ಮಂಚದ ಮೇಲ್ಭಾಗಕ್ಕೆ ಅಂಗಾತವಾಗಿ ಇಳಿಬಿಟ್ಟಿದ್ದ ಬಾಟಲಿಯಿಂದ ಇಂಚಿಂಚಾಗಿ ಬಂದು ದೇಹ ಸೇರುವ ರಕ್ತವನ್ನೇ ದಿಟ್ಟಿಸುತ್ತಾ ಮಲಗಿದ್ದಳು ಪುಟ್ಟಿ. ಪಕ್ಕದ ಮಂಚದ ಮೇಲೆ ಕುಳಿತಿದ್ದ ಅಮ್ಮ ಮರುಕ ಪಡುವ ಮನಸ್ಸಿನಿಂದ ಕರಗಿ ಹನಿವ ಕಣ್ಣೀರನ್ನು ನಿಯಂತ್ರಿಸುತ್ತಾ ತೊಡೆಯ ಮೇಲೆ ಮಲಗಿದ ಮಗುವಿಗೆ ಸಾಂತ್ವನ ಹೇಳುತ್ತಿದ್ದಳು. ಆಗಾಗ ಸೂಜಿ ಚುಚ್ಚಿ ಕಲೆಯಾದ ಕೈಯನ್ನು ಸವರುತ್ತಾ ಈಗಿನ ನೋವು ಮರೆಸುವ ತವಕ ಆಕೆಯದ್ದು.

ಇದು ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ರಾಷ್ಟ್ರೋತ್ಥಾನ ಕಟ್ಟಡದ ಆವರಣದಲ್ಲಿರುವ ಸಂರಕ್ಷಾ ಥಲಸೇಮಿಯಾ ಕೇಂದ್ರದಲ್ಲಿ ಕಂಡುಬಂದ ದೃಶ್ಯ. ಕೆಲ ಮಕ್ಕಳಿಗೆ ಹುಟ್ಟಿನ ಜೊತೆಜೊತೆಗೆ ಬರುವ ಥಲಸೇಮಿಯಾ ಕಾಯಿಲೆಯಿಂದ ಬಳಲುತ್ತಿರುವ ಅನೇಕ ಮಕ್ಕಳು ಇಲ್ಲಿಗೆ ಬಂದು ಉಚಿತವಾಗಿ ತಪಾಸಣೆ, ಪರೀಕ್ಷೆ ಮಾಡಿಸಿಕೊಳ್ಳುವುದಲ್ಲದೆ ದೇಹಕ್ಕೆ ಅಗತ್ಯವಾದ ರಕ್ತವನ್ನೂ ಪಡೆಯುತ್ತಾರೆ. ಇಂಥ ಮಗು ಹೆಚ್ಚೂ ಕಡಿಮೆ ಜೀವಮಾನ ಪೂರ್ತಿ, ಅವರವರ ದೇಹ ಪ್ರಕೃತಿಗನುಗುಣವಾಗಿ 15 ದಿನಕ್ಕೊಮ್ಮೆ ಇಲ್ಲವೇ ತಿಂಗಳಿಗೊಮ್ಮೆ ರಕ್ತ ಪಡೆಯಬೇಕಾಗುತ್ತದೆ.

ಮೂರು ವರ್ಷದ ಹಿಂದೆ ಸಂಕಲ್ಪ ಇಂಡಿಯಾ ಫೌಂಡೇಷನ್ ಸಹಯೋಗದೊಂದಿಗೆ ಸಂರಕ್ಷಾ ಕೇಂದ್ರವನ್ನು ಪ್ರಾರಂಭಿಸಲಾಗಿದೆ. ಬೆಂಗಳೂರು, ರಾಜ್ಯದ ವಿವಿಧ ಜಿಲ್ಲೆಗಳು, ಅಸ್ಸಾಂ, ಜಾರ್ಖಂಡ್, ಅಫ್ಘಾನಿಸ್ತಾನ ಸೇರಿದಂತೆ ಅನೇಕ ಸ್ಥಳಗಳಿಂದ ಥಲಸೇಮಿಯಾ ಮಕ್ಕಳು ಇಲ್ಲಿಗೆ ಬಂದು ಚಿಕಿತ್ಸೆ ಪಡೆದಿದ್ದಾರೆ. ಸದ್ಯ ಆರು ತಿಂಗಳಿಂದ 44 ವರ್ಷ ವಯೋಮಿತಿಯ 233 ಮಂದಿ ಸಂರಕ್ಷಾದ ನೆರವು ಪಡೆಯುತ್ತಿದ್ದಾರೆ.

