ಅದು 1956ರ ಜೂನ್ 6. ಖ್ಯಾತ ಕ್ರಿಮಿನಲ್ ವಕೀಲರಾಗಿದ್ದ ಬೇಲೂರು ಶ್ರೀನಿವಾಸ ಅಯ್ಯಂಗಾರ್, ಅವರ ಪತ್ನಿ, ಪುತ್ರರು ಹಾಗೂ ಮನೆ ಕೆಲಸದವರು ಬೆಂಗಳೂರಿನಲ್ಲಿ ಬರ್ಬರವಾಗಿ ಕೊಲೆಯಾಗಿದ್ದರು. ಹಣಕ್ಕಾಗಿ ಈ ಕೊಲೆ ನಡೆದಿತ್ತು. ಪ್ರಕರಣದ ಗಂಭೀರತೆಯನ್ನು ಪರಿಗಣಿಸಿದ ಸೆಷನ್ಸ್ ಕೋರ್ಟ್ ಎಲ್ಲರಿಗೂ ಗಲ್ಲು ಶಿಕ್ಷೆ ನೀಡಿತ್ತು.

ಇದನ್ನು ಹೈಕೋರ್ಟ್ ಎತ್ತಿ ಹಿಡಿದಿತ್ತು. 1956ರ ಜೂನ್ 6ರಂದು ಸುಪ್ರೀಂಕೋರ್ಟ್ ಕೂಡ ಈ ಶಿಕ್ಷೆ ಊರ್ಜಿತಗೊಳಿಸಿತು. ಇದು ಸ್ವಾತಂತ್ರ್ಯಾನಂತರ ರಾಜ್ಯದಲ್ಲಿ ಮರಣದಂಡನೆ ಜಾರಿಯಾದ ಮೊದಲ ಪ್ರಕರಣ.

ಅಲ್ಲಿಂದ ಇಲ್ಲಿಯವರೆಗೆ ನೂರಾರು ಪ್ರಕರಣಗಳಲ್ಲಿ ಸೆಷನ್ಸ್ ಕೋರ್ಟ್ಗಳು ಗಲ್ಲು ಶಿಕ್ಷೆ ವಿಧಿಸಿವೆ. ಹೈಕೋರ್ಟ್, ಸುಪ್ರೀಂಕೋರ್ಟ್ಗಳು ಅವುಗಳನ್ನು ಎತ್ತಿಹಿಡಿದಿವೆ. ಕೆಲವು ಪ್ರಕರಣಗಳಲ್ಲಿ ಗಲ್ಲು ಶಿಕ್ಷೆ ಜೀವಾವಧಿ ಶಿಕ್ಷೆಯಾಗಿ ಪರಿವರ್ತನೆಗೊಂಡಿವೆ. ಜೀವ ನೀಡುವ ಶಕ್ತಿ ಇಲ್ಲದವನಿಗೆ ಜೀವ ತೆಗೆಯುವ ಅಧಿಕಾರ ನೀಡಿದವರು ಯಾರು ಎನ್ನುವುದು ಒಂದು ಗುಂಪಿನ ವಾದ. ಆದರೆ ಈ ಅಧಿಕಾರದ ಕುರಿತು ಯೋಚನೆ ಮಾಡುತ್ತ ಕುಳಿತರೆ, ಅಂತಹ ವ್ಯಕ್ತಿಯಿಂದ ಇನ್ನೂ ಹೆಚ್ಚಿನ ಕೊಲೆ ನಡೆಯುವ ಸಾಧ್ಯತೆ ಇದೆ ಎನ್ನುವುದು ಇನ್ನೊಂದು ಗುಂಪಿನ ಪ್ರತಿವಾದ.ಅತ್ಯಂತ ಬರ್ಬರವಾಗಿ ಉದ್ದೇಶಪೂರ್ವಕವಾಗಿ ಹತ್ಯೆ ಮಾಡಿದ ವ್ಯಕ್ತಿಗೆ ಗಲ್ಲುಶಿಕ್ಷೆಯೇ ಕೋರ್ಟ್ ವಿಧಿಸಬಹುದಾದ ಕೊನೆಯ ಶಿಕ್ಷೆ ಎನ್ನುವುದು ಅವರ ಅಭಿಮತ. ಇಂಥ ವಾದ, ಪ್ರತಿವಾದಗಳ ಪರಿಣಾಮವಾಗಿ ಹಲವು ದೇಶಗಳು ಗಲ್ಲುಶಿಕ್ಷೆಯನ್ನು ರದ್ದು ಮಾಡಿವೆ.

