ಮಂಗಳವಾರ, ಜನವರಿ 21, 2020
29 °C

ದಿಯಾಗೆ ದಂಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ (ಪಿಟಿಐ): ಸುಂಕ ಪಾವತಿಸದೆ ಸುಮಾರು 2 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳನ್ನು ಒಯ್ಯುತ್ತಿದ್ದ ಬಾಲಿವುಡ್ ನಟಿ ದಿಯಾ ಮಿರ್ಜಾ ಅವರಿಗೆ ಇಲ್ಲಿನ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ ಅಧಿಕಾರಿಗಳು ರೂ ಒಂದು ಲಕ್ಷಕ್ಕೂ ಹೆಚ್ಚು ದಂಡ ವಿಧಿಸಿದ್ದಾರೆ.`ಥಾಯ್ ಏರ್‌ವೇಸ್~ ವಿಮಾನದಲ್ಲಿ ಬ್ಯಾಂಕಾಕ್‌ನಿಂದ ಮುಂಜಾನೆ 2 ಗಂಟೆಗೆ ಬಂದಿಳಿದ 30 ವರ್ಷದ ನಟಿ, ಸುಂಕ ಪಾವತಿ ಲಗೇಜ್ ಇಲ್ಲದ ಪ್ರಯಾಣಿಕರ ಮಾರ್ಗದಲ್ಲಿ (ಗ್ರೀನ್ ಚಾನೆಲ್) ತೆರಳುತ್ತಿದ್ದರು. ಆಗ ಅಧಿಕಾರಿಗಳು ಅವರ ಬ್ಯಾಗ್ ತಪಾಸಣೆ ಮಾಡಿದಾಗ  ಬ್ರಾಂಡೆಡ್ ಪರ್ಸ್, ಸೌಂದರ್ಯ ವರ್ಧಕ ಕಂಡುಬಂದವು.  ದಂಡ ಪಾವತಿ ಬಳಿಕ ಅವರನ್ನು ಬಿಡಲಾಯಿತು.ತಮಗೆ ಸುಂಕ ಪಾವತಿಸಬಾರದೆಂಬ ಯಾವುದೇ ಉದ್ದೇಶ ಇರಲಿಲ್ಲ, ಸುಂಕ ನೀತಿಯ ಬಗ್ಗೆ ಅರಿವಿನ ಕೊರತೆಯಿಂದ ಹೀಗಾಗಿದೆ ಎಂದು ಮಿರ್ಜಾ ತಿಳಿಸಿದ್ದಾಗಿ ಅಧಿಕಾರಿಗಳು ಹೇಳಿದ್ದಾರೆ.

ಪ್ರತಿಕ್ರಿಯಿಸಿ (+)