ದೇವದುರ್ಗ: ಈ ಬಾರಿ ಮುಂಗಾರು ಮತ್ತು ಹಿಂಗಾರು ಮಳೆ ಸಕಾಲಕ್ಕೆ ಬಾರದ ಕಾರಣ ಭೂಮಿ ಕಾದ ಹಂಚಿನಂತೆ ಆಗಿದೆ. ಅಂತರ್ಜಲ ಬತ್ತಿ ಬಹುತೇಕ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾದ ಕಾರಣ ಕೆಲವು ಕಡೆ ಜನರು ಹನಿ ನೀರಿಗಾಗಿ ಪ್ರತಿನಿತ್ಯ ತೊಂದರೆ ಪಡುವಂತಾಗಿದೆ.

ಯಾವುದೆ ಕಾರಣಕ್ಕೂ ಜನರಿಗೆ ಕುಡಿಯುವ ನೀರಿನ ತೊಂದರೆ ಎದುರಾಗದಂತೆ ವರ್ಷಪೂರ್ತಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ವಿವಿಧ ಯೋಜನೆಗಳ ಅಡಿಯಲ್ಲಿ ಅಂತ, ಅಂತವಾಗಿ ತಾಲ್ಲೂಕಿಗೆ ಕೋಟಿಗಟ್ಟಲೇ ಹಣ ಹರಿದು ಬರುತ್ತಿದೆ. ಯೋಜನೆಯ ನಿರ್ವಣೆಗಾಗಿ ತಾಲ್ಲೂಕು ಮಟ್ಟದ ಸಮಿತಿ ರಚಿಸಿ ಕಟ್ಟುನಿಟ್ಟಿನ ನಿಯಮಗಳು ರೂಪಿಸಿದರೂ ಕೇವಲ ಕಚೇರಿಯ ಕಡತದಲ್ಲಿ ಉಳಿಯುವಂತಾಗಿದೆ.

ತಾಲ್ಲೂಕಿನ ಕೆಲವು ಗ್ರಾಮಗಳಲ್ಲಿ ಈಗಾಗಲೇ ಅಂತರ್ಜಲ ಕುಸಿದಿದೆ, ಹಳೆಯ ಭಾವಿ ಮತ್ತು ಬೋರವೆಲ್ಗಳು ನೀರಿಲ್ಲದೆ ಬತ್ತಿಹೋಗಿ ಕುಡಿಯುವ ನೀರಿಗಾಗಿ ಜನರು ಅಲೆದಾಡುವಂತ ಸನ್ನಿವೇಶ ಕಾಣುವಂತಾಗಿದೆ,
ನೀರಿನ ಹಾಹಾಕಾರ ಸೃಷ್ಟಿಯಾಗಿ ಚಿಕ್ಕಬೂದೂರು, ಸಲಿಕ್ಯಾಪೂರು, ಮಶಿಹಾಳ, ಬೂದೂರು, ಹಿರೇಬುದೂರು, ಹದ್ದಿನಾಳ, ಅಮರಾಪೂರ, ಯರಮಸಾಳ, ಹಂಚಿನಾಳ, ಗುಂಟ್ರಾಳ, ಸೂಗುರಾಳ, ಹಿರೇರಾಯಕುಂಪಿ.

ಇಂಗಳದಾಳ, ತಿಪ್ಪಲದಿನ್ನಿ, ಮರಕಂದಿನ್ನಿ, ಗೋವಿಂದಪಲ್ಲಿ ಹಾಗೂ ಕಮದಾಳ ಗ್ರಾಮದ ಜನರಿಗೆ ಮತ್ತು ಜಾನುವಾರಗಳಿಗೆ ನೀರಿನ ತೊಂದರೆ ಕಾಣಿಸಿಕೊಂಡಿದೆ. ಕೆಲವು ಗ್ರಾಮಗಳಲ್ಲಿ ದೂರದ ಹಳ್ಳಕ್ಕೆ ಹೋಗಿ ತಾಸು ಗಟ್ಟಲೇ ಕುಳಿತು ವರ್ತಿ (ಚಿಲುಮೆ)ನೀರು ತಂದು ಕುಡಿಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ವಿಷಯುಕ್ತ ನೀರು: ಒಂದು ಕಡೆ ನೀರಿನ ಅಭಾವ ಕಂಡು ಬಂದರೆ ಇನ್ನೂಂದು ಕಡೆ ಪ್ಲೋರೈಡ್ ಮಿಶ್ರಿತ ವಿಷಯುಕ್ತ ನೀರು ಇದೆ. ದಶಕದ ಹಿಂದೆ ಸಂಬಂಧಿಸಿದ ಇಲಾಖೆಗೆ ತಜ್ಞರು ವರದಿ ನೀಡಿದ ನಂತರ ಪರ್ಯಾಯ ವ್ಯವಸ್ಥೆಗೆ ಮುಂದಾಗಿಲ್ಲ. ವಿಷಯುಕ್ತ ನೀರು ಕುಡಿಯುವುದರಿಂದ ಜನರಿಗೆ ಕೀಲು ನೊವು, ಹಲ್ಲುಗಳಿಗೆ ಕಪ್ಪು ಕಲಿ ಮತ್ತು ಮನೆಯಲ್ಲಿನ ಪಾತ್ರೆಗಳಿಗೆ ಸಣ್ಣ, ಸಣ್ಣ ರಂಧ್ರ ಸಾಮಾನ್ಯವಾಗಿದೆ. ಶಾಶ್ವತ ಪರಿಹಾರಕ್ಕೆ ಮನಸ್ಸು ಮಾಡುತ್ತಿಲ್ಲ ಎಂಬುದು ಕಮದಾಳ ಗ್ರಾಮದ ಮಲ್ಲಯ್ಯ ಅವರ ಆರೋಪ.

