ಶುಕ್ರವಾರ, ಮೇ 14, 2021
25 °C

ದೊಡ್ಡಗುಣಿ ಕೆರೆಗೆ ನೀರು: ಗಡುವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಬ್ಬಿ: ತಾಲ್ಲೂಕಿನ ದೊಡ್ಡಗುಣಿ ಕೆರೆಗೆ ನೀರು ಹರಿಸುವ ಕಾಮಗಾರಿಯನ್ನು 15 ದಿನದೊಳಗೆ ಕೈಗೆತ್ತಿಕೊಳ್ಳದಿದ್ದರೆ ರೈತ ರೊಂದಿಗೆ ಕಾವೇರಿ ನೀರಾವರಿ ನಿಗಮದ ಮುಂಭಾಗ ಪ್ರತಿಭಟನೆ ನಡೆಸುವುದಾಗಿ ನಂಜಾವಧೂತ ಸ್ವಾಮಿಜಿ ಎಚ್ಚರಿಕೆ ನೀಡಿದರು.ಪತ್ರಿಕಾಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, ತಿಪಟೂರು ಹಾಗೂ ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಈಗಾಗಲೇ ಏತ ನೀರಾವರಿ ಯೋಜನೆ ಜಾರಿಯಾಗಿದೆ. 40 ವರ್ಷ ಗಳಿಂದ ಬತ್ತಿ ಹೋದ ದೊಡ್ಡಗುಣಿ ಕೆರೆಗೆ ನೀರು ತರಲು 1992ರಿಂದ ಹೇಮಾವತಿ ನೀರು ಹರಿಸುವಂತೆ ಹೋರಾಟ ಮಾಡಿದರೂ ಪ್ರಯೋಜನ ವಾಗಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆ ಕಾರಣ ಎಂದು ಟೀಕಿಸಿದರು.ದೊಡ್ಡಗುಣಿ ಕೆರೆಗೆ ನೀರು ಹರಿಸುವು ದರಿಂದ ಈ ಭಾಗದ ಸುಮಾರು 14ಕ್ಕೂ ಹೆಚ್ಚು ಗ್ರಾಮಗಳ ಅಂತರ್ಜಲ ಹೆಚ್ಚಲಿದೆ. ಕಾವೇರಿ ನೀರಾವರಿ ನಿಗಮ ಸಿದ್ಧಪಡಿಸಿದ 3.25 ಕೋಟಿ ಪ್ರಸ್ತಾವ ನೆಗೆ ಸರ್ಕಾರ 2011ರ ಜೂನ್ 13ರಂದು ಆಡಳಿತಾತ್ಮಕ ಅನುಮೋ ದನೆ ನೀಡಿದೆ. ಈಗಾಗಲೇ 4 ಬಾರಿ ಕೆರೆ ಕಾಮ ಗಾರಿಗೆ ಟೆಂಡರ್ ಕರೆದರೂ ಗುತ್ತಿಗೆ ದಾರರು ಮುಂದೆ ಬಂದಿಲ್ಲ. ನೀರಿನ ವಿಷಯದಲ್ಲಿ ಜಾತಿ ಮತ ಬಿಟ್ಟು ಎಲ್ಲರೂ ಹೋರಾಟ ಮಾಡಬೇಕಿದೆ ಎಂದು ಮಾರ್ಮಿಕವಾಗಿ ನುಡಿದರು.ದೊಡ್ಡಗುಣಿ ಬೃಹನ್‌ಮಠದ ರೇವಣ್ಣಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಈ ಕೆರೆಯನ್ನು ನಂಬಿ ಸಾವಿರಾರು ರೈತರು ಬದುಕುತ್ತಿ ದ್ದಾರೆ. ಗಣಿಗಾರಿಕೆ ಹಾವಳಿಯಿಂದ ಅಂತರ್ಜಲ ಕುಸಿದಿದೆ. ತೆಂಗು ಮತ್ತು ಅಡಿಕೆ ನಂಬಿ ಜೀವನ ಸಾಗಿಸುತ್ತಿದ್ದ ಜನತೆ ಗುಳೆ ಹೋಗುವ ಪರಿಸ್ಥಿತಿ ನಿರ್ಮಾಣ ವಾಗಿದೆ. ನಮ್ಮಲ್ಲಿ ಒಗ್ಗಟ್ಟು ಇಲ್ಲದಿರು ವುದು ನೀರು ಬಾರದಿರು ವುದಕ್ಕೆ ಕಾರಣ. ಒಂದಾಗಿ ಹೋರಾಟ ಮಾಡಬೇಕಾದ ಅನಿವಾರ್ಯತೆಯಿದೆ ಎಂದು ಹೇಳಿದರು. ಹೋರಾಟದ ಸಭೆಯಲ್ಲಿ ದೊಡ್ಡಗುಣಿ ಮತ್ತು ಪೆರಮಸಂದ್ರ ಸುತ್ತಲ ಗ್ರಾಮಸ್ಥರು ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.