ಭಾನುವಾರ, ಜನವರಿ 19, 2020
20 °C

ದೇವಯಾನಿ ಖುದ್ದು ಹಾಜರಿಗೆ ವಿನಾಯ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಭಾರತದ ರಾಜ­ತಾಂತ್ರಿಕ ಅಧಿ­ಕಾರಿ ದೇವಯಾನಿ ಖೋಬ್ರಾಗಡೆ ವಿರು­­­ದ್ಧದ ವೀಸಾ ವಂಚನೆ ಆರೋಪ ಪ್ರಕರಣ­ದಿಂದ ಭಾರತ ಮತ್ತು ಅಮೆರಿಕ ನಡುವೆ ಉಂಟಾಗಿರುವ ಬಿಕ್ಕಟ್ಟು ಶಮನವಾಗುವ ಲಕ್ಷಣಗಳು ಗೋಚರಿಸುತ್ತಿವೆ.ನ್ಯೂಯಾರ್ಕ್‌ನ ನ್ಯಾಯಾಲಯ­ದಲ್ಲಿ ನಡೆ­ಯು­ತ್ತಿರುವ ಪ್ರಕರಣದ ವಿಚಾರಣೆಗೆ ಖುದ್ದು ಹಾಜ­ರಾ­ಗಲು ದೇವಯಾನಿ ಅವರಿಗೆ ವಿನಾಯ್ತಿ ನೀಡಿದೆ. ಈ ಮಧ್ಯೆ, ಅವ­ರಿಗೆ ವಿಶ್ವ­ಸಂಸ್ಥೆಯಿಂದ ಮಾನ್ಯತೆ ದೊರೆತಿದೆ.ಡಿ. 12ರಂದು ದೇವಯಾನಿ ಅವ­ರನ್ನು ಬಂಧಿಸ­ಲಾಗಿತ್ತು. ಇದು ಭಾರತ – ಅಮೆ­ರಿಕ ನಡುವೆ ರಾಜ­ತಾಂತ್ರಿಕ ಬಿಕ್ಕ­ಟ್ಟಿಗೆ ಕಾರಣ­ವಾ­ಯಿತು. ದೇವ­ಯಾನಿ ಅವ­ರಿಗೆ ಪೂರ್ಣ ಪ್ರಮಾ­­­ಣದ ರಾಜ­ತಾಂತ್ರಿಕ ರಕ್ಷಣೆ ನೀಡಲು ಅವ­ರನ್ನು ವಿಶ್ವಸಂಸ್ಥೆ­ಯಲ್ಲಿ­ರುವ ಭಾರ­­ತದ ಕಾಯಂ ಮಿಷನ್‌ಗೆ ವರ್ಗಾ­­ಯಿಸಲಾಗಿದೆ. ಅಮೆ­ರಿಕದ ವಿದೇ­ಶಾಂಗ ಇಲಾ­ಖೆ­­­ಯಲ್ಲಿನ ಪ್ರಕ್ರಿ­ಯೆ­ಗಳ ನಂತರ ದೇವ­ಯಾನಿ ಅವ­ರಿಗೆ ವಿಶ್ವಸಂಸ್ಥೆ­ಯಿಂದ ಮಾನ್ಯತೆ ದೊರೆ­ತಿದೆ. ಇದ­ಕ್ಕಾಗಿ ಭಾರತ ಅಗತ್ಯ ದಾಖಲಾತಿ­ಗಳನ್ನು ಸಲ್ಲಿಸಿತ್ತು.ಅಮೆರಿಕ ರಾಯಭಾರ ಕಚೇರಿ ಮತ್ತು ಅದರ ಅಧಿಕಾರಿಗಳು ನೇಮಿಸಿ­ಕೊಂಡಿರುವ ಭಾರತೀಯ ಉದ್ಯೋಗಿ­ಗಳ ಬಗೆಗಿನ ಮಾಹಿತಿ ನೀಡಲು ನೀಡಿದ್ದ ಸೋಮವಾರದ ಗಡುವು ವಿಸ್ತರಿಸುವಂತೆ ರಾಯಭಾರ ಕಚೇರಿ ವಿನಂತಿಸಿಕೊಂಡಿದೆ.

ಪ್ರತಿಕ್ರಿಯಿಸಿ (+)