ಭಾನುವಾರ, ಏಪ್ರಿಲ್ 11, 2021
29 °C

ದೀನ್‌ದಯಾಳ್ ಉಪಾಧ್ಯಾಯರ ಚಿಂತನೆ ಇಂದಿಗೂ ಪ್ರಸ್ತುತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದೀನ್‌ದಯಾಳ್ ಉಪಾಧ್ಯಾಯರ ಚಿಂತನೆ ಇಂದಿಗೂ ಪ್ರಸ್ತುತ

ಬೆಂಗಳೂರು: `ಪಂಡಿತ್ ದೀನ್‌ದಯಾಳ್ ಉಪಾಧ್ಯಾಯ ಅವರ ತಾತ್ವಿಕ ಚಿಂತನೆಗಳು ಇಂದಿಗೂ ಪ್ರಸ್ತುತವಾಗಿವೆ~ ಎಂದು ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಹೇಳಿದರು.

ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ನಗರದಲ್ಲಿ ಶುಕ್ರವಾರ ಆಯೋಜಿಸಿದ್ದ `ಪಂಡಿತ್ ದೀನ್‌ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರಹಗಳ ಮೊದಲ ಐದು ಸಂಪುಟ~ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.`ಮುಂದಿನ ಐವತ್ತು ವರ್ಷಗಳಲ್ಲಿ ಅವಕಾಶವಾದಿ ರಾಜಕಾರಣ ಬರುತ್ತದೆ ಎಂದು ದೀನ್‌ದಯಾಳ್ ಅವರು ಹಿಂದೆಯೇ ಭವಿಷ್ಯ ನುಡಿದಿದ್ದರು. ಅವರ ಆ ಮಾತು ಇಂದಿಗೆ ಸತ್ಯವಾಗಿದೆ. ಇಂದು ರಾಜಕೀಯವು ಯಾವ ಕಡೆ ಸಾಗುತ್ತಿದೆ ಎಂಬುದನ್ನು ಚಿಂತನೆ ನಡೆಸಬೇಕಾಗಿದೆ~ ಎಂದರು.`ಅವರ ಆದರ್ಶಗಳು ಅನುಸರಣೀಯವಾಗಿವೆ. ಈಗಾಗಲೇ ಯಶವಂತಪುರ ಮೇಲ್ಸೇತುವೆಗೆ ಪಂಡಿತ್ ದೀನ್‌ದಯಾಳ್ ಉಪಾಧ್ಯಾಯ ಅವರ ಹೆಸರನ್ನಿಡಲಾಗಿದೆ~ ಎಂದರು.ಲೇಖಕ ತರುಣ್ ವಿಜಯ್ ಮಾತನಾಡಿ, `ದೀನ್‌ದಯಾಳ್‌ರ ಬರಹಗಳನ್ನು ಕನ್ನಡಾನುವಾದ ಮಾಡಿ ಸಂಪುಟ ರೂಪದಲ್ಲಿ ತಂದಿರುವ ಹೆಗ್ಗಳಿಕೆ ಕರ್ನಾಟಕ ರಾಜ್ಯಕ್ಕೆ ಸಲ್ಲುತ್ತದೆ. ಅವರ ಕ್ರಾಂತಿಕಾರಕ ವಿಚಾರಗಳು ಇಂದಿನ ಯುವಕರಿಗೆ ಆದರ್ಶಪ್ರಾಯವಾಗಿವೆ. ಅವುಗಳನ್ನು ಅನುಸರಿಸಬೇಕಾಗಿದ್ದು ಎಲ್ಲರ ಕರ್ತವ್ಯವಾಗಿದೆ~ ಎಂದು ಹೇಳಿದರು.`ನಗರಗಳ ಅಭಿವೃದ್ಧಿಯೇ ದೇಶದ ಅಭಿವೃದ್ಧಿ ಎಂದು ತಿಳಿದಿದ್ದೇವೆ. ಆದರೆ, ಇಂದು ರೈತನ ಮಗ ರೈತನಾಗಲು ಬಯಸುವುದಿಲ್ಲ. ಅಂದರೆ ನಮ್ಮತನವನ್ನು ಕಳೆದುಕೊಂಡು ನಾವು ಅಭಿವೃದ್ಧಿಯನ್ನು ಸಾಧಿಸುತ್ತಿದ್ದೇವೆ~ ಎಂದು ವಿಷಾದಿಸಿದರು.ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ದೀನ್‌ದಯಾಳ್ ಉಪಾಧ್ಯಾಯ ಸಂಶೋಧನಾ ಸಂಸ್ಥೆಯ ಡಾ.ಮಹೇಶ್ ಚಂದ್ರ ಶರ್ಮಾ, ಉಪ ಮುಖ್ಯಮಂತ್ರಿ ಆರ್.ಅಶೋಕ, ಕನ್ನಡ ಮತ್ತು ಸಂಸ್ಕೃತಿ ಹಾಗೂ ಸಣ್ಣ ನೀರಾವರಿ ಸಚಿವ ಗೋವಿಂದ ಎಂ. ಕಾರಜೋಳ, ಶಾಸಕ ಡಾ.ಡಿ.ಹೇಮಚಂದ್ರಸಾಗರ್ ಭಾಗವಹಿಸಿದ್ದರು.5 ಸಂಪುಟಗಳ ಕನ್ನಡಾನುವಾದ ಬಿಡುಗಡೆ

ಪಂಡಿತ್ ದೀನ್‌ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರಹಗಳನ್ನು ಸುಮಾರು 10 ಸಂಪುಟಗಳಲ್ಲಿ ಹೊರತರುವ ಯೋಜನೆಯಾಗಿದೆ. ಪ್ರಥಮ ಹಂತದಲ್ಲಿ ಐದು ಸಂಪುಟಗಳ ಕನ್ನಡಾನುವಾದ ಬಿಡುಗಡೆಯಾಗಿದೆ.ರಾಜ್ಯ ಸರ್ಕಾರ ಒಟ್ಟು 40 ಲಕ್ಷ ರೂಪಾಯಿಗಳನ್ನು ಈ 10 ಸಂಪುಟಕ್ಕೆ ನಿಗದಿಗೊಳಿಸಿದ್ದು, 5 ಸಂಪುಟಗಳ ಪ್ರಕಟಣೆಗಾಗಿ ರೂ 20 ಲಕ್ಷ ಬಿಡುಗಡೆ ಮಾಡಿದೆ. ಸಂಪುಟಗಳ ಬೆಲೆ ರೂ 625.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.