1095ರಲ್ಲಿ ದಕ್ಷಿಣ ಆಫ್ರಿಕಾದ ಸರ್ಕಾರ `ಗಲ್ಲುಶಿಕ್ಷೆ ಕ್ರೂರ, ಅಮಾನವೀಯ~ ಎಂದು ಪ್ರಕಟಿಸಿ ಅದನ್ನು ರದ್ದು ಮಾಡಿದೆ. ನಂತರದ ಬೆಳವಣಿಗೆಯಲ್ಲಿ 127ದೇಶಗಳು ಗಲ್ಲು ಶಿಕ್ಷೆ ರದ್ದು ಪಡಿಸುವುದಕ್ಕೆ ಸಹಮತ ವ್ಯಕ್ತಪಡಿಸಿವೆ.. ಆದರೆ ಭಾರತ, ಚೀನಾ, ಅಮೆರಿಕಾ ಸೇರಿದಂತೆ 70ಕ್ಕೂ ಅಧಿಕ ರಾಷ್ಟ್ರಗಳಲ್ಲಿ ಈ ಶಿಕ್ಷೆ ಇನ್ನೂ ಚಾಲ್ತಿಯಲ್ಲಿ ಇವೆ.

ತಿದ್ದುಪಡಿಗೆ ಪ್ರಸ್ತಾವ: ಭಾರತೀಯ ದಂಡ ಸಂಹಿತೆಯ (ಐಪಿಸಿ) 302ನೇ ಕಲಮಿನ ಅಡಿ ಅಪರಾಧಿ ನಡೆಸಿದ ಅಪರಾಧದ ಗಂಭೀರತೆ ಯನ್ನು ಪರಿಗಣಿಸಿ ಜೀವಾವಧಿ ಶಿಕ್ಷೆ ಅಥವಾ ಮರಣದಂಡನೆ ವಿಧಿಸಲಾಗುತ್ತದೆ. ಐಪಿಸಿ ಜಾರಿಗೊಂಡಿದ್ದು 1861ರಲ್ಲಿ. ಆದರೆ ಭಾರತಕ್ಕೆ ಸ್ವಾತಂತ್ರ್ಯ ಬಂದ 1947ರ ನಂತರವೂ ಗಲ್ಲುಶಿಕ್ಷೆಗೆ ಸಂಬಂಧಿಸಿದಂತೆ ಇರುವ ಈ ಬ್ರಿಟಿಷ್ ನಿಯಮಕ್ಕೆ ತಿದ್ದುಪಡಿಯಾಗಲಿಲ್ಲ. ಭಾರತೀಯ ಸಂವಿಧಾನದ ಜಾರಿಗೆ ಮುನ್ನ 1947-1949ರ ಅವಧಿಯ ನಡುವೆ ಕರಡು ಪ್ರತಿ ತಯಾರಿಸುವ ಕಾರ್ಯ ನಡೆದಿತ್ತು. ಆ ಸಂದರ್ಭದಲ್ಲಿ ಗಲ್ಲು ಶಿಕ್ಷೆಯನ್ನು ಸಂವಿಧಾನದಲ್ಲಿ ಸೇರಿಸದಂತೆ ಕೆಲವು ಸದಸ್ಯರು ಶಿಫಾರಸು ಮಾಡಿದ್ದರು. ಶಿಕ್ಷೆಯ ಪ್ರಮಾಣ ಹಾಗೆಯೇ ಉಳಿದು ಕೊಂಡಿತು. ಈ ಶಿಕ್ಷೆಗೆ ತಾತ್ಕಾಲಿಕ ನಿಷೇಧ ಹೇರಬೇಕೆಂಬ ಬಗ್ಗೆ 2007ರಲ್ಲಿ ಅಮೆರಿಕಾದ ಸಾಮಾನ್ಯ ಸಭೆಯ ತೆಗೆದುಕೊಂಡ ನಿರ್ಣಯಕ್ಕೂ ಭಾರತ ಸಹಿ ಹಾಕಲು ನಿರಾಕರಿಸಿತು.

