ಗುರುವಾರ , ಮೇ 19, 2022
24 °C

ದುಬಾರಿ ಬೆಲೆಗೆ ಗೊಬ್ಬರ ಮಾರಾಟ: ಕಾನೂನು ಬಾಹಿರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಡಿಕೇರಿ: ರಸಗೊಬ್ಬರವನ್ನು ದುಬಾರಿ ಬೆಲೆಗೆ ಮಾರಾಟ ಮಾಡುತ್ತಿರುವುದು ಕಾನೂನು ಬಾಹಿರ ಎಂದು ಕಾನೂನು ಮಾಪನ ಶಾಸ್ತ್ರ ಇಲಾಖೆ ನಿರೀಕ್ಷಕರು ತಿಳಿಸಿದ್ದಾರೆ.ದುಬಾರಿ ವೆಚ್ಚಕ್ಕೆ ಗೊಬ್ಬರ ಮಾರಾಟ ತಪ್ಪಲ್ಲ ಎಂಬುದಾಗಿ ಬಿಟ್ಟಂಗಾಲ ಕೃಷಿ ಪತ್ತಿನ ಸಹಕಾರ ಸೇವಾ ಸಂಘದ ಬ್ಯಾಂಕ್‌ನ ಅಧ್ಯಕ್ಷರು ವಿವಿಧ ಪತ್ರಿಕೆಗಳಲ್ಲಿ ಹೇಳಿಕೆ ನೀಡ್ದ್ದಿದನ್ನು ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ಅವರು ಉಲ್ಲೇಖಿಸಿದ್ದಾರೆ.ವಾಸ್ತವವಾಗಿ ರಸಗೊಬ್ಬರ ಸರಬರಾಜುದಾರರು ಪರವಾನಗಿ (ಲೈಸನ್ಸ್) ಪಡೆದು ಮಾರಾಟ ಮಾಡುವ ಸ್ಥಳಕ್ಕೆ ರಸಗೊಬ್ಬರವನ್ನು ಪೂರೈಕೆ ಮಾಡಲು ಕಂಪೆನಿಯವರೆ ಹೊಣೆಗಾರರಾಗಿರುತ್ತಾರೆ.ಹಾಸನ, ಕುಶಾಲನಗರದಿಂದ ರಸಗೊಬ್ಬರವನ್ನು ಲಾರಿಗಳಲ್ಲಿ ತರಿಸಿದ್ದೇವೆಂದು ರೈತರಿಗೆ ಮಾಹಿತಿಯನ್ನು ನೀಡಿ ರೈತರಿಂದ ಪ್ರತಿ ಚೀಲಕ್ಕೆ ರೂ. 45 ರಿಂದ 50 ರವರೆಗೆ ಹೆಚ್ಚಿನ ದರವನ್ನು ವಸೂಲಿ ಮಾಡಿರುತ್ತಾರೆ. ಇದಕ್ಕೆ ಬಿಲ್ ಹಾಗೂ ಮತ್ತಿತರ ದಾಖಲಾತಿಗಳು ಯಾವುದು ಇರುವುದಿಲ್ಲ, ಇದು ಕಾನೂನು ಬಾಹಿರವಾಗಿರುತ್ತದೆ. ಅಲ್ಲದೆ ರೈತರಿಗೆ ಮೋಸ ಮಾಡಿದಂತೆ ಎಂದು ಅವರು ತಿಳಿಸಿದ್ದಾರೆ.ರೈತರಿಗೆ ಆಗುವಂತಹ ವಂಚನೆ ಹಾಗೂ ಮೋಸವನ್ನು ತಡೆಗಟ್ಟಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಅವರು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.ಈ ರೀತಿ ರೈತರಿಗೆ ಅನ್ಯಾಯ ಎಸಗುವ ಕೇಂದ್ರಗಳ ವಿರುದ್ಧ ಮೊಕದ್ದಮೆ ಹೂಡಲಾಗುವುದು. ಆದ್ದರಿಂದ ರಸಗೊಬ್ಬರದ ನಿಗದಿತ ಬೆಲೆಯನ್ನು ಹೆಚ್ಚಿಸುವಂತಹ ಕಾನೂನು ಬಾಹಿರ ಕ್ರಮವನ್ನು ಯಾವುದೇ ರೈತ ಸಹಕಾರ ಸೇವಾ ಸಂಘಗಳು ಕೈಗೊಳ್ಳಬಾರದು. ತಪ್ಪಿದಲ್ಲಿ ಪೊಟ್ಟಣ ಸರಕು ಕಾಯಿದೆ ನಿಯಮ 18(2) ರಂತೆ 32(2) ರಂತೆ ಸಂಘಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದೆಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.