ಕೊಪ್ಪಳ: ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ಎಸ್ಎಸ್) ಕುರಿತು ಸಚಿವ ಪ್ರಿಯಾಂಕ್ ಖರ್ಗೆ ದೆವ್ವ ಎಂದು ಸರಿಯಾಗಿಯೇ ಹೇಳಿಕೆ ನೀಡಿದ್ದಾರೆ. ಕೇಂದ್ರ ಸರ್ಕಾರ ಮತ್ತೊಬ್ಬರ ಮೇಲೆ ಇಡಿ, ಐಟಿ, ಸಿಬಿಐ ದಾಳಿ ಮಾಡುವ ಬದಲು ಆರ್ಎಸ್ಎಸ್ ಕಚೇರಿ ಮೇಲೆ ಮೊದಲು ದಾಳಿ ನಡೆಸಲಿ ಎಂದು ಹಿಂದುಳಿದ ವರ್ಗಗಳ ಖಾತೆ ಸಚಿವ ಶಿವರಾಜ ತಂಗಡಗಿ ಹೇಳಿದರು.

ನಗರದಲ್ಲಿ ಸೋಮವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು ‘ಯಾವತ್ತಿದ್ದರೂ ಆರ್ಎಸ್ಎಸ್ ಲೆಕ್ಕ ಕೊಡಲೇಬೇಕು. ನೂರು ವರ್ಷಗಳನ್ನು ಪೂರೈಸಿರುವ ಸಂಸ್ಥೆಗೆ ದೊಡ್ಡಮೊತ್ತ ಎಲ್ಲಿಂದ ಬರುತ್ತದೆ. ಯಾರೆಲ್ಲ ಹಣ ಕೊಡುತ್ತಾರೆ ಎನ್ನುವುದು ಬಹಿರಂಗವಾಗಬೇಕು. ಸಣ್ಣ ಸಂಸ್ಥೆಯಾದರೂ ನೋಂದಣಿ ಮಾಡಿಕೊಳ್ಳಬೇಕು. ದೊಡ್ಡ ಸಂಸ್ಥೆಯಾದರೂ ಯಾಕೆ ನೋಂದಣಿಯಾಗಿಲ್ಲ, ಆರ್ಎಸ್ಎಸ್ ಕಚೇರಿ ಮೇಲೆ ಕೇಂದ್ರ ತನಿಖಾ ಸಂಸ್ಥೆಗಳು ದಾಳಿ ನಡೆಸಿ ಹಣದ ಮೂಲ ಪತ್ತೆ ಹಚ್ಚಲಿ’ ಎಂದು ವಾಗ್ದಾಳಿ ನಡೆಸಿದರು.

‘ರಾಜ್ಯ ಹಾಗೂ ದೇಶದಲ್ಲಿ ಕೋಮುವಾದ ಹೆಚ್ಚುತ್ತಿದೆ. ದೊಡ್ಡ ಪ್ರಮಾಣದ ಹೂಡಿಕೆ ಮಾಡಬೇಕೆಂದರೆ ಉತ್ತಮ ವಾತಾವರಣ ಇರಬೇಕು. ಹೂಡಿಕೆದಾರರು ಇದೆಲ್ಲವನ್ನು ವಿಚಾರ ಮಾಡುತ್ತಾರೆ. ಅದಕ್ಕೆ ಕರಾವಳಿ ಭಾಗಕ್ಕೆ ಐಟಿ, ಬಿಟಿ ಬರುತ್ತಿಲ್ಲ. ಬಿಜೆಪಿಗರಿಗೆ ಕಲ್ಯಾಣ ಕರ್ನಾಟಕದ ಅಭಿವೃದ್ಧಿ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ’ ಎಂದರು.
.ಆರ್ಎಸ್ಎಸ್ ನೋಂದಣಿ ನಾನೇ ಮಾಡಿಸ್ತೀನಿ: ಸಚಿವ ಪ್ರಿಯಾಂಕ್ ಖರ್ಗೆ.RSS ಇಲ್ಲದಿದ್ದರೆ ಬಿಜೆಪಿಯು ಜೆಡಿಎಸ್ಗಿಂತಲೂ ಕನಿಷ್ಠ: ಪ್ರಿಯಾಂಕ್ ಖರ್ಗೆ.RSS ಬಗ್ಗೆ 6 ತಿಂಗಳು ಅಧ್ಯಯನ ಮಾಡಿ, ಬಳಿಕ ಮಾತನಾಡಿ: ಪ್ರಿಯಾಂಕ್ ವಿರುದ್ಧ ಬಿವೈವಿ