ಗಲ್ಲುಶಿಕ್ಷೆ ಯಾವಾಗ?: ಭಾರತೀಯ ಕ್ರಿಮಿನಲ್ ದಂಡ ಪ್ರಕ್ರಿಯಾ ಸಂಹಿತೆಯು (ಸಿಆರ್ಪಿಸಿ) ಜಾರಿಗೆ ಬಂದಿರುವುದು 1898ರಲ್ಲಿ. 1955ರಲ್ಲಿ ಅದಕ್ಕೆ ತಿದ್ದುಪಡಿಯಾಯಿತು. ಇದರ 367(5)ನೇ ಕಲಮು ಗಲ್ಲುಶಿಕ್ಷೆಯ ಕುರಿತಾಗಿ ವಿವರಿಸುತ್ತದೆ. ಕುತೂಹಲದ ಸಂಗತಿ ಎಂದರೆ ಇದಕ್ಕೆ ತಿದ್ದುಪಡಿಯಾಗುವ ಪೂರ್ವದಲ್ಲಿ ಯಾವುದೇ ಒಬ್ಬ ವ್ಯಕ್ತಿಗೆ ಗಲ್ಲುಶಿಕ್ಷೆ ನೀಡುವಾಗ ನ್ಯಾಯಾಧೀಶ ಅದಕ್ಕೆ ಕಾರಣ ನೀಡಬೇಕೆಂದಿರಲಿಲ್ಲ. ಆದರೆ ಜೀವಾವಧಿ ಶಿಕ್ಷೆ ನೀಡುವಾಗ ಮಾತ್ರ ಕಾರಣ ನೀಡಬೇಕಿತ್ತು. ಅದು ಯಾವುದೇ ಕೊಲೆಯಾಗಿರಲಿ, ಅದರ ಸ್ವರೂಪ ಹೇಗೆಯೇ ಇರಲಿ, ಕೊಲೆಗಾರರನಿಗೆ ಗಲ್ಲುಶಿಕ್ಷೆ ನಿಶ್ಚಿತ ವಾಗಿತ್ತು. ಒಂದು ವೇಳೆ ಕೆಲವು ನ್ಯಾಯಾಧೀಶರು ಗಲ್ಲುಶಿಕ್ಷೆ ಬದಲು ಜೀವಾವಧಿ ಶಿಕ್ಷೆ ಸಾಕು ಎಂಬ ಅಭಿಪ್ರಾಯಕ್ಕೆ ಬಂದರೆ ಗಲ್ಲುಶಿಕ್ಷೆ ಏಕೆ ನೀಡಲಿಲ್ಲ ಎಂಬುದನ್ನು ತೀರ್ಪಿನಲ್ಲಿ ಸ್ಪಷ್ಟಪಡಿಸಬೇಕಿತ್ತು.

ಆದರೆ ಈ ಕುರಿತು ತೀವ್ರ ವಿರೋಧ ವ್ಯಕ್ತವಾದ ನಂತರ 1955ರಲ್ಲಿ ತಿದ್ದುಪಡಿ ಮಾಡ ಲಾಯಿತು. ನಂತರ ಜೀವಾವಧಿ ಶಿಕ್ಷೆಗೆ ಕಾರಣ ನೀಡದೆ ಹೋದರೂ ಗಲ್ಲುಶಿಕ್ಷೆಗೆ ನ್ಯಾಯಾಧೀಶರು ಕಾರಣ ನೀಡಲೇಬೇಕಾಯಿತು ಎನ್ನುತ್ತದೆ ಇತಿಹಾಸ.

