ಶುಕ್ರವಾರ, ಸೆಪ್ಟೆಂಬರ್ 20, 2019
25 °C

ಧರ್ಮದೇಟು ಎಂಬ ಹಿಂಸೆ ನಿಲ್ಲಲಿ

Published:
Updated:

ಕೆಲವು ಸಂಘಟಿತ ಶಕ್ತಿಗಳು ಇತ್ತೀಚೆಗೆ ಕಾನೂನನ್ನು ತಮ್ಮ ಕೈಗೆ ತೆಗೆದುಕೊಂಡು ಅಟ್ಟಹಾಸ ಮೆರೆಯುತ್ತಿರುವುದು ನಾಗರಿಕ ಸಮಾಜಕ್ಕೊಂದು ಕಪ್ಪು ಚುಕ್ಕೆಯಾಗಿದೆ.

ಬೆಂಗಳೂರಿನ ಹುಣಸಮಾರನ ಹಳ್ಳಿಯಲ್ಲಿ ವಂಚಕ ದಂಪತಿಗಳಿಗೆ ಮಹಿಳೆ - ಪುರುಷ ಎಂಬ ಭೇದವಿಲ್ಲದೆ ಹಿಗ್ಗಾಮುಗ್ಗ ಹೊಡೆದಿರುವುದು ಆತಂಕದ ವಿಷಯ.ಈ ಹಿಂಸಾಚಾರ ಅಕ್ಷಮ್ಯ. ಹೀಗೆ ಮಾಡಲು ಇವರಿಗೆ ಅಧಿಕಾರ ಕೊಟ್ಟವರು ಯಾರು? ಇವರೇ ತಪ್ಪಿತಸ್ಥರಿಗೆ ಶಿಕ್ಷೆ ನೀಡುವ ಮೂಲಕ ಪೊಲೀಸ್ ಮತ್ತು ನ್ಯಾಯಾಂಗ ವ್ಯವಸ್ಥೆಯನ್ನೇ ಲಘುವಾಗಿ ಕಂಡಂತಾಗಿದೆ.  ಜನತಂತ್ರ ವ್ಯವಸ್ಥೆಯಲ್ಲಿ ಇದು ಸಲ್ಲದು.

ಇಂತಹ ಕುಕೃತ್ಯವನ್ನು `ಧರ್ಮದೇಟು~ ಎಂಬುದಾಗಿ ಕರೆದು ವಿಪರೀತ ಪ್ರಚಾರ ನೀಡುವ ಬಗೆಗೆ ಮಾಧ್ಯಮಗಳೂ ಜಾಗರೂಕವಾಗಿರುವುದು ಅವಶ್ಯ.ಕಾನೂನು ಎಲ್ಲರ ಹಿತಕ್ಕಾಗಿ ಇದೆ. ಅದನ್ನು ಬಳಸಿಕೊಳ್ಳುವ ಮತ್ತು ಕಾಪಾಡುವ ವ್ಯವಸ್ಥೆ ನಮ್ಮದಾಗಬೇಕೇ ಹೊರತು ಕಾನೂನನ್ನು ಕೈಗೆತ್ತಿಕೊಳ್ಳುವ ಅಧಿಕಾರ ಯಾರಿಗೂ ಇಲ್ಲ.

Post Comments (+)