ವಿಜಾಪುರ: ತಾಲ್ಲೂಕಿನ ಕೃಷ್ಣಾನಗರದ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ಹಿರಿಯ ಸಹಕಾರಿ ಧುರೀಣ ಹಾಗೂ ಕಾರ್ಖಾನೆಯ ಸಂಸ್ಥಾಪಕ ದಿ.ಬಿ.ಟಿ. ಪಾಟೀಲರ ಪುಣ್ಯ ಸ್ಮರಣೆ ಇತ್ತೀಚೆಗೆ ಜರುಗಿತು.ಕಾರ್ಖಾನೆಯ ಆವರಣದಲ್ಲಿರುವ ದಿ.ಬಿ.ಟಿ. ಪಾಟೀಲ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮೂಲಕ ಗೌರವ ಸಲ್ಲಿಸಲಾಯಿತು.

ಕಾರ್ಖಾನೆಯ ಅಧ್ಯಕ್ಷ ಶಶಿಕಾಂತಗೌಡ ಪಾಟೀಲ ಮಾತನಾಡಿ, ಈ ಕಾರ್ಖಾನೆಯು ನಾಡಿನಲ್ಲಿಯೇ ಕೀರ್ತಿಗೆ ಪಾತ್ರವಾಗಿದೆ. ದಿ.ಬಿ.ಟಿ. ಪಾಟೀಲರು ಮಾಡಿದ ಕಾರ್ಯ ಕೈಗನ್ನಡಿಯಾಗಿದೆ. ಅವರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ರೈತರ ಅಭ್ಯುದಯಕ್ಕಾಗಿ ಶೈಕ್ಷಣಿಕ, ಆರ್ಥಿಕ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಇನ್ನು ಹಲವಾರು ಕಾರ್ಯ ಹಮ್ಮಿಕೊಳ್ಳಲಾಗುವುದು. ರೈತರ ಮಕ್ಕಳ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡುವುದಾಗಿ ಹೇಳಿದರು.

ಕಾರ್ಖಾನೆಯ ನಿರ್ದೇಶಕ ಆರ್.ಪಿ. ಕೊಡಬಾಗಿ ಮಾತನಾಡಿ, ದಿ.ಬಿ.ಟಿ. ಪಾಟೀಲ ಅವರ ನಾಯಕತ್ವ ಹಾಗೂ ಸಹಕಾರಿ ರಂಗಕ್ಕೆ ಸಲ್ಲಿಸಿದ ಸೇವೆ ಹಾಗೂ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆ ಸಂಸ್ಥಾಪನೆಗೆ ಪಟ್ಟ ಪರಿಶ್ರಮ ಸ್ಮರಿಸಿದರು.ಕಾರ್ಖಾನೆಯ ನಿರ್ದೇಶಕರಾದ ರಮೇಶ ಜಕರಡ್ಡಿ, ಚಂದಪ್ಪ ಕೋರಡ್ಡಿ, ಬಸನಗೌಡ ಪಾಟೀಲ, ಸುಭಾಸ, ದುಂಡಪ್ಪ ಸಾವುಕಾರ, ಶರಶ್ಚಂದ್ರ ಪಾಟೀಲ, ಡಿ.ಎಸ್. ದೇಸಾಯಿ, ಜಿ.ಕೆ. ಪಾಟೀಲ, ಎ. ಜಿ. ಮಂಗಳವೇಡೆ, ಎಚ್.ಬಿ. ಕೊಣ್ಣೂರ, ಬಿ.ಎಂ. ದೇವನಾಳ, ಎಂ.ಎಂ. ಶೆಂಬೋಜಿ, ಪಾಂಡಪ್ಪ ದೊಡಮನಿ, ಈರಣ್ಣ ಕೊಪ್ಪದ, ವ್ಯವಸ್ಥಾಪಕ ನಿರ್ದೇಶಕ ಎಚ್.ಎಂ. ವೀರಭದ್ರಸ್ವಾಮಿ, ಸುತ್ತಲಿನ ಹಳ್ಳಿಗಳ ರೈತರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.