ಆದರೆ ಮರಣದಂಡನೆಯನ್ನು ಯಾವ ಪ್ರಕರಣಗಳಲ್ಲಿ ವಿಧಿಸಬೇಕು ಎಂಬ ಬಗ್ಗೆ ಕಾನೂನಿನಲ್ಲಿ ಸ್ಪಷ್ಟ ಚಿತ್ರಣ ಇರಲಿಲ್ಲ. ಇದಕ್ಕೆ ತೆರೆ ಬಿದ್ದಿದ್ದು 1980ರಲ್ಲಿ `ಬಚ್ಚನ್ ಸಿಂಗ್ ವರ್ಸಸ್ ಸ್ಟೇಟ್ ಆಫ್ ಪಂಜಾಬ್~ ಪ್ರಕರಣದಲ್ಲಿ. ಈ ಪ್ರಕರಣದಲ್ಲಿ ಸಿಂಗ್ಗೆ ಪಂಜಾಬ್ ಹೈಕೋರ್ಟ್ ಗಲ್ಲುಶಿಕ್ಷೆ ವಿಧಿಸಿತ್ತು. ಅದನ್ನು ಪ್ರಶ್ನಿಸಿ ಆತ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದ. ಈ ಪ್ರಕರಣದ ವಿಚಾರಣೆ ವೇಳೆ ಗಲ್ಲುಶಿಕ್ಷೆ ಕುರಿತಾಗಿ ಸುಪ್ರೀಂ ಕೋರ್ಟ್ ಕೆಲವೊಂದು ನಿಯಮಾವಳಿ ಗಳನ್ನು ರೂಪಿಸಿತು.

ಅವುಗಳೆಂದರೆ ನ್ಯಾಯಾಧೀಶರು ಗಲ್ಲು ಶಿಕ್ಷೆ ವಿಧಿಸುವ ಪೂರ್ವದಲ್ಲಿ ಕೊಲೆ ಮಾಡಿದ ರೀತಿ, ಅದರ ಗಂಭೀರತೆ ಯನ್ನು ಪರಿಗಣಿಸಬೇಕು, ಕೊಲೆ ಮಾಡಿದ ಉದ್ದೇಶ ಪರಿಗಣನೆಗೆ ತೆಗೆದುಕೊಳ್ಳಬೇಕು, ದೇಶ ವಿದ್ರೋಹ ಕೃತ್ಯದಲ್ಲಿ ತೊಡಗಿ ಸಮಾಜಕ್ಕೆ ಕಂಟಕನಾಗಬಹುದಾದ ಸಂದರ್ಭಗಳಲ್ಲಿ ಹಾಗೂ ಅಪರಾಧಿಯ ವೈಯಕ್ತಿಕ ಹಿನ್ನೆಲೆ (ಬಾಲಕ, ಮಾನಸಿಕ ಅಸ್ವಸ್ಥ ಇತ್ಯಾದಿ) ಪರಿಗಣಿಸಿ ಅದರ ಆಧಾರದ ಮೇಲೆ ಶಿಕ್ಷೆಯ ಪ್ರಮಾಣ ನಿಗದಿ ಮಾಡಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಇದರ ಅರ್ಥ, ಅಪರೂಪದಲ್ಲಿ ಅಪರೂಪವಾದ ಪ್ರಕರಣಗಳಲ್ಲಿ ಮಾತ್ರ ಮರಣದಂಡನೆ ನೀಡಬೇಕು ಎನ್ನುವುದು ಸುಪ್ರೀಂ ಕೋರ್ಟ್ ಅಭಿಪ್ರಾಯ. ಅಪರೂಪದಲ್ಲಿ ಅಪರೂಪ ಎಂಬ ಬಗ್ಗೆ ಸ್ಪಷ್ಟ ಚಿತ್ರಣ ಇಲ್ಲ ಎನ್ನುವುದೂ ಕಾನೂನು ತಜ್ಞರ ಅಭಿಮತ.