‘ಮೂರು ವರ್ಷದಿಂದ ಥಲಸೇಮಿಯಾ ಮಕ್ಕಳ ಸೇವೆಯನ್ನು ಉಚಿತವಾಗಿ ಮಾಡುತ್ತಿದ್ದೇವೆ. ಅವರಿಗೆ ರಕ್ತ ನೀಡಿ ಕಳುಹಿಸುವುದಷ್ಟೇ ಅಲ್ಲ, ಇಲ್ಲಿಗೆ ಬಂದ ಮಕ್ಕಳ ಆರೋಗ್ಯ ತಪಾಸಣೆ ಮಾಡುತ್ತೇವೆ. ರಕ್ತದಲ್ಲಿನ ಅನಗತ್ಯ ಕಬ್ಬಿಣಂಶ ತೆಗೆಯುವ ಸಲುವಾಗಿ ಡೆಫ್ರಾ ಸಿರಾಕ್ಸ್ ಎನ್ನುವ ಮಾತ್ರೆಯನ್ನೂ ಅವರು ಸೇವಿಸಬೇಕಾಗುತ್ತದೆ. ಅದನ್ನೂ ನೀಡುತ್ತೇವೆ. ಇಲ್ಲಿಗೆ ಬಂದ ಮಕ್ಕಳು ಖುಷಿಯಿಂದ ಹೋಗುತ್ತಾರೆ. ಪ್ರತಿ ದಿನ 10–15 ಜನ ಥಲಸೇಮಿಯಾ ಕಾಯಿಲೆ ಇರುವವರು ಬರುತ್ತಾರೆ.

ಕಳೆದ ತಿಂಗಳಲ್ಲಿ 334 ಯುನಿಟ್ನಷ್ಟು ರಕ್ತ ನೀಡಿದ್ದೇವೆ’ ಎಂದು ಮಾಹಿತಿ ನೀಡುತ್ತಾರೆ ಸಂರಕ್ಷಾ ಥಲಸೇಮಿಯಾ ಡೇ ಕೇರ್ ಕೇಂದ್ರದಲ್ಲಿ ವೈದ್ಯರಾಗಿರುವ ಡಾ.ರೇಷ್ಮಾ ಶ್ರೀನಿವಾಸ್. ಥಲಸೇಮಿಯಾ ಮಕ್ಕಳಿಗೆ ನೀಡುವ ರಕ್ತವನ್ನು ರಾಷ್ಟ್ರೋತ್ಥಾನ ರಕ್ತನಿಧಿಯಿಂದ ತೆಗೆದುಕೊಳ್ಳಲಾಗುತ್ತದೆ. ಡಬಲ್ ಸಲೈನ್ಡ್ ವಾಶ್ ಆದ ರಕ್ತವನ್ನೇ ಈ ಮಕ್ಕಳಿಗೆ ನೀಡುತ್ತಾರೆ. ಅಲರ್ಜಿ ಉಂಟಾಗದಂತೆ ಎಚ್ಚರ ವಹಿಸಲಾಗುತ್ತದೆ. ರಕ್ತ ಪಡೆಯುವುದಕ್ಕೆ ಕನಿಷ್ಠ 3–4 ಗಂಟೆ ಬೇಕಿರುವುದರಿಂದ ಸಂರಕ್ಷಾ ಕೇಂದ್ರ ಬೆಳಿಗ್ಗೆ 8ರಿಂದ ರಾತ್ರಿ 8 ಗಂಟೆಯವರೆಗೆ ಕಾರ್ಯ ನಿರ್ವಹಿಸುತ್ತದೆ. ಸೋಮವಾರ ಬಿಡುವು. ವೈದ್ಯರು, ದಾದಿಯರು ಹಾಗೂ ಡಾಟಾ ಕೋ–ಆರ್ಡಿನೇಟರ್ ಇಲ್ಲಿ ಕೆಲಸ ಮಾಡುತ್ತಿದ್ದಾರೆ.

