ಗುರುವಾರ , ಮಾರ್ಚ್ 4, 2021
29 °C

ದುರ್ಬಲರತ್ತ ‘ಸಿಂಹ ಹಸ್ತ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದುರ್ಬಲರತ್ತ ‘ಸಿಂಹ ಹಸ್ತ’

‘ನಮ್ಮ ಈ ನಡೆಗೆ ವಿಷ್ಣುವರ್ಧನ್ ಅವರೇ ಪ್ರೇರಣೆ’. ‘ನಾಗರಹಾವು’ ಸಿನಿಮಾದ ಸುದ್ದಿಗೋಷ್ಠಿಯಲ್ಲಿ ವಿಷ್ಣುವರ್ಧನ್ ಅವರನ್ನು ನಿರ್ಮಾಪಕ ಸಾಜಿದ್‌ ಖುರೇಷಿ ನೆನೆಪಿಸಿಕೊಂಡಿದ್ದು ಹೀಗೆ. ಸರಳವಾದ ಕಾರ್ಯಕ್ರಮದಲ್ಲಿ, ಕ್ಯಾನ್ಸರ್‌ ಸೇರಿದಂತೆ ಹಲವು ಕಾಯಿಲೆಗಳಿಂದ ಬಳಲುತ್ತಿದ್ದ 10 ರೋಗಿಗಳಿಗೆ ‘ಸಿಂಹ ಹಸ್ತ’ ಟ್ರಸ್ಟ್‌ ಮೂಲಕ ತಲಾ ₹ 1 ಲಕ್ಷದ ನೆರವಿನ ಚೆಕ್ ಅನ್ನು ಅವರು ವಿತರಿಸಿದರು.‘ರೋಗಿಗಳಿಗೆ ನೆರವು ನೀಡುವ ವಿಷಯವನ್ನು ಸುದ್ದಿ ಮಾಡುವುದು ನನಗಿಷ್ಟವಿರಲಿಲ್ಲ. ಅದೊಂದು ರೀತಿಯ ಅವಮಾನ ಎಂದು ಭಾವಿಸಿದ್ದೆ. ಇದನ್ನು ನಮ್ಮ ತಾಯಿಗೆ ತಿಳಿಸಿದಾಗ, ನೀನು ಸಹಾಯ ಮಾಡಿರುವುದು ಎಲ್ಲರಿಗೂ ಗೊತ್ತಾದರೆ, ಆ ಪೈಕಿ ಕೆಲವರಾದರೂ ಇದೇ ರೀತಿ ನೆರವು ನೀಡಲು ಮುಂದೆ ಬರಬಹುದು. ನೀನು ಮಾಡುತ್ತಿರುವುದು ಒಳ್ಳೆಯ ಕೆಲಸ ಎಂದು ಬೆನ್ನುತಟ್ಟಿದರು.ಅವರ ಮಾತಿನಂತೆ ಈ ಕಾರ್ಯಕ್ರಮ ಹಮ್ಮಿಕೊಂಡಿರುವೆ’ ಎಂದು ಹೇಳಿದ ಸಾಜಿದ್, ಸದ್ಯದಲ್ಲೇ ನಡೆಯಲಿರುವ ಚಿತ್ರದ ಹಾಡುಗಳ ಸೀಡಿ ಬಿಡುಗಡೆ ಸಂದರ್ಭದಲ್ಲಿ ಮತ್ತಷ್ಟು ಜನರಿಗೆ ನೆರವು ನೀಡುವೆ ಎಂದರು.ಸಾಜಿದ್ ಅವರ ಕಾರ್ಯಕ್ಕೆ ಬೆಂಬಲವಾಗಿ ಖ್ಯಾತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ₹ 50 ಸಾವಿರ ಕಳುಹಿಸಿದ್ದಾರೆ. ಅಲ್ಲದೆ, ವಿಷ್ಣುಸೇನೆಯವರು ಕೂಡ ಅವರೊಂದಿಗೆ ಕೈ ಜೋಡಿಸಿದ್ದಾರೆ. ನೆರವಿನ ಚೆಕ್‌ ಪಡೆದ ರೋಗಿಗಳ ಕುರಿತ ವಿಡಿಯೋ ಕ್ಲಿಪ್ ಪ್ರದರ್ಶನ ಅಲ್ಲಿದ್ದವರ ಮನ ಕಲಕಿತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.