ಗುರುವಾರ , ಏಪ್ರಿಲ್ 22, 2021
27 °C

ದುಬಾರಿ ಬೈಕ್ ಶೀಘ್ರ ಮಾರುಕಟ್ಟೆಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಗರ್ವಾರೆ ಮೋಟಾರ್ಸ್, ದಕ್ಷಿಣ ಕೊರಿಯಾದ ಹ್ಯೊಸಂಗ್ ಬ್ರಾಂಡ್‌ನ ವಿಲಾಸಿ ಮತ್ತು ದುಬಾರಿ ದ್ವಿಚಕ್ರ ವಾಹನಗಳನ್ನು ಶೀಘ್ರದಲ್ಲಿಯೇ ಭಾರತದ ಮಾರುಕಟ್ಟೆಗೆ ಪರಿಚಯಿಸಲಿದೆ.ಅಮೆರಿಕ, ಇಂಗ್ಲೆಂಡ್, ಆಸ್ಟ್ರೇಲಿಯಾ ಮತ್ತಿತರ ಕಡೆ ಜನಪ್ರಿಯವಾಗಿರುವ ಈ ದುಬಾರಿ ಬೈಕ್‌ಗಳ ಬಿಡಿಭಾಗಗಳನ್ನು ಆಮದು ಮಾಡಿಕೊಂಡು ಸ್ಥಳೀಯವಾಗಿ ಜೋಡಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುವುದು ಎಂದು ಗರ್ವಾರೆ ಮೋಟಾರ್ಸ್‌ನ ಮುಖ್ಯಸ್ಥೆ ದಿಯಾ ಗರ್ವಾರೆ, ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಈ ಬೈಕ್‌ಗಳನ್ನು ತಯಾರಿಸುವ ದಕ್ಷಿಣ ಕೊರಿಯಾದ ಎಸ್‌ಆಂಡ್‌ಟಿ ಮೋಟಾರ್ಸ್ ಜತೆಗಿನ ಸಹಭಾಗಿತ್ವದಲ್ಲಿ ಈ ಬೈಕ್‌ಗಳನ್ನು ಪರಿಚಯಿಸಲಾಗುತ್ತಿದೆ. ಪುಣೆ ಬಳಿಯ ವಾಯಿ ಎಂಬಲ್ಲಿ ಬೈಕ್‌ಗಳ ಬಿಡಿಭಾಗ ಜೋಡಣೆ ಘಟಕವನ್ನು 20 ಕೋಟಿ ವೆಚ್ಚದಲ್ಲಿ ಆರಂಭಿಸಲಾಗಿದೆ. ಪ್ರತಿ ದಿನ 8ರಿಂದ 10 ಬೈಕ್‌ಗಳನ್ನು ಜೋಡಿಸುವ ಸಾಮರ್ಥ್ಯ ಈ ಘಟಕ ಹೊಂದಿದೆ. ಜಿ. ಟಿ 650 ಆರ್ ಬೈಕ್‌ನ ಬೆಲೆ ್ಙ 5.50 ಲಕ್ಷ ಮತ್ತು ಎಸ್‌ಟಿ7 ಬೆಲೆ ್ಙ 6.5ಲಕ್ಷ ಇರಲಿದೆ  ಈ ದುಬಾರಿ ಬೈಕ್‌ಗಳ ಖರೀದಿಗೆ ಅಗತ್ಯವಾದ ಹಣಕಾಸು ಸೌಲಭ್ಯ ಒದಗಿಸಲಾಗುವುದು. ಏಪ್ರಿಲ್ ತಿಂಗಳಾಂತ್ಯದ ಹೊತ್ತಿಗೆ ಈ ಬೈಕ್‌ಗಳು ರಸ್ತೆಗೆ ಇಳಿಯಲಿವೆ ಎಂದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.