ಚಿಕ್ಕಬಳ್ಳಾಪುರ: ದಲಿತ ಸಮುದಾಯಗಳ ಸಮಸ್ಯೆಗಳನ್ನು ಪರಿಹರಿಸುವತ್ತ ನಿರ್ಲಕ್ಷ್ಯ ತೋರ ಲಾಗುತ್ತಿದೆ. ಬೇಡಿಕೆಗಳನ್ನು ಈಡೇರಿಸ ಲಾಗುತ್ತಿಲ್ಲ ಎಂದು ಆರೋಪಿಸಿ ದಲಿತ ಸಂಘರ್ಷ ಸಮಿತಿಯ ಮುಖಂಡರು ಮತ್ತು ಕಾರ್ಯ ಕರ್ತರು ಜಿಲ್ಲಾ ಉಸ್ತುವಾರಿ ಸಚಿವ ಎ.ನಾರಾ ಯಣ ಸ್ವಾಮಿ ಅವರನ್ನು ಘೇರಾವ್ ಮಾಡಲೆತ್ನಿ ಸಿದ ಘಟನೆ ಸೋಮವಾರ ನಗರದಲ್ಲಿ ನಡೆ ಯಿತು.

ಘೇರಾವ್ ಮಾಡಲು ಪೊಲೀಸರು ಅವಕಾಶ ನೀಡದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಪ್ರತಿಭಟ ನಾಕಾರರು ಸಚಿವರ ಕಾರಿನತ್ತ ನುಗ್ಗಲು ಯತ್ನಿ ಸಿದ್ದಲ್ಲದೇ ರಸ್ತೆ ಮಧ್ಯೆದಲ್ಲೇ ಕೂತು ಕೆಲ ಹೊತ್ತು ಪ್ರತಿಭಟನೆ ನಡೆಸಿದರು. ಬೆಳಿಗ್ಗೆ ಸುಮಾರು ಎರಡು ತಾಸಿಗೂ ಹೆಚ್ಚು ಕಾಲ ನಡೆದ ಈ ಎಲ್ಲ ಬೆಳವಣಿಗೆಯಿಂದ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು.

ಕರ್ನಾಟಕ ನಾಗರಿಕ ಸೇವೆಗಳ ಖಾತ್ರಿ ಅಧಿನಿಯಮ-2011 `ಸಕಾಲ~ ಸೇವೆಗೆ ಚಾಲನೆ ನೀಡಲು ಎ.ನಾರಾಯಣಸ್ವಾಮಿ ಆಗಮಿಸ ಲಿದ್ದಾರೆಂದು ಅರಿತ ದಲಿತ ಸಂಘರ್ಷ ಸಮಿತಿ ಸಂಘಟನೆಯ ಮುಖಂಡರು ಮತ್ತು ಕಾರ್ಯ ಕರ್ತರು ಬೆಳಿಗ್ಗೆ 10 ಗಂಟೆಯಿಂದಲೇ ನಗರದ ಶಿಡ್ಲಘಟ್ಟ ವೃತ್ತದಲ್ಲಿ ಗುಂಪು ಸೇರಿದ್ದರು. ಅಹಿತಕರ ಘಟನೆ ನಡೆದಯದಂತೆ ತಡೆಯಲು ಪೊಲೀಸ್ ಬಿಗಿ ಬಂದೋಬಸ್ತ್ ಕೂಡ ಕಲ್ಪಿಸ ಲಾಗಿತ್ತು. ಬೆಳಿಗ್ಗೆ 11 ಗಂಟೆ ಸುಮಾರಿಗೆ ನಾರಾ ಯಣಸ್ವಾಮಿಯವರ ಕಾರು ಶಿಡ್ಲಘಟ್ಟ ವೃತ್ತದ ಬಳಿ ಬರುತ್ತಿದ್ದಂತೆಯೇ ಸಂಘಟನೆಗಳ ಮುಖಂ ಡರು ಘೇರಾವ್ ಮಾಡಲೆತ್ನಿಸಿದರು.

ಮುಖಂ ಡರನ್ನು ಪೊಲೀಸರು ತಡೆ ಯುತ್ತಿ ರುವುದನ್ನು ಕಂಡ ಕೂಡಲೇ ನಾರಾಯಣಸ್ವಾಮಿ ಕಾರ್ನಿಂದ ಇಳಿದು ಮಾತುಕತೆಗೆ ಮುಂದಾದರು.ಅದೇ ಸಮಯಕ್ಕೆ ಸಂಘಟನೆಯ ಕೆಲ ಕಾರ್ಯಕರ್ತರು ಜಿಲ್ಲಾಡಳಿತ ಮತ್ತು ಸಚಿವರ ವಿರುದ್ಧ ಘೋಷಣೆಗಳನ್ನು ಹಾಕಲು ಶುರು ಮಾಡಿದರು. `ದಲಿತ ವಿರೋಧಿ ನೀತಿ ಅನುಸರಿಸ ಲಾಗುತ್ತಿದೆ. ದಲಿತರ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಮತ್ತು ಬೇಡಿಕೆಗಳನ್ನು ಈಡೇರಿಸುವಲ್ಲಿ ಜಿಲ್ಲಾಡಳಿತ ಮತ್ತು ಸಚಿವರು ವಿಫಲರಾಗಿದ್ದಾರೆ~ ಎಂದು ಆರೋಪಿಸ ತೊಡಗಿದರು.

