ನವದೆಹಲಿ: ಬೆಳ್ಳಿಯ ಬೆಲೆಯು ಗುರುವಾರದ ವಹಿವಾಟಿನಲ್ಲಿ ಕೆ.ಜಿ.ಗೆ ₹4 ಲಕ್ಷದ ಗಡಿಯನ್ನು ದಾಟಿದೆ. ಚಿನ್ನದ ಬೆಲೆಯು 10 ಗ್ರಾಂಗಳಿಗೆ ₹1.83 ಲಕ್ಷ ಆಗಿದೆ.

ಬೆಳ್ಳಿಯ ಬೆಲೆಯು ಸತತ ನಾಲ್ಕನೆಯ ದಿನವೂ ಏರಿಕೆ ಕಂಡಿದೆ. ಬುಧವಾರದ ವಹಿವಾಟಿನಲ್ಲಿ ದೆಹಲಿಯ ಚಿನಿವಾರ ಪೇಟೆಯಲ್ಲಿ ₹19500ರಷ್ಟು ಹೆಚ್ಚಾಗಿದ್ದು ₹404500ಕ್ಕೆ ತಲುಪಿದೆ ಎಂದು ಅಖಿಲ ಭಾರತ ಸರಾಫ್ ಅಸೋಸಿಯೇಷನ್ ತಿಳಿಸಿದೆ.

ಬೆಂಗಳೂರಿನಲ್ಲಿ ಬೆಳ್ಳಿಯ ಬೆಲೆಯು ಬುಧವಾರ ₹410900 ಆಗಿದೆ. ‘ಬೆಳ್ಳಿಯ ಬೆಲೆಯು ಗುರುವಾರ ₹4 ಲಕ್ಷದ ಗಡಿಯನ್ನು ದಾಟಿದೆ. ಚಿನ್ನದ ಬೆಲೆ ಕೂಡ ದಾಖಲೆಯ ಮಟ್ಟ ತಲುಪಿದೆ. ಹೂಡಿಕೆದಾರರು ಚಿನ್ನ ಬೆಳ್ಳಿಯ ಮೇಲೆ ಹೆಚ್ಚು ಆಸಕ್ತಿ ತೋರಿರುವುದು ಇದಕ್ಕೆ ಒಂದು ಕಾರಣ’ ಎಂದು ಲೆಮನ್ ಮಾರ್ಕೆಟ್ಸ್ ಡೆಸ್ಕ್ನ ಸಂಶೋಧನಾ ವಿಶ್ಲೇಷಕ ಗೌರವ್ ಗರ್ಗ್ ಹೇಳಿದ್ದಾರೆ.

‘ಬೆಳ್ಳಿಯ ಬೆಲೆ ಏರಿಕೆಯು ಚಿನ್ನದ ಬೆಲೆ ಏರಿಕೆಗಿಂತ ಹೆಚ್ಚಾಗಿದೆ. ಕೈಗಾರಿಕೆಗಳಿಂದ ಬೇಡಿಕೆ ಹೆಚ್ಚಾಗಿರುವುದು ಅಮೆರಿಕದ ಡಾಲರ್ ದುರ್ಬಲ ಆಗುತ್ತಿರುವುದು ಇದಕ್ಕೆ ಕಾರಣ’ ಎಂದು ಅವರು ಹೇಳಿದ್ದಾರೆ.

ತೂಕದ ಲೆಕ್ಕದಲ್ಲಿ 2025ರಲ್ಲಿ ಭಾರತದಲ್ಲಿ ಬೆಳ್ಳಿಯ ಬೇಡಿಕೆಯು ಶೇ 11ರಷ್ಟು ಕಡಿಮೆ ಆಗಿದೆ. ಈ ವರ್ಷದಲ್ಲಿ ಚಿನ್ನದ ಬೇಡಿಕೆಯು ದೇಶದಲ್ಲಿ 700 ಟನ್ಗಳಷ್ಟು ಇರುವ ನಿರೀಕ್ಷೆ ಇದೆ.

ಚಿನ್ನದ ಬೆಲೆ ಹೆಚ್ಚಾಗಿರುವುದು ಗ್ರಾಹಕರ ಖರೀದಿ ಬಯಕೆಗಳಲ್ಲಿನ ಬದಲಾವಣೆಯು ಬೇಡಿಕೆ ಕಡಿಮೆ ಆಗಲು ಕಾರಣ ಎಂದು ವಿಶ್ವ ಚಿನ್ನ ಸಮಿತಿಯು ಗುರುವಾರ ಬಿಡುಗಡೆ ಮಾಡಿರುವ ವರದಿಯೊಂದರಲ್ಲಿ ಹೇಳಿದೆ.

ಚಿನ್ನದ ಬೆಲೆ ಹೆಚ್ಚಳದ ಪರಿಣಾಮವಾಗಿ ಮೌಲ್ಯದ ಲೆಕ್ಕದಲ್ಲಿ 2025ರಲ್ಲಿ ಒಟ್ಟು ₹7.51 ಲಕ್ಷ ಕೋಟಿ ಬೆಲೆಯ ಚಿನ್ನಕ್ಕೆ ಬೇಡಿಕೆ ಬಂದಿದೆ. ಇದು ಹಿಂದಿನ ವರ್ಷದಲ್ಲಿ ಬಂದಿದ್ದ ಬೇಡಿಕೆ ಹೋಲಿಸಿದರೆ ಶೇ 30ರಷ್ಟು ಹೆಚ್ಚು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.