ಯಾದಗಿರಿ: ಮಕ್ಕಳಾಗದ ದಂಪತಿಯನ್ನು ದೇವಸ್ಥಾನಕ್ಕೆ ಕರೆದುಕೊಂಡು ಹೊರಟಿದ್ದ ಕುಟುಂಬವೇ ಈಗ ದೇವರ ಪಾದ ಸೇರಿದೆ. ಮಕ್ಕಳಾಗಲೆಂದು ಬೇಡಿಕೊಳ್ಳಲು ಹೋದವರೂ ಮರಳಿ ಬಾರದ ಜಾಗಕ್ಕೆ ಪ್ರಯಾಣ ಬೆಳೆಸಿದ್ದಾರೆ. ಸ್ನೇಹಿತನ ಒತ್ತಾಯಕ್ಕೆ ಆಟೊ ಏರಿದ ಯುವಕನೂ ಇಹಲೋಕ ಯಾತ್ರೆ ಮುಗಿಸಿದ್ದಾನೆ.

ಜೇವರ್ಗಿ ತಾಲ್ಲೂಕಿನ ಮಂದೇವಾಲ ಗ್ರಾಮದ ಬಳಿ ಶುಕ್ರವಾರ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವ 8 ಜನರೂ ಇಲ್ಲಿಯ ಅಂಬೇಡ್ಕರ್ ನಗರದ ನಿವಾಸಿಗಳು. ಆಟೊ ಚಾಲಕನಾಗಿದ್ದ ವೆಂಕಟೇಶನ ಕುಟುಂಬದ ಸದಸ್ಯರು, ಘತ್ತರಗಿಯ ಭಾಗ್ಯವಂತಿ ದೇವಸ್ಥಾನ ಭಕ್ತರು. ಪ್ರತಿ ಅಮಾವಾಸ್ಯೆ, ಹುಣ್ಣಿಮೆ, ವಿಶೇಷ ಸಂದರ್ಭಗಳಲ್ಲಿ ಈ ಕುಟುಂಬ, ಭಾಗ್ಯವಂತಿ ದೇವಸ್ಥಾನಕ್ಕೆ ಹೋಗುತ್ತಿತ್ತು. ಭಾಗ್ಯವಂತಿ ದೇವಿಗೆ ಹರಕೆ ಹೊತ್ತರೆ, ಮಕ್ಕಳಾಗುತ್ತವೆ ಎಂಬ ನಂಬಿಕೆಯೂ ಇತ್ತು.

ಪಕ್ಕದ ಮನೆಯ ನಾಗಲಿಂಗಮ್ಮ ಎಂಬ ಮಹಿಳೆಯನ್ನು ತಾಲ್ಲೂಕಿನ ಕಂದಕೂರು ಗ್ರಾಮದ ಮಲ್ಲಪ್ಪ ಎಂಬುವವರಿಗೆ ಮದುವೆ ಮಾಡಿಕೊಡಲಾಗಿತ್ತು. ಈ ದಂಪತಿ ಮುಂಬೈನಲ್ಲಿ ಕೆಲಸ ಮಾಡುತ್ತಿದ್ದು, ಇವರಿಗೆ ಮಕ್ಕಳಾಗಿರಲಿಲ್ಲ. ಮೈಲಾಪುರದ ಜಾತ್ರೆಗಾಗಿ ಇವರು, ಯಾದಗಿರಿಯ ಅಂಬೇಡ್ಕರ್ ನಗರಕ್ಕೆ ಬಂದಿದ್ದರು. ಈ ಸಂದರ್ಭದಲ್ಲಿ ಮಕ್ಕಳಾಗದೇ ಇರುವ ಕೊರಗನ್ನು ನಾಗಲಿಂಗಮ್ಮ ಹೇಳಿಕೊಂಡಿದ್ದಳು.