ಮುಖಂಡರು ತಮ್ಮ ಕಾರ್ಯ ಕರ್ತರನ್ನು ಸಮಾಧಾನಪಡಿಸಲು ಯತ್ನಿಸಿದರು. ಸ್ಥಳದಲ್ಲೇ ಕೂತುಕೊಳ್ಳುವಂತೆ ಮನವಿ ಮಾಡಿದರು. ಒಂದೆರಡು ಕ್ಷಣಗಳು ಕಳೆ ಯುವು ದರೊಳಗೆ ಕೆಲ ಕಾರ್ಯಕರ್ತರು ಕ್ರಾಂತಿ ಗೀತೆಗಳನ್ನು ಹಾಡತೊಡಗಿದರು. ಹಾಡಿನ ಜೊತೆ ಜೊತೆಗೆ ಘೋಷಣೆಗಳನ್ನೂ ಸಹ ಹಾಕಲಾಗುತಿತ್ತು.

ಸಂಘಟನೆಯ ಸಂಚಾಲಕರಾದ ಕೆ.ಸಿ.ರಾಜಾ ಕಾಂತ್ ಮತ್ತು ಸು.ದಾ.ವೆಂಕಟೇಶ್ ಬಳಿ ನಿಂತಿದ್ದ ಸಚಿವ ಎ.ನಾರಾ ಯಣಸ್ವಾಮಿ ಯವರು, `ಸಮಸ್ಯೆಗಳನ್ನು ಬೇಗಬೇಗನೇ ಹೇಳಿ. ನಿಮ್ಮ ಸಮಸ್ಯೆಗಳನ್ನು ಆಲಿಸುತ್ತೇನೆ~ ಎಂದರು.

ಆದರೆ ಕ್ರಾಂತಿಗೀತೆ ಮತ್ತು ಘೋಷಣೆಗಳು ಮುಂದುವರೆದಿರುವುದು ಕಂಡು ಅಸಮಾ ಧಾನಗೊಂಡ ಅವರು ಕಾರು ಹತ್ತಿ ಸಮಾರಂಭ ಸ್ಥಳಕ್ಕೆ ಹೋಗಲು ಮುಂದಾದರು. ಇದರಿಂದ ಆಕ್ರೋಶಗೊಂಡ ಮುಖಂಡರು ಕಾರು ಮುಂದೆ ಹೋಗದಂತೆ ತಡೆಯಲು ಮುಂದಾದರು. ಬಲಪ್ರಯೋಗ ನಡೆಸಿದ ಪೊಲೀಸರು ಮುಖಂಡರು ಮತ್ತು ಕಾರ್ಯಕರ್ತರನ್ನು ಅಲ್ಲಿಂದ ಚದುರಿಸಿದರು. ನಾರಾಯಣಸ್ವಾಮಿಯವರ ಕಾರು, ಬೆಂಗಾವಲು ವಾಹನ ಸೇರಿದಂತೆ ಇತರ ವಾಹನಗಳು ಅಲ್ಲಿಂದ ಹೊರಟ ಕೂಡಲೇ ಪ್ರತಿಭಟನಕಾರರು ರಸ್ತೆ ಮಧ್ಯೆಯೇ ಕೂತು ಪ್ರತಿಭಟನೆ ನಡೆಸಿದರು.

`ಸಕಾಲ~ ಕಾರ್ಯಕ್ರಮ ನಡೆಯುವ ಸ್ಥಳವಾದ ಪ್ರಾದೇಶಿಕ ಸಾರಿಗೆ ಕಚೇರಿಗೆ (ಆರ್ಟಿಒ) ತೆರಳಿ ಪ್ರತಿಭಟನೆ ನಡೆಸಲು ನಿರ್ಧರಿಸಿದ ಸಂಘಟನೆಯ ಮುಖಂಡರು ಮತ್ತು ಕಾರ್ಯ ಕರ್ತರು ಕಾಲ್ನಡಿಗೆಯಲ್ಲೇ ಹೊರಟರು. ತಕ್ಷಣ ವೇ ಕಾರ್ಯಪ್ರವೃತ್ತರಾದ ಪೊಲೀಸರು ಎಲ್ಲ ಪ್ರತಿಭಟನಾಕಾರರನ್ನು ಬಂಧಿಸಿದರು. ಕಚೇರಿಗೆ ತಲುಪದಂತೆ ತಡೆಯುವಲ್ಲಿ ಯಶಸ್ವಿಯಾದರು.

