ದಾವಣಗೆರೆ: ಆರಂಭಿಕ ಆಟಗಾರ ರಾಹುಲ್ ಅವರ ಆಲ್ರೌಂಡ್ (32ಕ್ಕೆ3 ಮತ್ತು 10 ಬೌಂಡರಿ ಗಳಿದ್ದ 69) ಆಟ ಮತ್ತು ಶಶಾಂಕ್ (10 ಬೌಂಡರಿಗಳಿದ್ದ 48) ಅವರ ಉಪಯುಕ್ತ ಬ್ಯಾಟಿಂಗ್ ನೆರವಿನಿಂದ ದಾವಣಗೆರೆ ಕ್ರಿಕೆಟ್ ಅಕಾಡೆಮಿ, ಮಂಗಳವಾರ ನಡೆದ 40 ಓವರು ಗಳ ಕ್ರಿಕೆಟ್ (13 ವರ್ಷದೊಳ ಗಿನವರ) ಪಂದ್ಯದಲ್ಲಿ ಶ್ರೀಲಂಕಾದ ನಾನ್ಡಿಸ್ಟ್ರಿಪ್ಟ್ಸ ಸ್ಕೂಲ್ ಆಫ್ ಕ್ರಿಕೆಟ್ ತಂಡವನ್ನು ನಾಲ್ಕು ವಿಕೆಟ್ಗಳಿಂದ ಸೋಲಿಸಿತು.

ನಗರದ ಎಂಬಿಎ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟ್ ಮಾಡಿದ ಕೊಲಂಬೊದ ತಂಡ ನಿಗದಿತ 40 ಓವರುಗಳಲ್ಲಿ 8 ವಿಕೆಟ್ಗೆ 218 ರನ್ ಹೊಡೆಯಿತು. ಕಳೆದ ವಾರ ಶಿವಮೊಗ್ಗದಲ್ಲಿ ನಡೆದ ಆರು ಪಂದ್ಯಗಳ ಪೈಕಿ ನಾಲ್ಕರಲ್ಲಿ ಅರ್ಧ ಶತಕ ಹೊಡೆದಿದ್ದ ಯಸಿತ್ ಸಮರ ದಿವಾಕರ 13 ಬೌಂಡರಿಗಳಿದ್ದ 74 ರನ್ (75 ಎಸೆತ) ಬಾರಿಸಿದ್ದು ಗರಿಷ್ಠವೆನಿಸಿತು. ಆಫ್ ಸ್ಪಿನ್ನರ್ ರಾಹುಲ್ 3 ವಿಕೆಟ್ ಪಡೆದರು.

ಉತ್ತರವಾಗಿ ದಾವಣಗೆರೆ ಕ್ರಿಕೆಟ್ ಅಕಾಡೆಮಿ 36.4 ಓವರು ಗಳಲ್ಲಿ ಆರು ವಿಕೆಟ್ ನಷ್ಟದಲ್ಲಿ ವಿಜಯದ ರನ್ ಗಳಿಸಿತು. ಮಧ್ಯಮ ವೇಗಿ ಸಮರ ದಿವಾಕರ ಬೌಲಿಂಗ್ನಲ್ಲೂ ಮಿಂಚಿದರು.

ಸಂಕ್ಷಿಪ್ತ ಸ್ಕೋರು: ನಾನ್ಡಿಸ್ಟ್ರಿಪ್ಟ್ಸ ಸ್ಕೂಲ್ ಆಫ್ ಕ್ರಿಕೆಟ್, ಕೊಲಂಬೊ: 40 ಓವರುಗಳಲ್ಲಿ 8 ವಿಕೆಟ್ಗೆ 218 (ಯಸಿತ್ ಸಮರದಿವಾಕರ 74; ರಾಹುಲ್ 32ಕ್ಕೆ3); ದಾವಣಗೆರೆ ಕ್ರಿಕೆಟ್ ಅಕಾಡೆಮಿ: 36.4 ಓವರು ಗಳಲ್ಲಿ 6 ವಿಕೆಟ್ಗೆ 221 (ರಾಹುಲ್ 63, ಶಶಾಂಕ್ 48; ಯಸಿತ್ ಸಮರದಿವಾಕರ 41ಕ್ಕೆ3).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.