ಸೋಮವಾರ, ಏಪ್ರಿಲ್ 19, 2021
32 °C

ದಲಿತರ ಹಣ ದಲಿತರ ಅಭಿವೃದ್ಧಿಗೆ ಮೀಸಲಿಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸವಣೂರ: ದಲಿತ ಸಮುದಾಯದ ಅಭಿವೃದ್ಧಿಯಾಗಿ ಕಾಯ್ದಿರಿಸಲಾಗುವ ಅನುದಾನವನ್ನು ಸಮರ್ಪಕವಾಗಿ ಬಳಸ ಬೇಕು. ಸ್ಥಳೀಯ ಪುರಸಭೆಯ ಮುಕ್ತ ನಿಧಿಯ ಶೇ. 22.75ರ ಅಡಿ ಕೈಗೊಳ್ಳಲು ಉದ್ದೆೀಶಿಸಲಾಗಿರುವ ಕಾಮಗಾರಿಯನ್ನು ಬದಲಾಯಿಸಬೇಕು ಎಂದು ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ತಾಲ್ಲೂಕು ಘಟಕ ಆಗ್ರಹಿಸಿದೆ.ಈ ಕುರಿತಂತೆ ಸವಣೂರಿನ ಉಪ ವಿಭಾಗಾಧಿಕಾರಿಗಳ ಕಾರ್ಯಾಲಯಕ್ಕೆ ಮನವಿ ಸಲ್ಲಿಸಲಾಗಿದೆ. ಪುರಸಭೆಯ ದಲಿತ ಸಮುದಾಯದ ಕಲ್ಯಾಣಕ್ಕಾಗಿ ಕಾಯ್ದಿಟ್ಟ ಅನುದಾನದ ಅಡಿ 57 ಲಕ್ಷ ರೂಗಳ ಕ್ರಿಯಾಯೋಜನೆ ಸಿದ್ದಪಡಿಸ ಲಾಗಿದೆ. ಅದರಲ್ಲಿ 17.94 ಲಕ್ಷ ರೂಗಳ ವೆಚ್ಚದಲ್ಲಿ ಮಂತ್ರೋಡಿ ಗ್ರಾಮವನ್ನು ಸಂಪರ್ಕಿಸುವ ರೋಡ್ ಮೆಟ್ಲಿಂಗ್ ಡಾಂಬರೀಕರಣ ಕಾಮಗಾರಿ ಕೈಗೊಳ್ಳಲು ಉದ್ದೆೀಶಿಸಲಾಗಿದೆ.ಡಾ. ಗೋಕಾಕ ವೃತ್ತದಿಂದ ಮಾದಿಗ ಸಮಾಜದ ಸ್ಮಶಾನದ ವರೆಗೆ ಇರುವ ಸದರಿ ರಸ್ತೆ ಕಾಮಗಾರಿಯನ್ನು ರದ್ದು ಪಡಿಸಬೇಕು ಎಂದು ದಸಂಸ ಆಗ್ರಹಿಸಿದೆ. ಈ ರಸ್ತೆ ಮಂತ್ರೋಡಿ ಸವಣೂರ ಸಂಪರ್ಕ ಕಲ್ಪಿಸುವ ಒಳರಸ್ತೆಯಾಗಿದೆ. ಇಲ್ಲಿ ದಲಿತ ಸಮುದಾಯಕ್ಕೆ ಸೇರಿದ ಯಾವುದೇ ಬಡಾವಣೆ ಇರುವದಿಲ್ಲ. ಈ ರಸ್ತೆ ಸುಧಾರಣೆ ಕೈಗೊಂಡಲ್ಲಿ ಪರಿಶಿಷ್ಟ ಜಾತಿ ಪಂಗಡಗಳ ಅಭಿವೃದ್ಧಿಗೆ ಮೀಸ ಲಾದ ಅನುದಾನ ಅನ್ಯ ಕಾಮಗಾರಿಗೆ ಬಳಕೆಯಾಗುತ್ತದೆ ಎಂದರು.ಈ ಕಾಮಗಾರಿಯ ಬದಲಾಗಿ ಸವಣೂರಿನ ಅಂಬೇಡ್ಕರ್ ವೃತ್ತದಲ್ಲಿ ಅಂಬೇಡ್ಕರ್ ಅವರ ಕಂಚಿನ ಪುತ್ಥಳಿ ಸ್ಥಾಪಿಸಬೇಕು ಹಾಗೂ ದಲಿತರ ಬಡಾ ವಣೆಯಲ್ಲಿ  ಅಭಿವೃದ್ದಿ ಕಾರ್ಯ ಕೈಗೊಳ್ಳಬೇಕು. ಈ ವಿಷಯಕ್ಕೆ ಸಂಬಂಧಿ ಸಿದಂತೆ ಜಿಲ್ಲಾಧಿಕಾರಿಗಳ ಕಚೇರಿಯ ಸೂಚನೆಯನ್ನು ಪುರಸಭೆ ಪಾಲನೆ ಮಾಡಿಲ್ಲ. ಪುರಸಭೆ ಸದರಿ ರಸ್ತೆಯ ಅಭಿವೃದ್ಧಿಯನ್ನು ಕೈಗೊಂಡಲ್ಲಿ ಅದು, ಮೀಸಲು ಅನುದಾನವನ್ನು ದುರು ಪಯೋಗ ಪಡಿಸಿಕೊಂಡಂತೆ ಆಗಲಿದೆ ಎಂದು ದಸಂಸ ಎಚ್ಚರಿಸಿದೆ.ಮನವಿ ಸಲ್ಲಿಕೆಯ ಸಂದರ್ಭದಲ್ಲಿ ಉಮೇಶ ಮೈಲಮ್ಮನವರ್, ಲಕ್ಷ್ಮಣ ಕನವಳ್ಳಿ, ಹನುಮಂತಪ್ಪ ಪೂಜಾರ, ರಾಮಣ್ಣ ಹುಲ್ಲಮ್ಮನವರ್, ಮಲ್ಲೇಶ ಬಾಲೆಹೊಸೂರ, ಅಶೋಕ ರೆಡ್ಡಿ, ಶಾಂತಪ್ಪ ಬಿಸಿ, ಹೆಗ್ಗಪ್ಪ  ಬಸನಾಳ, ವಸಂತ ಮುಗಳಿ, ರವಿ ದೊಡ್ಮನಿ, ರವಿ ಮೈಲಮ್ಮನವರ್, ಶೇಖಪ್ಪ ಕೆಂಚಣ್ಣ ನವರ್ ಮುಂತಾದವರು ಉಪಸ್ಥಿತ ರಿದ್ದರು. ಉಪವಿಭಾಗಾಧಿಕಾರಿಗಳ ಕಚೇರಿಯ ಸಿಬ್ಬಂದಿ ಮನವಿ ಸ್ವೀಕರಿಸಿದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.