ತೋವಿನಕೆರೆ: ಜಿಲ್ಲಾ ಪಂಚಾಯಿತಿ ಸದಸ್ಯ ಕಾಂಗ್ರೆಸ್. ತಾಲ್ಲೂಕು ಪಂಚಾಯಿತಿ ಸದಸ್ಯ ಬಿಜೆಪಿ. ಗ್ರಾಮ ಪಂಚಾಯಿತಿ ಆಡಳಿತ ಜೆಡಿಎಸ್ ಕೈಯಲ್ಲಿ. ಮೂರು ಸ್ತರದ ಸ್ಥಳೀಯ ಸಂಸ್ಥೆಗಳಲ್ಲಿ ಮೂರು ಪಕ್ಷಗಳು ಪ್ರತಿನಿಧಿಸುತ್ತಿದ್ದರೂ; ಕಾಮಗಾರಿ ನಿರ್ವಹಣೆಯಲ್ಲಿ ಮಾತ್ರ ಎಲ್ಲರೂ ಒಂದೇ.

ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮೂರು ಸ್ತರದಲ್ಲೂ ಅಭಿವೃದ್ಧಿ ಕಾಮಗಾರಿಗೆ ಅನುದಾನ ಬಿಡುಗಡೆ ಆಗುತ್ತಿದೆ. ಕಾಮಗಾರಿಗಳು ಜನಪ್ರತಿನಿಧಿಗಳ ಆಪ್ತರಿಗೆ ಮೀಸಲಾಗುತ್ತಿವೆ. ಎರಡು ವರ್ಷದಿಂದ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದಿರುವ ರಸ್ತೆ, ಚರಂಡಿ, ಸೇತುವೆ, ಕುಡಿಯುವ ನೀರಿಗೆ ಸಂಬಂಧಪಟ್ಟ ಕಾಮಗಾರಿ, ಕೆರೆ ಹೂಳೆತ್ತುವುದು, ಕಟ್ಟಡ ನಿರ್ಮಾಣದ ಬಹುತೇಕ ಕಾಮಗಾರಿಗಳು ಕಳಪೆಯಿಂದ ಕೂಡಿವೆ ಎಂಬ ಆರೋಪಗಳು ವ್ಯಾಪಕವಾಗಿ ಕೇಳಿ ಬರುತ್ತಿವೆ.

ಕಬ್ಬಿಗೆರೆಯ ಕೊಲ್ಲಾಪುರದಮ್ಮ ದೇವಾಲಯದ ಮುಂಭಾಗ ಸರ್ಕಾರದ ಅನುದಾನದಲ್ಲಿ ಸಮುದಾಯ ಭವನ ಕಾಮಗಾರಿ ಪೂರ್ಣಗೊಂಡು ಪ್ಲಾಸ್ಟಿಂಗ್ ನಡೆಯುತ್ತಿತ್ತು. ಈ ಹಂತದಲ್ಲಿ ಇಡೀ ಭವನದ ಮೇಲ್ಛಾವಣಿ, ಗೋಡೆಗಳ ಸಮೇತ ಕುಸಿದು ಬಿದ್ದಿದೆ. ಈ ಕಾಮಗಾರಿಗೆ ಈಗಾಗಲೇ ಬಿಲ್ ಪಡೆಯಲಾಗಿದೆ ಎಂದು ಉನ್ನತ ಮೂಲಗಳು ಖಚಿತಪಡಿಸಿವೆ.

ಇಂಥ ಭವನದಲ್ಲಿ ಬೃಹತ್ ಕಾರ್ಯಕ್ರಮ ನಡೆಯುವಾಗ ಕುಸಿದಿದ್ದರೇ; ಅದರೊಳಗಿದ್ದ ಜನರ ಪಾಡೇನಾಗುತ್ತಿತ್ತು. ಅಪಾಯ ಊಹಿಸಲು ಅಸಾಧ್ಯ ಎಂದು ಗ್ರಾಮಸ್ಥರು ಕಳಪೆ ಕಾಮಗಾರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

