ಮುಂಬೈ (ಪಿಟಿಐ): ಬೆಂಗಳೂರಿನಲ್ಲಿ ನಡೆದ ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ ಐಪಿಎಲ್ ಫ್ರ್ಯಾಂಚೈಸಿಗಳಿಂದ ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಮುಂದಿನ ತಿಂಗಳು ದುಬೈನಲ್ಲಿ ನಡೆಯಲಿರುವ ಎಮಿರೇಟ್ಸ್ ಏರ್ಲೈನ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಆಡಲಿದ್ದಾರೆ.

ತಾರಾ ಕ್ರಿಕೆಟ್ ಆಟಗಾರರಿಂದ ತುಂಬಿರುವ ಎಂಸಿಸಿ (ಮೆರಿಲ್ಬೋನ್ ಕ್ರಿಕೆಟ್ ಕ್ಲಬ್) ತಂಡದ ಪರವಾಗಿ ಗಂಗೂಲಿ ಆಡಲಿದ್ದಾರೆ. ‘ಎಂಸಿಸಿ ಪರ ಆಡುವ ಅವಕಾಶ ಒದಗಿದ್ದು ನನಗೆ ಸಿಕ್ಕ ಗೌರವವಾಗಿದೆ. ಇದರಿಂದ ನನಗೆ ತುಂಬಾ ಹರ್ಷವಾಗಿದೆ’ ಎಂದು ಅವರು ಹೇಳಿದ್ದಾರೆ.

‘ಕಳೆದ ಬೇಸಿಗೆಯಲ್ಲಿ ಪಾಕಿಸ್ತಾನ ತಂಡವನ್ನು ಎದುರಿಸಿದ ಎಂಸಿಸಿ ತಂಡದ ನಾಯಕನಾಗಿ ನಾನು ಆಡಿದ್ದೆ. ಈಗ ಮತ್ತೆ ಆ ತಂಡದ ಪರ ಆಡುವ ಅವಕಾಶ ಸಿಕ್ಕಿದ್ದರಿಂದ ನಾನು ರೋಮಾಂಚಿತನಾಗಿದ್ದೇನೆ. ಎಂಸಿಸಿ ಜೊತೆ ಇದೇ ರೀತಿಯ ಸುಮಧುರ ಸಂಬಂಧವನ್ನು ಮುಂದುವರಿಸಿಕೊಂಡು ಹೋಗಲು ಉತ್ಸುಕನಾಗಿದ್ದೇನೆ’ ಎಂದು ಗಂಗೂಲಿ ತಿಳಿಸಿದ್ದಾರೆ. ಐಪಿಎಲ್ನ ಮೊದಲ ಮೂರು ಆವೃತ್ತಿಯಲ್ಲಿ ನೈಟ್ ರೈಡರ್ಸ್ ಪರ ಆಡಿದ್ದ ಗಂಗೂಲಿ, ಯಾವ ತಂಡಕ್ಕೂ ಆಯ್ಕೆಯಾಗದ ಹಿನ್ನೆಲೆಯಲ್ಲಿ ನಾಲ್ಕನೇ ಆವೃತ್ತಿಯಲ್ಲಿ ಆಡುತ್ತಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.