ಬುಧವಾರ, ಜನವರಿ 29, 2020
23 °C
ಟೆಸ್ಟ್‌ ಸರಣಿ

ದ.ಆಫ್ರಿಕಾ ತಂಡದಲ್ಲಿ ಬದಲಾವಣೆಯಿಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಡರ್ಬನ್‌ (ಪಿಟಿಐ): ಗ್ರೇಮ್‌ ಸ್ಮಿತ್‌ ಅವರು ಭಾರತ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್‌ ಕ್ರಿಕೆಟ್‌ ಸರಣಿಗೆ ದಕ್ಷಿಣ ಆಫ್ರಿಕಾ ತಂಡವನ್ನು ಮುನ್ನಡೆಸಲಿದ್ದಾರೆ.

15 ಸದಸ್ಯರ ದಕ್ಷಿಣ ಆಫ್ರಿಕಾ ತಂಡ ವನ್ನು ಸೋಮವಾರ ಪ್ರಕಟಿಸಲಾ ಗಿದ್ದು, ಪಾಕಿಸ್ತಾನ ವಿರುದ್ಧ ಇತ್ತೀಚೆಗೆ ನಡೆದ ಟೆಸ್ಟ್‌ ಸರಣಿಯಲ್ಲಿ ಪಾಲ್ಗೊಂಡ ಎಲ್ಲ ಆಟಗಾರರನ್ನು ತಂಡದಲ್ಲಿ ಉಳಿಸಿಕೊಳ್ಳಲಾಗಿದೆ.ಟೆಸ್ಟ್‌ ಸರಣಿಗೆ ಸಿದ್ಧತೆ ನಡೆಸುವ ನಿಟ್ಟಿನಲ್ಲಿ ಸ್ಮಿತ್‌ ಅವರು ಭಾರತ ವಿರುದ್ಧದ ಏಕದಿನ ಸರಣಿಯಲ್ಲಿ ಆಡದಿರಲು ನಿರ್ಧರಿಸಿದ್ದರು.‘ಪಾಕಿಸ್ತಾನ ವಿರುದ್ಧ ದುಬೈನಲ್ಲಿ ನಡೆದ ಎರಡನೇ ಟೆಸ್ಟ್‌ನಲ್ಲಿ ದಕ್ಷಿಣ ಆಫ್ರಿಕಾ ನೀಡಿದ್ದ ಪ್ರದರ್ಶನ ನಮಗೆ ತೃಪ್ತಿ ತಂದಿತ್ತಿದೆ. ಆದ್ದರಿಂದ ಭಾರತ ವಿರುದ್ಧದ ಸರಣಿಗೆ ಅದೇ ತಂಡವನ್ನು ಉಳಿಸಿಕೊಳ್ಳಲು ನಿರ್ಧರಿಸಿದ್ದೇವೆ’ ಎಂದು ‘ಕ್ರಿಕೆಟ್‌ ದಕ್ಷಿಣ ಆಫ್ರಿಕಾ’ ಆಯ್ಕೆ ಸಮಿತಿ ಮುಖ್ಯಸ್ಥ ಆ್ಯಂಡ್ರ್ಯೂ ಹಡ್ಸನ್‌ ತಿಳಿಸಿದ್ದಾರೆ. ಉಭಯ ತಂಡ ಗಳ ನಡುವಿನ ಮೊದಲ ಟೆಸ್ಟ್‌ ಡಿಸೆಂ ಬರ್‌ 18 ರಿಂದ ಆರಂಭವಾಗಲಿದೆ.ತಂಡ ಹೀಗಿದೆ: ಗ್ರೇಮ್‌ ಸ್ಮಿತ್‌ (ನಾಯಕ), ಹಾಶಿಮ್‌ ಆಮ್ಲಾ, ಎಬಿ ಡಿವಿಲಿಯರ್ಸ್‌, ಜೆಪಿ ಡುಮಿನಿ, ಫಾಫ್‌ ಡು ಪ್ಲೆಸಿಸ್‌, ಡೀನ್‌ ಎಲ್ಗರ್‌, ಇಮ್ರಾನ್‌ ತಾಹಿರ್‌, ಜಾಕ್‌ ಕಾಲಿಸ್‌, ರೋರಿ ಕ್ಲೀನ್‌ವೆಲ್ಟ್‌, ಮಾರ್ನ್‌ ಮಾರ್ಕೆಲ್‌, ಅಲ್ವಿರೊ ಪೀಟರ್‌ಸನ್‌, ರಾಬಿನ್‌ ಪೀಟರ್‌ಸನ್‌, ವೆರ್ನಾನ್‌ ಫಿಲಾಂಡರ್‌, ಸ್ಟೇನ್‌, ತಾಮಿ ಸೊಲೆಕಿ

ಪ್ರತಿಕ್ರಿಯಿಸಿ (+)