ತೋವಿನಕೆರೆ ಸುತ್ತ ಎರಡು ವರ್ಷದಿಂದ ಕೋಟ್ಯಂತರ ರೂಪಾಯಿ ಕಾಮಗಾರಿ ನಡೆಯುತ್ತಿವೆ. ಕೊರಟಗೆರೆ ರಸ್ತೆಯನ್ನು ಕೆಲವು ಮೀಟರ್ ಎತ್ತರಿಸಿ ಜಲ್ಲಿ ಹಾಕಿ ಒಂದು ವರ್ಷವಾಯಿತು. ವಾಹನ ಸಂಚಾರದಿಂದ ರಸ್ತೆಗೆ ಹಾಕಿದ ಜಲ್ಲಿ ಹೊರಗೆ ಚಿಮ್ಮಿದೆ. ರಸ್ತೆ ತಗ್ಗು ಬಿದ್ದಿದೆ. ಮುಂಚಿಗಿಂತಲೂ ಹದಗೆಟ್ಟಿದೆ. ಇದುವರೆವಿಗೂ ಡಾಂಬರು ಹಾಕಿಲ್ಲ. ಗುತ್ತಿಗೆದಾರನ ಸುಳಿವು ಇಲ್ಲ ಎಂಬ ದೂರು ವಾಹನ ಸವಾರರದ್ದು.

ತೋವಿನಕೆರೆ-ಮಧುಗಿರಿ ರಸ್ತೆ ಎತ್ತರಿಸಿ ಆರು ತಿಂಗಳು ಕಳೆದರೂ; ಜಲ್ಲಿ ಹರಡಿದ ಗುತ್ತಿಗೆದಾರ ನಾಪತ್ತೆಯಾಗಿದ್ದಾನೆ. ಇದೇ ಗುತ್ತಿಗೆದಾರ ಹೊಸದಾಗಿ ನಿರ್ಮಾಣ ಮಾಡಿದ ಚರಂಡಿಯು ನೀರು ಮತ್ತು ಸಿಮೆಂಟ್ ಇಲ್ಲದೆ ನರಳಿದೆ. ಈತನು ನಿರ್ಮಿಸಿರುವ ಚರಂಡಿಯಿಂದ ನೀರು ಎತ್ತ ಕಡೆ ಹರಿಯುತ್ತದೆ ಎಂಬುದು ಗ್ರಾಮದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಎತ್ತರಿಸಿರುವ ರಸ್ತೆಯ ಗುಣಮಟ್ಟವು ಕಳಪೆ ಎಂಬುದು ಅನೇಕರ ಆರೋಪ.

ಸಣ್ಣ ನೀರಾವರಿ ಇಲಾಖೆ, ಜಿಲ್ಲಾ ಪಂಚಾಯಿತಿ ಮೂಲಕ ತೋವಿನಕೆರೆ, ಕುರಿಹಳ್ಳಿ, ಕಬ್ಬಿಗೆರೆ ಕೆರೆಗಳ ಹೂಳೆತ್ತಿ ಏರಿಗೆ ಮಣ್ಣು ಹೊಡೆದು ಭದ್ರಪಡಿಸುವುದಕ್ಕೆ ಗುತ್ತಿಗೆ ನೀಡಲಾಗಿದೆ. ಆದರೆ ಹೂಳೆತ್ತುವಾಗ ಈ ಮೊದಲು ವಿವಿಧ ಯೋಜನೆ ಮೂಲಕ ಮಣ್ಣು ತೆಗೆದಿದ್ದ ಜಾಗ, ತಗ್ಗು ಇರುವ ಪ್ರದೇಶಗಳಲ್ಲಿ ಮಣ್ಣನ್ನು ತೆಗೆದು ಗುತ್ತಿಗೆದಾರರು ಸರ್ಕಾರ ನಿಗದಿಪಡಿಸಿದ ಅಳತೆಯಲ್ಲಿ ಮಣ್ಣು ತೆಗೆದಿರುವುದಾಗಿ ಸಾಬೀತು ಪಡಿಸಿದ್ದಾರೆ.

ಟೆಂಡರ್ನಲ್ಲಿ ನಿಗದಿಪಡಿಸಿದ ಮೊತ್ತಕ್ಕಿಂತಲೂ ಶೇ.20ರಿಂದ 30ರಷ್ಟು ಕಡಿಮೆ ಟೆಂಡರ್ ಹಾಕಿರುವುದೇ ಇಂಥ ಅಕ್ರಮಗಳಿಗೆ ಕಾರಣವಾಗಿದೆ ಎಂದು ಹೆಸರು ಹೇಳಲಿಚ್ಚಿಸದ ಅಧಿಕಾರಿ `ಪ್ರಜಾವಾಣಿ~ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.