ಮಂಗಳವಾರ, ಜೂನ್ 15, 2021
21 °C
ನಮ್ಮ ಸಂಸದ, ನಮ್ಮ ನಿರೀಕ್ಷೆ

ದಿಲ್ಲೀಲಿ ‘ಕೊಬ್ಬರಿ’ ಮಾತಾಡ್‌ಬೇಕು...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೇರಳ ಸಂಸದರು ತೆಂಗು ಬೆಳೆಗಾರರ ಪರವಾಗಿ ವ್ಯವಸ್ಥಿತವಾಗಿ ಲಾಬಿ ಮಾಡಿ ಪ್ರತಿವರ್ಷ ತಮ್ಮ ರಾಜ್ಯಕ್ಕೆ ಹೆಚ್ಚು ಅನುದಾನ ಬಿಡುಗಡೆ ಮಾಡಿಸಿಕೊಳ್ಳುತ್ತಾರೆ. ತುಮಕೂರು ಕ್ಷೇತ್ರದಿಂದ ಯಾರೇ ಸಂಸದರಾಗಿ ಆಯ್ಕೆಯಾದರೂ ತೆಂಗು ಬೆಳೆಗಾರರ ಪರ ದೆಹಲಿಯಲ್ಲಿ ದನಿ ಎತ್ತಬೇಕು. ಪಕ್ಷ ಭೇದ ಮರೆತು ರಾಜ್ಯದ ಇತರ ಸಂಸದರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕೇಂದ್ರ ಸಚಿವಾಲಯದಲ್ಲಿ ಲಾಬಿ ಮಾಡುವ ಸಾಮರ್ಥ್ಯ ಇರಬೇಕು. ತುರುವೇಕೆರೆ ತಾಲ್ಲೂಕಿನಲ್ಲಿ ಇದೀಗ ತೆಂಗು ಬೆಳೆಗಾರರ ಕಂಪೆನಿ ಸ್ಥಾಪನೆಯಾಗಿದೆ. ಇತರ ತಾಲ್ಲೂಕುಗಳಲ್ಲಿ ಬೆಳೆಗಾರರ ಸಂಘಟನೆ ಚುರುಕಿನಿಂದ ನಡೆಯುತ್ತಿದೆ. ಈ ಕಾರ್ಯಕ್ಕೆ ನೂತನ ಸಂಸದರು ವೇಗ ನೀಡಬೇಕು. ಬೆಳೆಗಾರರ ಸಂಘಗಳು ಸ್ಥಾಪಿಸುವ ಸಹಕಾರಿ ಘಟಕಗಳಿಗೆ ಹೆಚ್ಚು ಅನುದಾನ ಒದಗಿಸಬೇಕು. ಕೇರಳಕ್ಕೆ ಹೆಚ್ಚು ಲಕ್ಷ್ಯ ನೀಡುತ್ತಿರುವ ತೆಂಗು ಅಭಿವೃದ್ಧಿ ಮಂಡಳಿಯ ಗಮನವನ್ನು ಕರ್ನಾಟಕದತ್ತ ಸೆಳೆಯಬೇಕು.

–ಸಿದ್ದಬಸಪ್ಪ, ಕರ್ನಾಟಕ ರಾಜ್ಯ ತೆಂಗು ಬೆಳೆಗಾರರ,ಸಂಘದ ಸಂಯೋಜಕ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.