ಕಾರ್ಯಕ್ರಮ ಮುಗಿಸಿ ಕೊಂಡು ನಾರಾಯಣಸ್ವಾಮಿಯವರು ಬೆಂಗಳೂ ರಿಗೆ ಹೊರಟ ನಂತರ ಪ್ರತಿಭಟನಾಕಾರರನ್ನು ಬಂಧನದಿಂದ ಬಿಡುಗಡೆ ಮಾಡಲಾಯಿತು. ಸಚಿವರನ್ನು ಘೇರಾವ್ ಮಾಡಲೆತ್ನಿಸಿದ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ.ಎನ್.ಮಂಜು ಳಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಟಿ.ಡಿ.ಪವಾರ್, ಡಿವೈಎಸ್ಪಿ ಎಂ.ಎಸ್.ಕಾಖಂಡಕಿ ಮತ್ತಿತರರು ಉಪಸ್ಥಿತರಿದ್ದರು.

ಏಪ್ರಿಲ್ 10ಕ್ಕೆ ಚಿಕ್ಕಬಳ್ಳಾಪುರ ಬಂದ್

ಚಿಕ್ಕಬಳ್ಳಾಪುರ: ದಲಿತ ಮುಖಂಡರೊಂದಿಗೆ ಜಿಲ್ಲಾ ಉಸ್ತುವಾರಿ ಸಚಿವ ಎ.ನಾರಾ ಯಣಸ್ವಾಮಿಯವರು ಅನುಚಿತವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿ ದಲಿತ ಸಂಘರ್ಷ ಸಮಿತಿ ಸಂಘಟನೆಯ ಮುಖಂಡರು ಏಪ್ರಿಲ್ 10ರಂದು ಚಿಕ್ಕಬಳ್ಳಾಪುರ ತಾಲ್ಲೂಕು ಬಂದ್ಗೆ ಕರೆ ನೀಡಿದ್ದಾರೆ.

`ಘೇರಾವ್ ಮಾಡಲೆತ್ನಿಸಿದ ಸಂದರ್ಭದಲ್ಲಿ ತಾಳ್ಮೆಯಿಂದ ಸಮಸ್ಯೆಗಳನ್ನು ಆಲಿಸಬೇಕಿದ್ದ ಸಚಿವ ಎ.ನಾರಾಯಣಸ್ವಾಮಿಯವರು ಅನುಚಿತವಾಗಿ ವರ್ತಿಸಿದ್ದಾರೆ. ಸಮಸ್ಯೆಗಳನ್ನು ಆಲಿಸದೇ ತಾಳ್ಮೆ ಕಳೆದುಕೊಂಡು ಘಟನಾ ಸ್ಥಳದಿಂದ ಹೋದ ಸಚಿವರು ದಲಿತರನ್ನು ಅವಮಾನಿಸಿದ್ದಾರೆ.

ಇದನ್ನು ಖಂಡಿಸಿ ಮತ್ತು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಏಪ್ರಿಲ್ 10ರಂದು ತಾಲ್ಲೂಕು ಬಂದ್ ಆಚರಿಸಲು ನಿರ್ಧರಿಸಿದ್ದೇವೆ~ ಎಂದು ದಲಿತ ಸಂಘರ್ಷ ಸಮಿತಿ ಸಂಚಾಲಕ ಕೆ.ಸಿ.ರಾಜಾಕಾಂತ್ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

`ದಲಿತ ಸಮುದಾಯದ ಸಮಸ್ಯೆಗಳನ್ನು ಬಗೆಹರಿಸದ ಅಧಿಕಾರಿಗಳ ವರ್ಗಾವಣೆ, ಜಿಲ್ಲಾ ಜಾಗೃತಿ ಸಮಿತಿಯ ಸಭೆಯಲ್ಲಿ ಕೈಗೊಳ್ಳಲಾದ ನಿರ್ಣಯಗಳ ಅನುಷ್ಠಾನ ಸೇರಿದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಅಂದು ಬಂದ್ ನಡೆಸಲಿದ್ದೇವೆ. ಆಗಲೂ ಸರ್ಕಾರದ ವತಿಯಿಂದ ಸಮರ್ಪಕ ಸ್ಪಂದನೆ ಸಿಗದಿದ್ದಲ್ಲಿ, ಜಿಲ್ಲಾ ಬಂದ್ ಕೈಗೊಳ್ಳಲಾಗುವುದು. ಸರ್ಕಾರ ಅದೇ ಧೋರಣೆ ಮುಂದುವರೆಸಿದ್ದಲ್ಲಿ, ರಾಜ್ಯದಾದ್ಯಂತ ಹೋರಾಟ ಕೈಗೊಳ್ಳಲಾಗುವುದು~ ಎಂದು ಅವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.