ಮಕ್ಕಳು ಇಲ್ಲಿಗೆ ಬಂದ ನಂತರ ಅವರ ರಕ್ತ ಪರೀಕ್ಷೆ ಮಾಡಿ ಅಗತ್ಯ ಇರುವಷ್ಟು ರಕ್ತವನ್ನು ನೀಡಲಾಗುವುದು. ಪ್ರತಿ ಮಗುವಿನ ಆರೋಗ್ಯ ತಪಾಸಣಾ ವರದಿ ಕಂಪ್ಯೂಟರ್ನಲ್ಲಿ ಫೀಡ್ ಆಗಿರುತ್ತದೆ. ಮಕ್ಕಳಿಗೆ ಅವರ ದೇಹಸ್ಥಿತಿಯ ಬಗೆಗಿನ ವರದಿ ನೋಡಿಕೊಳ್ಳುವುದಕ್ಕೆಂದು ಆ್ಯಪ್ ಕೂಡ ಇದೆ. ಯಾವುದೇ ಬ್ಲಡ್ಗ್ರೂಪ್ ಮಗು ಬಂದರೂ ಇಲ್ಲಿ ರಕ್ತದಾನ ಪ್ರಕ್ರಿಯೆ ನಡೆಯುತ್ತದೆ. ಥಲಸೇಮಿಯಾ ಹೊಂದಿರುವ ಮಕ್ಕಳಿಗೆ ನೀಡಲಾಗುವ ರಕ್ತವನ್ನು ಸಂಗ್ರಹಿಸಿ ಏಳು ದಿನ ಮೀರಿರಬಾರದು. ಆದರೆ ಇಲ್ಲಿ ಐದು ದಿನದೊಳಗಿನ ರಕ್ತವನ್ನೇ ನೀಡಲಾಗುತ್ತದೆ. ಮಕ್ಕಳಿಗೆ ಬೆಳಗ್ಗಿನ ತಿಂಡಿ ಹಾಗೂ ಮಧ್ಯಾಹ್ನ ಊಟದ ವ್ಯವಸ್ಥೆಯನ್ನೂ ಮಾಡಲಾಗಿದೆ.

ಥಲಸೇಮಿಯಾ ಇರುವ ಮಕ್ಕಳಿಗೆ ಆಶಾದಾಯಕ ಪರಿಹಾರ ಎಂದರೆ ಅಸ್ಥಿಮಜ್ಜೆ ಕಸಿ (ಬೋನ್ ಮ್ಯಾರೊ ಟ್ರಾನ್ಸ್ಪ್ಲಾಂಟೇಶನ್). ರೇಷ್ಮಾ ಅವರ ಪ್ರಕಾರ ಕೆಲವೇ ಕೆಲವು ಅದೃಷ್ಟವಂತ ಮಕ್ಕಳಿಗೆ ಮಾತ್ರ ಈ ಅವಕಾಶ ಲಭ್ಯ. ಥಲಸೇಮಿಯಾ ಹೊಂದಿರುವ ಮಕ್ಕಳ ಎಚ್ಎಲ್ಎ ಟೈಪಿಂಗ್ ಮಾಡಲಾಗುತ್ತದೆ. ಇದು ಮಕ್ಕಳ ವಂಶವಾಹಿ (ಜೀನ್) ಮಾಹಿತಿಯನ್ನು ಒಳಗೊಂಡಿರುತ್ತದೆ.

