ಶುಕ್ರವಾರ, ಮಾರ್ಚ್ 5, 2021
21 °C

ದೀಪಿಕಾ ಸಿನಿಮಾ ಪ್ರೀತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದೀಪಿಕಾ ಸಿನಿಮಾ ಪ್ರೀತಿ

ಸ್ಕ್ವಾಷ್‌ ಆಟಗಾರ್ತಿ ದೀಪಿಕಾ ಪಳ್ಳಿಕಲ್‌ ಈಗ ದೆಹಲಿಯಲ್ಲಿ ಬೀಡುಬಿಟ್ಟಿದ್ದಾರೆ. ಭಾವಿ ಪತಿ ದಿನೇಶ್‌ ಕಾರ್ತಿಕ್‌ ದೆಹಲಿ ತಂಡದಲ್ಲಿರುವುದರಿಂದ ಆ ತಂಡವನ್ನು ಬೆಂಬಲಿಸುವುದು ಅವರ ಉದ್ದೇಶ. ಈ ನಡುವೆ ಅವರಿಗೆ ದೇಶದ ರಾಜಧಾನಿ ದೆಹಲಿಯ ಮೇಲೂ ಪ್ರೀತಿ ಮೊಳೆತಿದೆ. ಅದಕ್ಕೆ ಕಾರಣ ದೆಹಲಿಯಲ್ಲಿ ಸಿಗುವ ರುಚಿಕಟ್ಟಾದ ಊಟವಂತೆ.‘ದೆಹಲಿಯಲ್ಲಿ ಕಾಲ ಕಳೆಯುತ್ತಿರುವುದು ಒಂದು ವಿಭಿನ್ನ ಅನುಭವ. ನನ್ನ ಭೇಟಿ ಮಾಡಿದ ಇಲ್ಲಿನ ಕೆಲವು ಯುವಕ, ಯುವತಿಯರು ಸ್ಕ್ವಾಷ್‌ ಆಟದಲ್ಲಿ ತೊಡುಗುವ ಆಸಕ್ತಿ ವ್ಯಕ್ತಪಡಿಸಿದ್ದಾರೆ; ಅದೂ ನನಗಾಗಿ! ನನಗೆ ದೆಹಲಿಯ ‘ಖಾನ್‌ ಚಾಚಾ’ ಫುಡ್‌ ಜಾಯಿಂಟ್‌ನಲ್ಲಿ ಸಿಗುವ ರೋಲ್‌ ಅಂದ್ರೆ ಪಂಚಪ್ರಾಣ. ದೆಹಲಿಗೆ ಬಂದಾಗೆಲ್ಲ ಇಲ್ಲಿಗೆ ಭೇಟಿ ನೀಡಬೇಕು ಎಂದು ಈಗಲೇ ನಿಶ್ಚಯಿಸಿಕೊಂಡಿದ್ದೇನೆ’ ಎಂದಿದ್ದಾರೆ ಈ ಬೆಡಗಿ.ದೀಪಿಕಾ ಅವರಿಗೆ ಸಿನಿಮಾಗಳನ್ನು ನೋಡುವುದೆಂದರೆ ತುಂಬಾ ಇಷ್ಟವಂತೆ. ‘‘ನನಗೆ ಸಿನಿಮಾಗಳನ್ನು ನೋಡುವುದರಲ್ಲಿ ವಿಪರೀತ ಆಸಕ್ತಿ. ಪ್ರವಾಸದ ವೇಳೆ ಸಾಕಷ್ಟು ಸಿನಿಮಾಗಳನ್ನು ನೋಡುತ್ತೇನೆ. ಈಚೆಗೆ ‘ಭಾಗ್‌ ಮಿಲ್ಖಾ ಭಾಗ್‌’ ಸಿನಿಮಾ ನೋಡಿದೆ. ಆ ಚಿತ್ರ ನನಗೆ ಇಷ್ಟವಾಯಿತು’’ ಎಂದಿದ್ದಾರೆ ದೀಪಿಕಾ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.