ದಕ್ಷಿಣದಲ್ಲಿ ರಾಹುಲ್ಗೆ ಮುನ್ನಡೆ

ನವದೆಹಲಿ: ಅಭಿವೃದ್ಧಿ ಮತ್ತು ಆಡಳಿತವೇ ಈ ಬಾರಿಯ ಚುನಾವಣೆಯ ಮುಖ್ಯ ವಿಷಯಗಳು ಎಂದು ಆರ್ಎಸ್ಎಸ್ ಮುಖವಾಣಿ ‘ಆರ್ಗನೈಸರ್’ ಪತ್ರಿಕೆ ನಡೆಸಿರುವ ಜನಮತ ಸಮೀಕ್ಷೆ ಹೇಳಿದೆ. ಸಮೀಕ್ಷೆಯಲ್ಲಿ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ವಿಷಯವನ್ನು ಪ್ರಸ್ತಾಪಿಸಿಯೇ ಇಲ್ಲ.
ಪ್ರಧಾನಿ ಹುದ್ದೆಗೆ ಬಿಜೆಪಿಯ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರೇ ಮತದಾರರ ಆಯ್ಕೆ. ಆದರೆ ದಕ್ಷಿಣ ಭಾರತದಲ್ಲಿ ಮೋದಿ ಅವರಿಗಿಂತ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಮುಂದಿದ್ದಾರೆ ಎಂದು ‘ಆರ್ಗನೈಸರ್’ ವಾರಪತ್ರಿಕೆಯ ಇತ್ತೀಚಿನ ಸಂಚಿಕೆಯಲ್ಲಿ ಹೇಳಲಾಗಿದೆ.
ಆಸಕ್ತಿಕರ ವಿಷಯವೆಂದರೆ ಚುನಾವಣೆಯ ಪ್ರಮುಖ ಐದು ವಿಷಯಗಳಲ್ಲಿ ಭ್ರಷ್ಟಾಚಾರ ಸೇರಿಲ್ಲ. ಮತದಾರರು ಸೂಚಿಸಿದ ಹತ್ತು ವಿಷಯಗಳಲ್ಲಿ ಭ್ರಷ್ಟಾಚಾರವೂ ಸೇರಿದೆ.
ದೇಶದ ಎಲ್ಲ ಭಾಗಗಳ 380 ಲೋಕಸಭಾ ಕ್ಷೇತ್ರಗಳಲ್ಲಿ ಸಮೀಕ್ಷೆ ನಡೆಸಲಾಗಿದೆ. ‘ಆರ್ಗನೈಸರ್’ ಮತ್ತು ಲೋಕ ಸಾರಥಿ ಪ್ರತಿಷ್ಠಾನ ಜಂಟಿಯಾಗಿ ಸಮೀಕ್ಷೆ ನಡೆಸಿವೆ. 1.14 ಲಕ್ಷ ಮತದಾರರ ಅಭಿಪ್ರಾಯ ಸಂಗ್ರಹಿಸಿ ಈ ಅಭಿಪ್ರಾಯಕ್ಕೆ ಬರಲಾಗಿದೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.