ನೆನಗುದಿಗೆ: ಮಲ್ದಕಲ್, ಕೊಪ್ಪರ, ಗೂಗಲ್, ಜೇರಬಂಡಿ, ದೊಂಡಂಬಳಿ, ನಾಗಡದಿನ್ನಿ, ಮತ್ತು ಜಾಗೀರ ಜಾಡಲದಿನ್ನಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಬರುವ ಹತ್ತುಕ್ಕೂ ಹೆಚ್ಚು ಗ್ರಾಮಗಳು ವರ್ಷಪೂರ್ತಿ ನೀರಿನ ತೊಂದರೆ ಎದುರಿಸುವಂತಾಗಿದೆ. ದಶಕದ ಹಿಂದೆ ಕೃಷ್ಣಾ ನದಿಯಿಂದ ಕುಡಿಯುವ ನೀರನ್ನು ಸರಬರಾಜು ಮಾಡಲು ಯೋಜನೆ ರೂಪಿಸಿ ಹಣ ಬಿಡುಗಡೆಯಾದರೂ ಕಾಮಗಾರಿ ಮಾತ್ರ ಮುಗಿದಿಲ್ಲ. ಯಾಟಗಲ್ ಗ್ರಾಮದ ಹತ್ತಿರ ಸುಮಾರು 12 ಗ್ರಾಮಗಳಿಗೆ ದಶಕದ ಹಿಂದೆ ಶಾಶ್ವತ ಕುಡಿಯುವ ನೀರಿನ ಬೃಹತ್ ಯೋಜನೆ ರೂಪಿಸಿ ಹಣ ಬಿಡುಗಡೆ ಮಾಡಿದರೂ ಕಾಮಗಾರಿ ಸ್ಥಗಿತಗೊಂಡಿದೆ.

ನೀರಿನ ಸಮಸ್ಯೆ ಎದುರಿಸುತ್ತಿರುವ ಚಿಕ್ಕಬೂದೂರು ಗ್ರಾಮಸ್ಥರು ಮನೆಗೆ ಬರುವ ಅಥಿತಿಗಳಿಗೆ ಬರದಂತೆ ಹೇಳುವ ಪರಿಸ್ಥಿತಿ ನಿರ್ಮಾಣವಾಗಿದೆ.

ಬರಗಾಲ: ತಾಲ್ಲೂಕನ್ನು ಬರಗಾಲ ಪ್ರದೇಶ ಎಂದು ಘೋಷಿಸಿ ಮೊದಲ ಆದ್ಯತೆಯಲ್ಲಿ ಕುಡಿಯುವ ನೀರಿಗಾಗಿ 20 ಲಕ್ಷ ರೂಪಾಯಿ ಬಿಡುಗಡೆ ಮಾಡಲಾಗಿದೆ. 20 ಲಕ್ಷ ರೂಪಾಯಿ ವೆಚ್ಚಲ್ಲಿ 54 ಗ್ರಾಮಗಳಲ್ಲಿ 54 ಬೋರವೆಲ್ಗಳನ್ನು ಪುನಚ್ಚೇತನಗೊಳಿಸಲಾಗಿದೆ ಎಂದು ಜಿಪಂ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಪವನಕುಮಾರ ತಿಳಿಸಿದ್ದಾರೆ.

ಕುಡಿಯುವ ನೀರಿಗಾಗಿ ಸುಮಾರು 65 ಲಕ್ಷ ರೂಪಾಯಿಯ ಕ್ರಿಯಾ ಯೋಜನೆ ರೂಪಿಸಿ ಜಿಪಂಗೆ ಸಲ್ಲಿಸಿದರೂ ಇಂದಿಗೂ ಹಣ ಬಂದಿಲ್ಲ ಎಂದು ತಹಸೀಲ್ದಾರ್ ಬಸ್ಸಪ್ಪ ನಾಗೋಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.