ಕ್ಷಮಾದಾನದ ಕುರಿತು ಚರ್ಚೆ: ಕ್ಷಮಾದಾನ ಮಾಡು ವಂತೆ ಕೋರಿ ಅಪರಾಧಿಗಳು ರಾಷ್ಟ್ರಪತಿಗಳಿಗೆ ಸಲ್ಲಿಸುವ ಮನವಿಯನ್ನು ಮೊದಲು ಸಚಿವ ಸಂಪುಟದ ಮುಂದೆ ಇಡಬೇಕಾಗುತ್ತದೆ. ಅಲ್ಲಿ ಅದು ಅನುಮೋದನೆ ಗೊಳ್ಳಬೇಕಾಗುತ್ತದೆ. ನಂತರ ಅದಕ್ಕೆ ರಾಷ್ಟ್ರಪತಿಗಳ ಅಂಕಿತ ಬೀಳಬೇಕು. ಆದರೆ ಈ ಕ್ಷಮಾದಾನಕ್ಕೆ ಸಂಬಂಧಿಸಿದಂತೆ ಕಾನೂನಿನಲ್ಲಿ ಸ್ಪಷ್ಟ ನಿಯಮಗಳು (ಉದಾ: ಎಷ್ಟು ಅವಧಿಯ ಒಳಗೆ ಇದನ್ನು ಇತ್ಯರ್ಥಗೊಳಿಸಬೇಕು, ಯಾವ ಸಂದರ್ಭಗಳಲ್ಲಿ ಕ್ಷಮಾದಾನ ನೀಡಬೇಕು ಎಂಬಿತ್ಯಾದಿ) ಇಲ್ಲ. ಆದುದರಿಂದ ರಾಷ್ಟ್ರಪತಿಗಳ ಮುಂದಿರುವ ಅಪರಾಧಿಗಳ ಮನವಿಯ ಪತ್ರಗಳು ದೂಳು ತಿನ್ನುತ್ತಿವೆ. ದಶಕ ಕಳೆದರೂ ಇತ್ಯರ್ಥಗೊಳ್ಳದ ಪ್ರಕರಣಗಳೇ ಇಲ್ಲಿ ಹೆಚ್ಚಾಗಿವೆ. ಇದು ಈಗ ಕಾನೂನು ವಲಯದಲ್ಲಿ ಬಹು ಚರ್ಚೆಗೆ ಗ್ರಾಸವಾಗಿದೆ. ಈ ರೀತಿ ವಿಳಂಬವಾದಲ್ಲಿ ಗಲ್ಲುಶಿಕ್ಷೆಗೆ ಒಳಗಾದ ವ್ಯಕ್ತಿ ಹಲವು ವರ್ಷಗಳ ಕಾಲ ಜೈಲಿನಲ್ಲಿಯೇ ಇರಬೇಕಾಗುತ್ತದೆ. ಇದು ಒಂದೆಡೆಯಾದರೆ, ಗಲ್ಲು ಶಿಕ್ಷೆಗೆ ಒಳಗಾದ ಅಪರಾಧಿಗೆ ತೀವ್ರ ನಿಗಾ ವಹಿಸಿ ಜೈಲಿನಲ್ಲಿ ಇಡಬೇಕಾಗುತ್ತದೆ. ಆತ ಬೇರೊಬ್ಬ ಕೈದಿಯ ಜೊತೆ ಸಂಪರ್ಕ ಬೆಳೆಸಬಾರದು ಎಂದು ಆತನಿಗೆ ವಿಶೇಷ ಭದ್ರತೆ ನೀಡಬೇಕಾಗುತ್ತದೆ. ಇದರಿಂದ ರಾಜ್ಯದ ಬೊಕ್ಕಸಕ್ಕೆ ಹೆಚ್ಚಿನ ಖರ್ಚು ಬೀಳುತ್ತದೆ. ಮುಂಬೈನ ತಾಜ್ ಹೊಟೇಲ್ನಲ್ಲಿ ಬಾಂಬ್ ಸ್ಫೋಟಗೊಳಿಸಿ ಗಲ್ಲುಶಿಕ್ಷೆಗೆ ಒಳಗಾಗಿರುವ ಕಸಾಬ್ ಇದಕ್ಕೆ ಉದಾಹರಣೆ. ಇದು ಎಷ್ಟರಮಟ್ಟಿಗೆ ಸರಿ ಎನ್ನುವುದು ಈ ತಜ್ಞರ ಪ್ರಶ್ನೆ. ಇಷ್ಟೆಲ್ಲ ಆದರೂ, ಅಪರಾಧಿಯ ಅರ್ಜಿಗಳನ್ನು ಮಾನ್ಯ ಮಾಡಿರುವ ಪ್ರಕರಣಗಳು ಬಹಳ ಅಪರೂಪ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.