ಸೋಮವಾರ, ಜನವರಿ 20, 2020
18 °C

ತೊಗರಿಹಂಕಲ್: ಛದ್ಮವೇಷ ಸ್ಪರ್ಧೆ

ಪ್ರಜಾವಾಣಿ ವಾರ್ತೆ, Updated:

ಅಕ್ಷರ ಗಾತ್ರ : | |

ಚಿಕ್ಕಮಗಳೂರು: ತೊಗರಿಹಂಕಲ್ ಗ್ರಾಮಪಂಚಾಯಿತಿ ವ್ಯಾಪ್ತಿಯ ಹೊಸಪೇಟೆ ಗ್ರಾಮದ ಅರುಣೋದಯ ವಿದ್ಯಾಸಂಸ್ಥೆ ನರ್ಸರಿ ಮಕ್ಕಳಿಗೆ ಆಯೋ ಜಿಸಿದ್ದ ಛದ್ಮವೇಷ ಸ್ಪರ್ಧೆಯನ್ನು ಕಂಬಿಹಳ್ಳಿಶಾಲೆ ಮುಖ್ಯೋಪಾಧ್ಯಾಯ ಮಲ್ಲೇಶಪ್ಪ ಉದ್ಘಾಟಿಸಿದರು.ಅಧ್ಯಕ್ಷತೆ ವಹಿಸಿದ್ದ ವಿದ್ಯಾಸಂಸ್ಥೆ ಅಧ್ಯಕ್ಷ ಮುರುಗೇಶ್ ಪೂಜಾರಿ ಮಾತನಾಡಿ, ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಯನ್ನು ನಡೆಸುವುದರಿಂದ ಎಳೆಯ ಮಕ್ಕಳ ಮನಸ್ಸಿಗೆ ಉಲ್ಲಾಸವನ್ನುಂಟು ಮಾಡುತ್ತದೆ ಎಂದು ಹೇಳಿದರು.ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಆಶಾ, ಉಪಾಧ್ಯಕ್ಷ ಎಸ್.ಎನ್.ಸೋಮಶೇಖರ್, ಆಡಳಿತ ಮಂಡಳಿ ಸದಸ್ಯರಾದ ಗೋಪಾಲ್, ಸೋಮೇಶ್, ಪ್ರವೀಣ್, ಮಂಜು ನಾಥ ವೇದಿಕೆಯಲ್ಲಿದ್ದರು.

ವಿದ್ಯಾಸಂಸ್ಥೆ ಮುಖ್ಯೋಪಾಧ್ಯಾಯ ಯಶವಂತ್, ಸಹಶಿಕ್ಷಕಿ ಸವಿತಾ ಇದ್ದರು.  ಸ್ಪರ್ಧೆಯಲ್ಲಿ 20 ಮಕ್ಕಳು ಭಾಗವಹಿಸಿದ್ದರು.

ಪ್ರತಿಕ್ರಿಯಿಸಿ (+)