ಶನಿವಾರ, ಜನವರಿ 25, 2020
19 °C

ದಾಖಲೆ ಸಲ್ಲಿಸಲು ಒಪ್ಪಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇಸ್ಲಾಮಾಬಾದ್ (ಪಿಟಿಐ): ಮುಂಬೈ ಮೇಲಿನ 26/11 ಭಯೋತ್ಪಾದನಾ ದಾಳಿಯಲ್ಲಿ ಭಾಗಿಯಾಗಿದ್ದಾರೆ ಎಂದು ಶಂಕಿಸಲಾಗಿರುವ ಏಳು ಉಗ್ರರ ವಿಚಾರಣೆಯ ದಾಖಲೆಗಳನ್ನು ಭಾರತಕ್ಕೆ ಕಳುಹಿಸಲು ಪಾಕಿಸ್ತಾನದ ಭಯೋತ್ಪಾದನಾ ನಿಗ್ರಹ ನ್ಯಾಯಾಲಯ ಸಮ್ಮತಿಸಿದೆ.ಭಾರತಕ್ಕೆ ಭೇಟಿ ನೀಡಲಿರುವ ನ್ಯಾಯಾಂಗದ ಆಯೋಗದೊಂದಿಗೆ ದಾಖಲೆಗಳನ್ನು ಕಳುಹಿಸಲು ಪಾಕ್ ಒಪ್ಪಿದೆ.ಏಳು ಶಂಕಿತ ಉಗ್ರರ ವಿಚಾರಣೆ ನಡೆಸಿರುವ ದಾಖಲೆ ಮತ್ತು ಇನ್ನಿತರ ನ್ಯಾಯಾಲಯಕ್ಕೆ ಸಂಬಂಧಿಸಿದ ದಾಖಲೆಗಳನ್ನು ಭಾರತಕ್ಕೆ ಕಳುಹಿಸಲು ಅವಕಾಶ ನೀಡುವಂತೆ ಕೋರಿ ಪಾಕಿಸ್ತಾನದ ಸಂಯುಕ್ತ ತನಿಖಾ ಸಂಸ್ಥೆ (ಎಫ್‌ಐಎ) ನ್ಯಾಯಾಲಯದಲ್ಲಿ ಮನವಿ ಸಲ್ಲಿಸಿತ್ತು.ದಾಳಿ: 6 ಸಾವು

ಅಬುಜಾ (ಪಿಟಿಐ): ಉತ್ತರ ನೈಜೀರಿಯಾದ ನಸರಾವಾ ಪಟ್ಟಣದಲ್ಲಿನಚರ್ಚ್‌ನಲ್ಲಿ ಪ್ರಾರ್ಥನೆಯಲ್ಲಿ ನಿರತರಾಗಿದ್ದವರ ಮೇಲೆ ಶಂಕಿತ ಮೂಲಭೂತವಾದಿ ಉಗ್ರರ ಗುಂಪು ನಡೆಸಿದ ಗುಂಡಿನ ದಾಳಿಯಲ್ಲಿ ಪಾದ್ರಿಯ ಪತ್ನಿ ಸೇರಿ ಆರು ಜನರು ಮೃತರಾಗಿದ್ದಾರೆ.

 

ಪ್ರತಿಕ್ರಿಯಿಸಿ (+)