ಗುರುವಾರ , ಜೂನ್ 24, 2021
29 °C

ದಕ್ಷಿಣ ಕೊರಿಯಾ: ಬೋಧಿ ಗಿಡ ಉಡುಗೊರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸೋಲ್‌(ಐಎಎನ್‌ಎಸ್‌): ದಕ್ಷಿಣ ಕೊರಿಯಾದ ಜತೆಗಿನ ಸೌಹಾರ್ದಯುತ ಸಂಬಂಧದ ಸಂಕೇತವಾಗಿ ಭಾರತವು ಬೋಧಗಯಾದಲ್ಲಿ ಬೆಳೆದ ಪವಿತ್ರ ಬೋಧಿ ಗಿಡವನ್ನು ಆ   ದೇಶಕ್ಕೆ ಉಡುಗೊರೆಯಾಗಿ ನೀಡಿದೆ.ದಕ್ಷಿಣ ಕೊರಿಯಾದ ಜನಸಂಖ್ಯೆ­ಯಲ್ಲಿ 5 ಕೋಟಿ  ಬೌದ್ಧ­ಧರ್ಮಿ­ಯರಿದ್ದಾರೆ. ಹೀಗಾಗಿ ಜನವರಿ­ಯಲ್ಲಿ ಭಾರತಕ್ಕೆ ಭೇಟಿ ನೀಡಿದ್ದ ದಕ್ಷಿಣ ಕೊರಿಯಾ ಪ್ರಧಾನಿ ಪಾರ್ಕ್‌ ಜಿನ್ಹೆ ಅವರಿಗೆ ಪ್ರಧಾನಿ ಮನ­ಮೋಹನ್‌ ಸಿಂಗ್‌ ಪವಿತ್ರ ಬೋಧಿ ಗಿಡ­ವನ್ನು ಉಡುಗೊರೆಯಾಗಿ ನೀಡಿ­ದ್ದಾರೆ.ಈ ಗಿಡವನ್ನು ಶುಕ್ರವಾರ ಭಾರತದ ವಿದೇಶಾಂಗ ಸಚಿವಾಲಯದ ಅಧಿಕಾರಿಗಳು, ದಕ್ಷಿಣ ಕೊರಿಯಾದ ಅಧಿ­ಕಾರಿಗಳಿಗೆ ಹಸ್ತಾಂತರಿಸಿದ್ದಾರೆ.  ಈ ಪವಿತ್ರ ಗಿಡವನ್ನು ತಾತ್ಕಾ­ಲಿ­ಕವಾಗಿ  ಕೊರಿಯಾದ ರಾಷ್ಟ್ರೀಯ ಸಸ್ಯಾಲಯ­ದಲ್ಲಿ ಇರಿಸ­ಲಾ­ಗುವುದು.ಬಳಿಕ ಬೌದ್ಧರಿಗೆ ಪ್ರಾರ್ಥನೆ ಸಲ್ಲಿಸಲು ಅನು­ಕೂಲ­ವಾಗುವಂತೆ ದೇಶದ ಪ್ರಮುಖ ಬೌದ್ಧ ದೇವಾಲ­ಯದಲ್ಲಿ ಇರಿಸಲಾ­ಗುತ್ತದೆ. ಮುಂದಿನ ದಿನಗಳಲ್ಲಿ ಭಾರತ ಮತ್ತು ದಕ್ಷಿಣ ಕೊರಿಯಾ ದೇಶದ ನಡುವಿನ ಸಂಬಂಧದಲ್ಲಿ ಪವಿತ್ರ ಬೋಧಿ ಗಿಡ ಶಕ್ತಿಯುತ ಸಂಕೇತವಾಗಿ ನಿಲ್ಲಲಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.