ಸಂಬಂಧಿಕರ ಎಚ್ಎಲ್ಎಯೊಂದಿಗೆ (ಪ್ರತಿಜನಕ/ಆ್ಯಂಟಿಜನ್) ಹೊಂದಾಣಿಕೆ ಆದರೆ ಮಾತ್ರ ಆಪರೇಶನ್ ಸಾಧ್ಯ. ಶಸ್ತ್ರಚಿಕಿತ್ಸೆಗೂ ಮುಂಚಿನ ಹಾಗೂ ನಂತರದ ತಪಾಸಣೆಯನ್ನು ಉಚಿತವಾಗಿ ಸಂರಕ್ಷಾ ಕೇಂದ್ರದಲ್ಲಿಯೇ ಮಾಡಲಾಗುತ್ತದೆ. ಈವರೆಗೆ 30 ಮಕ್ಕಳಿಗೆ ಸಂಕಲ್ಪ ಇಂಡಿಯಾ ಫೌಂಡೇಷನ್ ವತಿಯಿಂದ ನಗರದ ಪ್ರತಿಷ್ಠಿತ ಆಸ್ಪತ್ರೆಯೊಂದರಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಲಾಗಿದೆ. ಸಂಸ್ಥೆ ಪ್ರತಿ ವರ್ಷ ಮೇ 8ರಂದು ಥಲಸೇಮಿಯಾ ದಿನವನ್ನೂ ಆಚರಿಸುತ್ತದೆ.

ಸೇವೆ ಖುಷಿಯ ವಿಷಯ
ಇಲ್ಲಿಗೆ ಬಂದು ಚಿಕಿತ್ಸೆ ಪಡೆದ ಅನೇಕ ಮಕ್ಕಳ ಆರೋಗ್ಯದಲ್ಲಿ ಸುಧಾರಣೆ ಕಂಡಿದೆ. ಅಂದಾಜಿನ ಪ್ರಕಾರ ಬೆಂಗಳೂರಿನಲ್ಲಿ ಸುಮಾರು 800 ಮಕ್ಕಳು ಥಲಸೇಮಿಯಾದಿಂದ ಬಳಲುತ್ತಿದ್ದಾರೆ. ಸರ್ಕಾರದ ನಿಯಮದ ಪ್ರಕಾರ ಯಾವುದೇ ಆಸ್ಪತ್ರೆಯಲ್ಲಾಗಲಿ ಥಲಸೇಮಿಯಾ ಎಂದು ಬಂದ ಮಕ್ಕಳಿಗೆ ಉಚಿತವಾಗಿ ರಕ್ತ ನೀಡಬೇಕು ಎಂದಿದೆ. ಆದರೆ ಎಲ್ಲರೂ ನಮ್ಮಲ್ಲಿ ರಕ್ತ ಇಲ್ಲ ಎಂದು ತಪ್ಪಿಸಿಕೊಳ್ಳುತ್ತಾರೆ.

ಸಾವಿರಾರು ಆಸ್ಪತ್ರೆ ಇರುವ ಬೆಂಗಳೂರಿನಲ್ಲಿ 800 ಮಕ್ಕಳಿಗೆ ಉಚಿತವಾಗಿ ರಕ್ತ ನೀಡುವುದು ಎಂದರೆ ದೊಡ್ಡ ಹೊರೆಯಲ್ಲ. ನಮ್ಮಲ್ಲಿ ಸುಮಾರು 600 ದಾನಿಗಳು ಇದ್ದಾರೆ. ಇದು ಲಾಭದ ವಿಷಯವಲ್ಲದಿದ್ದರೂ ಆಸ್ಪತ್ರೆಗಳು ಸ್ವಯಂ ಪ್ರೇರಣೆಯಿಂದ ಥಲಸೇಮಿಯಾ ಮಕ್ಕಳಿಗೆ ರಕ್ತ ನೀಡುವ ಮನಸ್ಸು ಮಾಡಿದರೆ ಅನೇಕ ಮಕ್ಕಳ ಮೊಗದಲ್ಲಿ ನಗುವುಕ್ಕಿಸಬಹುದು.
–ನಾರಾಯಣ, ವ್ಯವಸ್ಥಾಪಕರು, ರಾಷ್ಟ್ರೋತ್ಥಾನ ರಕ್ತನಿಧಿ, ದೂ– 080 26608870

ಥಲಸೇಮಿಯಾದಿಂದ ಬಳಲುತ್ತಿರುವ ಎಲ್ಲ ಮಕ್ಕಳಿಗೂ ಸಂರಕ್ಷಾ ಕೇಂದ್ರದಲ್ಲಿ ಉಚಿತವಾಗಿ ತಪಾಸಣೆ ಹಾಗೂ ಚಿಕಿತ್ಸೆ ಲಭ್ಯ. ಮೊ– 9448396110, ಇಮೇಲ್ projectsamraksha@gmail.com

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.