ಶುಕ್ರವಾರ, ಜೂನ್ 25, 2021
27 °C

ದೆಹಲಿ ಮತ್ತು ಸುತ್ತಮುತ್ತ ಕಂಪಿಸಿದ ಭೂಮಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

 

ನವದೆಹಲಿ, (ಪಿಟಿಐ): ದೆಹಲಿ ಮತ್ತು ಸುತ್ತಮುತ್ತಲ ಉಪನಗರಗಳಲ್ಲಿ ಸೋಮವಾರ ಮಧ್ಯಾಹ್ನ ಭೂಮಿ ಕಂಪಿಸಿದ್ದು , ಭೀತರಾದ ಜನ  ತಮ್ಮ ತಮ್ಮ ಮನೆ ಮತ್ತು ಕಚೇರಿಗಳಿಂದ ಹೊರಗೋಡಿ ಬಂದ ಘಟನೆ ನಡೆದಿದೆ.

ಹರಿಯಾಣಾದ ಬಹಾದ್ದೂರ್ ಗಡ್ ದಲ್ಲಿ ಈ ಭೂಕಂಪನದ ಕೇಂದ್ರವಿತ್ತು. ಭೂಮಿಯು ಆಳದಲ್ಲಿ 9 ಕಿ.ಮೀ ಕೆಳಗೆ ಕಂಪಿಸಿದ್ದು, ಒಟ್ಟು 9 ಸೆಕೆಂಡುಗಳ ಕಾಲ ಭೂಮಿ ಕಂಪಿಸಿದ ದಾಖಲಾಗಿದೆಎಂದು ಹವಾಮಾನ ಇಲಾಖೆ ತಿಳಿಸಿದೆ.

ದೆಹಲಿ, ಘಾಜಿಯಾಬಾದ್ ಮತ್ತು ಉತ್ತರಪ್ರದೇಶದ ನೋಯಿಡಾಗಳಲ್ಲಿ ಸೋಮವಾರ ಮಧ್ಯಾಹ್ನ 1.11 ಗಂಟೆಗೆ ಭೂಮಿ ಕಂಪಿಸಿದೆ. ಈ ಭೂಕಂಪ, ರಿಕ್ಟರ್ ಮಾಪಕದಲ್ಲಿ 4.9ರಷ್ಟು ಪ್ರಮಾಣದಲ್ಲಿ ಇದ್ದುದು ದಾಖಲೆಯಾಗಿದೆ.

ಇದುವರೆಗೆ ಈ ಭೂಕಂಪದಿಂದ ಯಾವುದೇ ಬಗೆಯ ಪ್ರಾಣಹಾನಿ ಅಥವಾ ಆಸ್ತಿಪಾಸ್ತಿಗೆ ಜಖಂಗೊಂಡ ಬಗ್ಗೆ  ವರದಿಗಳು ಬಂದಿಲ್ಲ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.