ಆಕೆಯ ಕೊರಗನ್ನು ನೋಡಲಾಗದ ಶಾಂತಮ್ಮ, ‘ಭಾಗ್ಯವಂತಿ ದೇವಸ್ಥಾನಕ್ಕೆ ಹೋಗೋಣ. ಅಲ್ಲಿ ಹರಕೆ ಹೊತ್ತರೆ ಮಕ್ಕಳಾಗುತ್ತವೆ, ಚಿಂತೆ ಬಿಡು’ ಎಂದು ಸಮಾಧಾನ ಹೇಳಿದ್ದಳು. ಕಳೆದ ಅಮಾವಾಸ್ಯೆಯಂದೇ ಘತ್ತರಗಿ ದೇವಸ್ಥಾನಕ್ಕೆ ಹೋಗುವ ಯೋಜನೆ ಮಾಡಿಕೊಂಡಿದ್ದರು. ಆದರೆ, ಅನಿವಾರ್ಯ ಕಾರಣದಿಂದ ಅಮಾವಾಸ್ಯೆಗೆ ಹೋಗಿರಲಿಲ್ಲ. ಇನ್ನೇನು ಮರಳಿ ಮುಂಬೈಗೆ ಹೋಗುವುದಾಗಿ ನಾಗಲಿಂಗಮ್ಮ ಹಾಗೂ ಮಲ್ಲಪ್ಪ ಹೇಳಿದ್ದರು. ಹೀಗಾಗಿ ಈ ಶುಕ್ರವಾರ ಘತ್ತರಗಿ ಹೋಗಲು ತಯಾರಿ ಮಾಡಿಕೊಂಡಿದ್ದರು. ಮಧ್ಯಾಹ್ನ ಯಾದಗಿರಿಯಿಂದ ಹೊರಟು ಘತ್ತರಗಿಯಲ್ಲಿ ವಾಸ್ತವ್ಯ ಮಾಡಿ, ಶನಿವಾರ ಮರಳಿ ಯಾದಗಿರಿಗೆ ಬರಲು ನಿರ್ಧರಿಸಲಾಗಿತ್ತು.

ಶುಕ್ರವಾರ ಬೆಳಿಗ್ಗೆಯಿಂದಲೇ ಬುತ್ತಿ ಕಟ್ಟಿಕೊಂಡು ತನ್ನದೇ ಆಟೊದಲ್ಲಿ ವೆಂಕಟೇಶ ಎಲ್ಲರನ್ನು ಕರೆದುಕೊಂಡು ಘತ್ತರಗಿಗೆ ಹೊರಟಿದ್ದ. ಮಾರ್ಗಮಧ್ಯೆ ಹೊರಟಿದ್ದ ಮಲ್ಲಿಕಾರ್ಜುನ ಎಂಬಾತನನ್ನು ವೆಂಕಟೇಶನ ಮಗ ರೂಪೇಶ ಆಟೊದಲ್ಲಿ ಹತ್ತಿಸಿಕೊಂಡಿದ್ದ. ಇದೀಗ ಆತನೂ ಘಟನೆಯಲ್ಲಿ ಮೃತಪಟ್ಟಿದ್ದಾನೆ.

ಬಾರದ ಲೋಕಕ್ಕೆ ಹೋದರು: ಮಕ್ಕಳಾಗಲಿ ಎಂದು ಬೇಡಿಕೊಳ್ಳಲು ಘತ್ತರಗಿ ಕ್ಷೇತ್ರಕ್ಕೆ ತೆರಳುತ್ತಿದ್ದವರು, ಮಾರ್ಗಮಧ್ಯದಲ್ಲಿಯೇ ಬಾರದ ಲೋಕಕ್ಕೆ ಪ್ರಯಾಣ ಬೆಳೆಸಿದ್ದಾರೆ. ವೆಂಕಟೇಶನ ಮನೆಯಲ್ಲಿ ಆಕೆಯ ವೃದ್ಧ ಅತ್ತೆ ಮಲ್ಲಮ್ಮ ಮಾತ್ರ ಮನೆಯಲ್ಲಿ ರೋದಿಸುತ್ತಿರುವ ದೃಶ್ಯ ಕರಳು ಹಿಂಡುವಂತಿತ್ತು. ನಾಗಲಿಂಗಮ್ಮನ ಮನೆಯ ಚಿತ್ರಣವೂ ಇದಕ್ಕಿಂತ ಭಿನ್ನವಾಗಿರಲಿಲ್ಲ. ವೆಂಕಟೇಶನ ಇಡೀ ಕುಟುಂಬವೇ ಮೃತಪಟ್ಟಿದ್ದು, ಮಕ್ಕಳಾಗದ ನಾಗಲಿಂಗಮ್ಮ ಹಾಗೂ ಮಲ್ಲಪ್ಪ ದಂಪತಿಯೂ ಘಟನೆಯಲ್ಲಿ ಮೃತಪಟ್ಟಿದ್ದಾರೆ.

ಸ್ನೇಹಿತನ ಒತ್ತಾಯಕ್ಕೆ ಆಟೊ ಹತ್ತಿದ ಮಲ್ಲಿಕಾರ್ಜುನ ಕುಟುಂಬದ ಸದಸ್ಯರನ್ನು ಸಂತೈಸುವ ಧೈರ್ಯ ಯಾರಿಗೂ ಆಗುತ್ತಿಲ್ಲ.
ಇಡೀ ಅಂಬೇಡ್ಕರ್ ನಗರ ಬಡಾವಣೆಯಲ್ಲಿ ಸ್ಮಶಾನ ಮೌನ ಆವರಿಸಿದೆ.

ಶನಿವಾರ ಮೃತರ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.