ಶನಿವಾರ, ಮೇ 15, 2021
24 °C

ನಕಲಿ ನೋಟು: ಇಬ್ಬರ ಸೆರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಳ್ಳಾರಿ: ನಕಲಿ ನೋಟುಗಳನ್ನು ನೀಡಿ ಸಾರ್ವಜನಿಕರನ್ನು ವಂಚಿಸುತ್ತಿದ್ದ ಇಬ್ಬರನ್ನು ತಾಲ್ಲೂಕಿನ ಕುಡಿತಿನಿ ಗ್ರಾಮದಲ್ಲಿ ಮಂಗಳವಾರ ಪೊಲೀಸರು ಬಂಧಿಸಿದ್ದು, ಅವರಿಂದ ರೂ 1000, 500 ಮುಖಬೆಲೆಯ ಖೋಟಾ ನೋಟುಗಳನ್ನು ವಶಪಡಿಸಿಕೊಂಡಿದ್ದಾರೆ.ಗದಗ ಮೂಲದ ವಿಠ್ಠಲ್ ಹಾಗೂ ಆಂಧ್ರಪ್ರದೇಶದ ರಾಯದುರ್ಗ ಪಟ್ಟಣದ ಅಬ್ದುಲ್ ಶುಕೂರ್ ಅವರನ್ನು ಬಂಧಿಸಲಾಗಿದೆ.

ಅಂಟು ಹಾಗೂ ಅಯೋಡಿನ್ ಟಿಂಚರ್ ಬಳಸಿ ಅಸಲಿ ನೋಟುಗಳನ್ನು ಕಪ್ಪು ಬಣ್ಣಕ್ಕೆ ತಿರುಗಿಸುತ್ತಿದ್ದ ಇವರು, ಅವುಗಳನ್ನು ಸಾರ್ವಜನಿಕರೆದುರು ರಾಸಾಯನಿಕ ಉಪಯೋಗಿಸಿ ತೊಳೆದು, ಅಂಥವೇ ಕಪ್ಪು ಬಣ್ಣದ ಅನೇಕ ನೋಟುಗಳು ತಮ್ಮ ಬಳಿಯಿವೆ ಎಂದು ತಿಳಿಸಿ, ಅವುಗಳ ಮುಖಬೆಲೆಯ ಕಡಿಮೆ ದರಕ್ಕೆ ಮಾರಾಟ ಮಾಡಿ ಸಾರ್ವಜನಿಕರನ್ನು ವಂಚಿಸುತ್ತಿದ್ದರು.ಕುಡುತಿನಿ ಗ್ರಾಮದಲ್ಲಿ ಸಾರ್ವಜನಿಕರನ್ನು ವಂಚಿಸುತ್ತಿದ್ದ ಸಂದರ್ಭ ಪೊಲೀಸರು ಬೀಸಿದ ಬಲೆಗೆ ಬಿದ್ದಿರುವ ಇವರು, ಕಳೆದ 15 ವರ್ಷಗಳಿಂದ ಇದೇ ಕೆಲಸ ಮಾಡುತ್ತ ಅನೇಕರನ್ನು ವಂಚಿಸಿದ್ದಾಗಿ ಒಪ್ಪಿಕೊಂಡಿದ್ದಾರೆ.ಇವರು ಕುಡುತಿನಿಯಲ್ಲಿ ಪ್ರಾತ್ಯಕ್ಷಿಕೆ ನೀಡುತ್ತಿದ್ದ ಸಂದರ್ಭವೇ  ಬಂಧಿಸಲಾಗಿದೆ ಎಂದು ಮಂಗಳವಾರ ತಮ್ಮ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಚಂದ್ರಗುಪ್ತ ತಿಳಿಸಿದರು.

ರೂ 500 ಮುಖಬೆಲೆಯ 31 ಖೋಟಾ ನೋಟುಗಳು, ರೂ 1000 ಮುಖಬೆಲೆಯ 4 ಖೋಟಾ ನೋಟು ವಶಪಡಿಸಿಕೊಳ್ಳಲಾಗಿದೆ.

 

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.