ಕೋಲ್ಕತ್ತ (ಪಿಟಿಐ): ತೆರಿಗೆ ಮತ್ತು ಸಾಲ ಮರು ಪಾವತಿ ಕಾಲಾವಧಿಯನ್ನು ಇನ್ನೂ ಮೂರು ವರ್ಷಗಳಿಗೆ ವಿಸ್ತರಿಸುವಂತೆ ಶನಿವಾರ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿರುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಈ ಕುರಿತು ನಿರ್ಧಾರ ಕೈಗೊಳ್ಳಲು 15 ದಿನಗಳ ಗಡುವು ನೀಡಿದ್ದಾರೆ.

`ಮರು ಪಾವತಿಸಬೇಕಾಗಿರುವ ಸಾಲದ ಮೊತ್ತ ದೊಡ್ಡದಾಗಿರುವ ಕಾರಣ ಸದ್ಯಕ್ಕೆ ಅದನ್ನು ಹಿಂದಿರುಗಿಸಲು ಸಾಧ್ಯವಿಲ್ಲ. ಈ ಮೊದಲು ಅಧಿಕಾರದಲ್ಲಿದ್ದ ಎಡ ಪಕ್ಷಗಳ ಸರ್ಕಾರ ರಾಜ್ಯದ ಬೊಕ್ಕಸದ ಮೇಲೆ ಎರಡು ಲಕ್ಷ ಕೋಟಿ ರೂಪಾಯಿ ಸಾಲದ ಹೊರೆಯನ್ನು ಹೊರಿಸಿ ಹೋಗಿದೆ. ರಾಜ್ಯದ ಆದಾಯ 21 ಸಾವಿರ ಕೋಟಿ ರೂಪಾಯಿ ಇರುವಾಗ, ಇಷ್ಟು ದೊಡ್ಡ ಮೊತ್ತದ ಸಾಲದ ಹೊರೆಯನ್ನು ತಕ್ಷಣ ತೀರಿಸುವುದು ಸಾಧ್ಯವಿಲ್ಲದ ಮಾತು. ಒಂದು ವೇಳೆ ಸಾಲವನ್ನು ತೀರಿಸಿದರೆ ರಾಜ್ಯವನ್ನು ನಡೆಸುವುದಾದರೂ ಹೇಗೆ~ ಎಂದು ದೀದಿ ಖಾರವಾಗಿ ಪ್ರಶ್ನಿಸಿದ್ದಾರೆ.

ನಾಗರಿಕ ಸೇವಾ ಅಧಿಕಾರಿಗಳ ಸಮ್ಮೇಳನದಲ್ಲಿ ಮಾತನಾಡಿದ ಅವರು, ಸಾಲ ಮರು ಪಾವತಿ ಅವಧಿ ವಿಸ್ತರಿಸುವಂತೆ ಈಗಾಗಲೇ ಹಲವು ಬಾರಿ ಕೇಂದ್ರಕ್ಕೆ ಮನವಿ ಮಾಡಿಕೊಳ್ಳಲಾಗಿದೆ. ಪದೇ ಪದೇ ಕೇಂದ್ರದ ಎದುರು ಗೋಗರೆಯುವುದು ಸಾಧ್ಯವಿಲ್ಲ. ಈಗಾಗಲೇ ಒಂದು ವರ್ಷ ಕಾಯ್ದಿರುವೆ. ಇನ್ನೂ 15 ದಿನ ಕಾಯುತ್ತೇನೆ. ನಂತರ...~ ಎಂದು ಮಾರ್ಮಿಕವಾಗಿ ಪ್ರತಿಕ್ರಿಯಿಸಿದ್ದಾರೆ.

`ಕೇಂದ್ರ ಸರ್ಕಾರ ರಾಜ್ಯಕ್ಕೆ ನೀಡುತ್ತಿದ್ದ 1,500 ಕೋಟಿ ರೂಪಾಯಿ ಸಿಎಸ್ಟಿ ಪರಿಹಾರವನ್ನು ಸ್ಥಗಿತಗೊಳಿಸಿದೆ. ಕೇಂದ್ರದಿಂದ ಒಂದು ಪೈಸೆಯ ನೆರವೂ ದೊರೆತಿಲ್ಲ. ಹೀಗಾದರೆ ಜನರ ನಿತ್ಯದ ಅಗತ್ಯ, ಬೇಡಿಕೆಗಳನ್ನು ಪೂರೈಸುವುದಾದರೂ ಹೇಗೆ~ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

`ಇರುವ ಎಲ್ಲ ಹಣವನ್ನೂ ಕೇಂದ್ರಕ್ಕೆ ನೀಡಿದರೆ ರಾಜ್ಯದ ಅಭಿವೃದ್ಧಿ ಕಾರ್ಯ ನಡೆಯುವುದಾದರೂ ಹೇಗೆ ಮತ್ತು ಸರ್ಕಾರಿ ನೌಕರರ ಸಂಬಳ ಹೇಗೆ ನೀಡಬೇಕು~ ಎಂದು ಕೇಳಿರುವ ಅವರು, `ರಾಜ್ಯದ ಕೂಗು ಹತ್ತಿಕ್ಕುವ ಪ್ರಯತ್ನವನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಇದು ದೊಡ್ಡ ಮಟ್ಟದ ವಿವಾದಕ್ಕೆ ಕಾರಣವಾಗುತ್ತದೆ. ನನ್ನ ತಾಳ್ಮೆಯ ಕಟ್ಟೆಯೊಡೆಯುತ್ತಿದೆ~ ಎಂದು ಕೇಂದ್ರದ ವಿರುದ್ಧ ಹರಿಹಾಯ್ದಿದ್ದಾರೆ.

ಶೀಘ್ರದಲ್ಲೇ ಪ್ರಧಾನಿ ಅವರನ್ನು ಕಂಡು ಸಾಲ ಮತ್ತು ತೆರಿಗೆ ಪಾವತಿಗೆ ಕಾಲಾವಕಾಶ ನೀಡುವಂತೆ ಮನವಿ ಸಲ್ಲಿಸುವುದಾಗಿ ಅವರು ತಿಳಿಸಿದ್ದಾರೆ.

ಕಾಂಗ್ರೆಸ್ ತಣ್ಣೀರು
ನವದೆಹಲಿ (ಪಿಟಿಐ): ತೆರಿಗೆ ಮತ್ತು ಸಾಲ ಮರು ಪಾವತಿ ಕಾಲಾವಧಿ ವಿಸ್ತರಣೆಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ನೀಡಿರುವ ಗಡುವನ್ನು ಕಾಂಗ್ರೆಸ್ ತಳ್ಳಿಹಾಕಿದೆ.

ತನ್ನ ರಾಜ್ಯಕ್ಕೆ ಸಂಬಂಧಿಸಿದಂತೆ ಪ್ರತಿ ಮುಖ್ಯಮಂತ್ರಿಗೂ ಇಂತಹ ನ್ಯಾಯಸಮ್ಮತ ನಿರೀಕ್ಷೆಗಳಿರುವುದು ಸಹಜ ಎಂದು ಪಕ್ಷದ ವಕ್ತಾರ ಮನಿಶ್ ತಿವಾರಿ ಪ್ರತಿಕ್ರಿಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.