ಮಾಧುರಿ ದೀಕ್ಷಿತ್ ಅಭಿಮಾನಿಗಳು ಮತ್ತೆ ತಮ್ಮೆದೆಯ ಮೇಲೆ ಕೈ ಇರಿಸಿದ್ದಾರೆ. `ಧಕ್ ಧಕ್~ ಮಾಧುರಿ ಈ ವರ್ಷ `ದೇಡ್ ಇಷ್ಕಿಯಾ~ ಚಿತ್ರದ ಮುಖ್ಯ ಪಾತ್ರವಾಗಿ ಆಯ್ಕೆಯಾಗಿದ್ದಾರೆ.

2010ರಲ್ಲಿ ಬಿಡುಗಡೆಯಾದ `ಇಷ್ಕಿಯಾ~ ಚಿತ್ರದ ಮುಂದುವರಿದ ಭಾಗವಿದು. ವಿದ್ಯಾಬಾಲನ್, ನಾಸಿರುದ್ದೀನ್ ಶಾ ಹಾಗೂ ಅರ್ಷದ್ ವರ್ಸಿ ಈ ಚಿತ್ರದ ತಾರಾಗಣದಲ್ಲಿದ್ದರು. ಕಳೆದ ವರ್ಷದಿಂದಲೇ ಇಷ್ಕಿಯಾದ ಮುಂದುವರಿದ ಭಾಗದಲ್ಲಿ ಮಾಧುರಿ ನಟಿಸುವ ಬಗ್ಗೆ ಗಾಳಿಮಾತು ಬಾಲಿವುಡ್ನಲ್ಲಿ ಹರಡಿತ್ತು. ಆದರೆ ಆಗ ಮಾಧುರಿ ದೀಕ್ಷಿತ್ ನೆನೆ ಈ ಮಾತನ್ನು ನಿರಾಕರಿಸಿದ್ದರು.

ವಿಶಾಲ್ ಭಾರದ್ವಾಜ್ ನಿರ್ಮಿಸಿದ ಈ ಚಿತ್ರವನ್ನು ಅಭಿಶೇಕ್ ಚೌಬೆ ನಿರ್ದೇಶಿಸಿದ್ದರು.
ಈಗ ವಿಶಾಲ್ ಭಾರದ್ವಾಜ್ ಅವರ `ದೇಡ್ ಇಷ್ಕಿಯಾ~ದ ಪ್ರಸ್ತಾಪವನ್ನು ಒಪ್ಪಿಕೊಂಡಿರುವುದಾಗಿ ಮಾಧುರಿ ದೀಕ್ಷಿತ್ ನೆನೆ ಈಗ ಟ್ವಿಟರ್ನಲ್ಲಿ ಖಾತರಿ ಪಡಿಸಿದ್ದಾರೆ.
ಮತ್ತೆ ಆ್ಯಕ್ಷನ್ ಕಟ್ಗೆ ಸಿದ್ಧಳಾಗುತ್ತಿದ್ದೇನೆ. `ಝಲಕ್~, `ದೇಡ್ ಇಂಡಿಯಾ~ ಚಿತ್ರಗಳು ಮುಂದಿನ ವರ್ಷ ತೆರೆಗೆ ಬರಬಹುದು ಎಂದೂ ತಿಳಿಸಿದ್ದಾರೆ.

ಇಷ್ಕಿಯಾದ ತಾರಾಗಣದಲ್ಲಿದ್ದ ವಿದ್ಯಾ ಬಾಲನ್ ಸಹ ಈ ಬಗ್ಗೆ ಖುಷಿ ವ್ಯಕ್ತಪಡಿಸಿದ್ದಾರೆ. ನಾಸಿರುದ್ದೀನ್ ಮತ್ತು ಅರ್ಷದ್ ವಾರ್ಸಿ `ಇಷ್ಕಿಯಾ~ದಲ್ಲಿ ನನ್ನ ಹಳ್ಳಿಗೆ ಬರುತ್ತಾರೆ. ನನ್ನ ಭೇಟಿಯಾಗುತ್ತದೆ. ಮುಂದುವರಿದ ಭಾಗದಲ್ಲಿ ಇನ್ನೊಂದು ಹಳ್ಳಿಗೆ ಹೋಗುತ್ತಾರೆ.

ಸಹಜವಾಗಿಯೇ ಅಲ್ಲಿ, ಇನ್ನೊಬ್ಬರನ್ನು ಭೇಟಿ ಮಾಡುತ್ತಾರೆ. ಆ ಇನ್ನೊಬ್ಬರ ಪಾತ್ರವನ್ನು ಮಾಧುರಿ ನಿರ್ವಹಿಸುತ್ತಿರುವುದು ಖುಷಿ ತಂದಿದೆ. ನನಗೆ ಮೊದಲಿನಿಂದಲೂ ಮಾಧುರಿ ಎಂದರೆ ಅಚ್ಚುಮೆಚ್ಚು ಎಂದೂ ವಿದ್ಯಾ ನುಡಿದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.