದ ಬೆಲೆಯಲ್ಲಿ ಏರಿಕೆ ಉಂಟಾಗಲಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.

ಕಳೆದ 2010ರಲ್ಲಿ ಚೀನಾದಲ್ಲಿ ಸುಮಾರು 10 ದಶಲಕ್ಷ ಹೊಸ ಕಾರುಗಳು ಬೀದಿಗಿಳಿದವು! ಜೀವನಮಟ್ಟ ಸುಧಾರಿಸಿದ ಹಿನ್ನೆಲೆಯಲ್ಲಿ ಚೀನಾದಂತಯೇ ಭಾರತ, ಭ್ರೆಜಿಲ್ ನಲ್ಲೂ ಜನ ಕಾರುಗಳನ್ನು ಕೊಳ್ಳುತ್ತಿದ್ದಾರೆ. ಅದರೊಂದಿಗೆ ಪೆಟ್ರೋಲಿಯಂ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಿ, ಅಂತಿಮವಾಗಿ ಅದು ವಿಶ್ವ ಮಟ್ಟದಲ್ಲಿ ಇಂಧನ ಬಲೆ ಏರಿಕೆಗೆ ಕಾರಣವಾಗುತ್ತದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದನ್ನೆಲ್ಲಾ ನೋಡುತ್ತಾ ಹಿಂದಿನಂತೆಯೇ ವ್ಯವಹರಿಸಲಾಗದು. ಕಳೆದ ಶತಮಾನದ ಪಳೆಯುಳಿಕೆ ಮೂಲದ ಇಂಧನವನ್ನೇ ನಂಬಿ ಕೂಡಲಾಗದು. ಪರಿಸರಕ್ಕೆ ಹಾನಿ ಉಂಟುಮಾಡದ, ನವೀಕರಣಗೊಳ್ಳುವ ಪರ್ಯಾಯ ಇಂಧನ ಮೂಲಗಳನ್ನು ನಾವು ಅಭಿವೃದ್ಧಿಪಡಿಸಿಕೊಳ್ಳಬೇಕು ಎಂದು ಪ್ರತಿಪಾದಿಸಿರುವು ಅವರು, ನಾವು ಈ ಕ್ಷೇತ್ರದಲ್ಲಿ ಅಪಾರ ಪ್ರಮಾಣದಲ್ಲಿ ಬಂಡವಾಳ ಹೂಡಿದ್ದೇವೆ, ಅದರಿಂದ  ಮುಂದಿನ ಒಂದು ದಶಕದಲ್ಲಿ 600,000 ಉದ್ಯೋಗಾವಕಾಶಗಳೂ ಹೆಚ್ಚಲಿವೆ ಎಂದು ಹೇಳಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.