ನವದೆಹಲಿ (ಪಿಟಿಐ): ದೆಹಲಿ ಮಹಾ ನಗರ ಪಾಲಿಕೆ ಚುನಾವಣೆಯಲ್ಲಿ (ಎಂಸಿಡಿ) ಭಾರತೀಯ ಜನತಾ ಪಕ್ಷಕ್ಕೆ ಅಧಿಕಾರ ಉಳಿಸಿಕೊಳ್ಳಲು ಆಡಳಿತ ಪಕ್ಷದ ಭ್ರಷ್ಟಾ ಚಾರ, ದರ ಏರಿಕೆ ವಿಷಯಗಳೇ `ಟ್ರಂಪ್ ಕಾರ್ಡ್~ ಆದವು.
ನೂತನವಾಗಿ ರಚನೆಯಾದ ಮೂರು ಪಾಲಿಕೆಗಳಲ್ಲಿ ಉತ್ತರ ಹಾಗೂ ಪೂರ್ವ ದಲ್ಲಿ ಬಿಜೆಪಿ ನಿಚ್ಚಳ ಬಹುಮತ ಪಡೆದಿದ್ದು, ದಕ್ಷಿಣ ಪಾಲಿಕೆಯಲ್ಲಿಯೂ ಮುನ್ನಡೆ ಕಾಯ್ದುಕೊಳ್ಳುವ ಮೂಲಕ ಏಕೈಕ ಅತಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದೆ.

ಬಿಜೆಪಿಯ ಗೆಲುವು ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಅವರಿಗೆ `ಆಘಾತ~ ನೀಡಿದೆ. ಸುಮಾರು 14 ವರ್ಷಗಳಿಂದ ದೆಹಲಿ ಆಳುತ್ತಿರುವ ಶೀಲಾ, ರಾಜಧಾನಿ ಯಲ್ಲಿ `ಕೇಸರಿ~ ಪ್ರಭಾವ ಕುಗ್ಗಿಸುವ ತಂತ್ರ ವಾಗಿಯೇ ಎಂಸಿಡಿಯನ್ನು 3ವಿಭಾಗ ಮಾಡಿದ್ದರು. ಆದರೆ ಅವರ ತಂತ್ರ ಫಲಿಸ ಲಿಲ್ಲ. 104 ಸದಸ್ಯ ಬಲದ ಉತ್ತರ ದೆಹಲಿ ಪಾಲಿಕೆಯಲ್ಲಿ ಬಿಜೆಪಿ 59, ಕಾಂಗ್ರೆಸ್ 29, ಬಿಎಸ್ಪಿ 7, ಆರ್ಎಲ್ಡಿ 4, ಎಲ್ಜೆಪಿ 1 ಹಾಗೂ ನಾಲ್ವರು ಪಕ್ಷೇತರ ಅಭ್ಯರ್ಥಿಗಳು ಗೆದ್ದಿದ್ದಾರೆ.

ಪೂರ್ವ ದೆಹಲಿ ಪಾಲಿಕೆ ಕೂಡ `ಕೈ~ ತಪ್ಪಿ ಹೋಗಿರುವುದು ಆಡಳಿತ ಪಕ್ಷಕ್ಕೆ ಭಾರಿ ಆಘಾತ ತಂದಿದೆ. ಕಾಂಗ್ರೆಸ್ ಪ್ರಾಬಲ್ಯದ ಈ ಪಾಲಿಕೆ ಒಟ್ಟು 64 ವಾರ್ಡ್ಗಳಲ್ಲಿ ಬಿಜೆಪಿ 35 ಸ್ಥಾನಗಳ ಮೂಲಕ ಗೆಲುವು ಸಾಧಿಸಿದೆ. ಕಾಂಗ್ರೆಸ್ 19 ಸ್ಥಾನ ಪಡೆದಿದೆ. 104 ಸದಸ್ಯ ಬಲದ ದಕ್ಷಿಣ ಪಾಲಿಕೆ ಯಲ್ಲಿ ಬಿಜೆಪಿ 44 ಸ್ಥಾನಗಳಲ್ಲಿ ಗೆದ್ದಿದ್ದು, ಇಲ್ಲಿ ಗೆದ್ದಿರುವ 14 ಪಕ್ಷೇತರರ ಬೆಂಬಲ ದಿಂದ ಅಧಿಕಾರ ಹಿಡಿಯುವ ನಿರೀಕ್ಷೆ ಇಟ್ಟುಕೊಂಡಿದೆ. ಕಾಂಗ್ರೆಸ್ 30 ಸ್ಥಾನ ಗಳಿಸಿದೆ. ಸೋಲಿನಿಂದ ಗಲಿಬಿಲಿ ಗೊಂಡಿರುವ ಕಾಂಗ್ರೆಸ್ ಮುಖಂಡರು ವಿಭಿನ್ನ ಹೇಳಿಕೆ ನೀಡಿದ್ದಾರೆ. ಬೆಲೆ ಏರಿಕೆ, 2ಜಿ ಹಗರಣ ಸೋಲಿಗೆ ಕಾರಣ ಎಂದು ಶೀಲಾ ದೀಕ್ಷಿತ್ ಪುತ್ರ, ಸಂಸದ ಸಂದೀಪ್ ದೀಕ್ಷಿತ್ ಅಭಿಪ್ರಾ ಯಪಟ್ಟರೆ, ಸಚಿವ ಕಪಿಲ್ ಸಿಬಲ್ ಇದನ್ನು ನಿರಾಕರಿಸಿದ್ದಾರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.